ವಿಸ್ಕಿ ಕದ್ದ ಪೊಲೀಸಪ್ಪ, ಪೊಲೀಸ್ ಠಾಣೆಯಲ್ಲಿದ್ದ 69 ವಿಸ್ಕಿ ಬಾಟಲ್ ಎಗರಿಸಿದ ಪೊಲೀಸ್

ಪೊಲೀಸ್ ಠಾಣೆಯಲ್ಲಿ ಸಂಗ್ರಹಿಸಲಾಗಿದ್ದ 69 ವಿಸ್ಕಿ ಬಾಟಲಿಗಳು ಕಳವು, ಕದ್ದಿದ್ದು ಅದೇ ಠಾಣೆಯ ಕಾನ್‌ಸ್ಟೆಬಲ್

ಲಾಕ್ ಡೌನ್ ಸಮಯದಲ್ಲಿ ಅಕ್ರಮ ಮದ್ಯ ಸಾಗಾಟ, ಅಕ್ರಮ ಮದ್ಯ ಮಾರಾಟದಲ್ಲಿ ದಾಳಿ ಮಾಡಿದ್ದ ಪೊಲೀಸರು ವಶಪಡಿಸಿಕೊಂಡಿದ್ದ ವಿಸ್ಕಿ ಬಾಟಲಿಗಳನ್ನು ಅದೇ ಪೊಲೀಸ್ ಠಾಣೆಯ ಕಾನ್‌ಸ್ಟೆಬಲ್ ಕಳವು ಮಾಡಿದ್ದು, ಭದ್ರ ಪಡಿಸಿದ್ದ ಕೋಣೆಯಿಂದ ಮದ್ಯದ ಬಾಟಲಿಗಳನ್ನು ಕದ್ದು ಇದೀಗ ಸಿಕ್ಕಿಬಿದ್ದಿದ್ದಾರೆ. ಪೊಲೀಸ್ ಠಾಣೆಯಲ್ಲಿದ್ದ 69 ವಿಸ್ಕಿ ಬಾಟಲ್ ಎಗರಿಸಿದ ಪೊಲೀಸ್ ಕಾರ್ಯಕ್ಕೆ.. ಬೇಲಿಯೇ ಎದ್ದು ಹೊಲ ಮೇದಂತಾಗಿದೆ.

ಹೈದರಾಬಾದ್ : ನಿರ್ಬಂಧಗಳ ಹೊರತಾಗಿಯೂ ಲಾಕ್ ಡೌನ್ ಸಮಯದಲ್ಲಿ ವ್ಯಾಪಾರಕ್ಕಾಗಿ ತೆರೆದಿದ್ದ ಮದ್ಯದಂಗಡಿ ಮಾಲೀಕರಿಂದ ಪೊಲೀಸರು ವಿಸ್ಕಿ ಬಾಟಲಿಗಳನ್ನು ವಶಪಡಿಸಿಕೊಂಡಿದ್ದರು. ತೆಲಂಗಾಣ ಟುಡೆ ವರದಿಯ ಪ್ರಕಾರ, ನಂತರ ನ್ಯಾಯಾಲಯದ ಮುಂದೆ ಹಾಜರುಪಡಿಸಿ, ನಂತರ ಬಾಟಲಿಗಳನ್ನು ಕೋಣೆಯಲ್ಲಿ ಇರಿಸಲು ಪೊಲೀಸ್ ಕಾನ್‌ಸ್ಟೆಬಲ್‌ಗೆ ಹಸ್ತಾಂತರಿಸಲಾಯಿತು.

ಆದರೆ ಮೇ 4 ರಂದು 69 ಬಾಟಲಿಗಳು ಇದ್ದಕ್ಕಿಂದಂತೆ ಕಾಣೆಯಾಗಿದ್ದವು. ಕಳ್ಳತನದ ಬಗ್ಗೆ ತನಿಖೆ ನಡೆಸುತ್ತಿರುವಾಗ, ಹಿರಿಯ ಅಧಿಕಾರಿಗಳು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ, ಇದು ಒಳಗಿನವರ ಕೆಲಸ ಎಂದು ಶಂಕೆ ಪಟ್ಟಿದ್ದರು.

ಇದನ್ನೂ ಓದಿ : ಔರಂಗಾಬಾದ್ ನಲ್ಲಿ ಭೀಕರ ಅಪಘಾತ : ರೈಲ್ವೆ ಹಳಿ ಮೇಲೆ ಮಲಗಿದ್ದ 17 ಮಂದಿ ವಲಸೆ ಕಾರ್ಮಿಕರ ದಾರುಣ ಸಾವು

ನಂತರ ತನಿಖೆ ನಡೆಸಿದಾಗ ಕೋಣೆಯಿಂದ ಮದ್ಯದ ಬಾಟಲಿಗಳನ್ನು ಕದ್ದವರು ಕಾನ್‌ಸ್ಟೆಬಲ್ ಅರುಣ್ ಮತ್ತು ಚಾಲಕ ರಾಣಾ ಎಂದು ತಿಳಿದುಬಂದಿದೆ.

ಘಟನೆಯ ನಂತರ, ಕಾನ್‌ಸ್ಟೆಬಲ್ ಮತ್ತು ತಾತ್ಕಾಲಿಕ ಉದ್ಯೋಗಿ ಚಾಲಕ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ತೆಲಂಗಾಣ ಟುಡೆ ತಿಳಿಸಿದೆ. ಇಬ್ಬರು ಆರೋಪಿಗಳನ್ನು ಈಗ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ..

Web Title : Telangana Cop Steals 69 Seized Whiskey Bottles