ವಲಸೆ ಕಾರ್ಮಿಕರು ಕಾಲ್ನಡಿಗೆಯಲ್ಲಿ ಬರಬಾರದು, ಯೋಗಿ ಆದಿತ್ಯನಾಥ್ ಅಧಿಕಾರಿಗಳಿಗೆ ಖಡಕ್ ನಿರ್ದೇಶನ

ದೆಹಲಿ ಮತ್ತು ನೋಯ್ಡಾದಿಂದ ಗುರುವಾರ ಮನೆಗೆ ಮರಳುತ್ತಿದ್ದ 170 ಕ್ಕೂ ಹೆಚ್ಚು ಕಾರ್ಮಿಕರನ್ನು ಯುಪಿ ಪೊಲೀಸರು ರಾಜ್ಯ ಗಡಿ ಬುಲಂದ್‌ಶಹರ್ ಬಳಿಯ ಹೆದ್ದಾರಿಯಲ್ಲಿ ತಡೆದಿದ್ದಾರೆ.. ಈ ಬಗ್ಗೆ ಯೋಗಿ ಆದಿತ್ಯನಾಥ್ ಅಧಿಕಾರಿಗಳಿಗೆ ಖಡಕ್ ನಿರ್ದೇಶನ ನೀಡಿದ್ದಾರೆ.

ಉತ್ತರ ಪ್ರದೇಶಕ್ಕೆ ಯಾವುದೇ ವಲಸೆ ಕಾರ್ಮಿಕರು ಕಾಲ್ನಡಿಗೆಯಲ್ಲಿ ಬರಬಾರದು ಎಂದು ಯೋಗಿ ಆದಿತ್ಯನಾಥ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಅನಾಹುತಗಳ ಹಿನ್ನೆಲೆ ಈ ರೀತಿ ಖಡಕ್ ಸೂಚನೆ ನೀಡಲಾಗಿದೆ. ವಲಸೆ ಕಾರ್ಮಿಕರು ದೇಶದಾದ್ಯಂತ ತಮ್ಮ ತಮ್ಮ ಮನೆಗಳಿಗೆ ತೆರಳಲು ಕಾಲ್ನಡಿಗೆಯಲ್ಲಿ ತೆರಳುತ್ತಿದ್ದಾರೆ.

ನವದೆಹಲಿ: ಬೇರೆ ಬೇರೆ ನಗರಗಳಿಂದ ಯಾವುದೇ ವಲಸೆ ಕಾರ್ಮಿಕರು ಕಾಲ್ನಡಿಗೆಯಲ್ಲಿ ರಾಜ್ಯಕ್ಕೆ ಮರಳಬಾರದು ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಶುಕ್ರವಾರ ತಮ್ಮ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಎಲ್ಲಾ ಕಾರ್ಮಿಕರನ್ನು ಕರೆಯಿಸಿಕೊಳ್ಳಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸಕ್ರಿಯವಾಗಿ ವ್ಯವಸ್ಥೆಗೊಳಿಸುತ್ತಿವೆ“ ಎಲ್ಲರನ್ನೂ ಸುರಕ್ಷಿತವಾಗಿ ಮರಳಿ ತರಲು” ವ್ಯವಸ್ಥೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಲಾಕ್ ಡೌನ್ ನಿಂದಾಗಿ ಬೇರೆಡೆ ಸಿಲುಕಿರುವ ಜನರಿಗಾಗಿ ಸರ್ಕಾರ ‘ಶ್ರಮಿಕ್’ ವಿಶೇಷ ರೈಲುಗಳನ್ನು ಏರ್ಪಡಿಸಿದ ನಂತರವೂ ಅನೇಕ ವಲಸೆ ಕಾರ್ಮಿಕರು ಕರೋನವೈರಸ್ ಲಾಕ್‌ಡೌನ್ ಮಧ್ಯೆ ತಮ್ಮ ತವರು ರಾಜ್ಯಗಳನ್ನು ತಲುಪಲು ಕಾಲ್ನಡಿಗೆಯಲ್ಲಿ ಸಾಗುತ್ತಿರುವುದರಿಂದ ಯುಪಿ ಮುಖ್ಯಮಂತ್ರಿಯವರ ನಿರ್ದೇಶನಗಳು ಬಂದಿವೆ.

ಇದನ್ನೂ ಓದಿ : ಔರಂಗಾಬಾದ್ ನಲ್ಲಿ ಭೀಕರ ಅಪಘಾತ : ರೈಲ್ವೆ ಹಳಿ ಮೇಲೆ ಮಲಗಿದ್ದ 17 ಮಂದಿ ವಲಸೆ ಕಾರ್ಮಿಕರ ದಾರುಣ ಸಾವು

“ಕಾಲ್ನಡಿಗೆಯಲ್ಲಿ ಪ್ರಯಾಣಿ ಯಾವುದೇ ವಲಸೆ ಕಾರ್ಮಿಕರು ರಾಜ್ಯಕ್ಕೆ ಮರಳದಂತೆ ನೋಡಿಕೊಳ್ಳಲು ಮುಖ್ಯಮಂತ್ರಿ ಅಧಿಕಾರಿಗಳಿಗೆ ನಿರ್ದಿಷ್ಟ ನಿರ್ದೇಶನಗಳನ್ನು ನೀಡಿದ್ದಾರೆ. ಅವರನ್ನು ಸುರಕ್ಷಿತವಾಗಿ ಮರಳಿ ಕರೆತರುವಲ್ಲಿ ರಾಜ್ಯ ಸರ್ಕಾರ ಸಕ್ರಿಯವಾಗಿ ತೊಡಗಿಸಿಕೊಂಡಿದೆ ಎಂದು ಅವರು ಭರವಸೆ ನೀಡಿದ್ದಾರೆ.

ಮಹಾರಾಷ್ಟ್ರದಲ್ಲಿ 17 ವಲಸೆ ಕಾರ್ಮಿಕರು ಸಾವನ್ನಪ್ಪಿದ ದುರಂತ ರೈಲು ಅಪಘಾತದ ಕೆಲವೇ ಗಂಟೆಗಳ ನಂತರ ಸಿಎಂ ಆದಿತ್ಯನಾಥ್ ಅವರ ಆದೇಶ ಬಂದಿದೆ.

Web Title : No Migrant Worker Should Return on Foot, Yogi Adityanath Directs His Officials