ಇಟ್ಕೊಂಡೋನ್ ಜೊತೆ ಸೇರಿ ಕಟ್ಕೊಂಡೋನ್ ಮರ್ಡರ್

Wife Killed husband with the help of Lover

ಇಟ್ಕೊಂಡೋನ್ ಜೊತೆ ಸೇರಿ ಕಟ್ಕೊಂಡೋನ್ ಮರ್ಡರ್

  • ಅನೈತಿಕ ಸಂಬಂಧಕ್ಕೆ ಪತಿಯ ಕೊಲೆ .
  • ಪತ್ನಿ ಸೇರಿ 9 ಮಂದಿ ಅರೆಸ್ಟ್ .
  • ತಲೆ ಮರಿಸಿಕೊಂಡಿರುವ ಇಬ್ಬರು ಮಹಿಳೆಯರು.

ರಾಷ್ಟ್ರೀಯಹೈದರಾಬಾದ್ : ತನ್ನ ಅಕ್ರಮ ಸಂಬಂಧಕ್ಕೆ ಅಡ್ಡಿ ಆಗಬಹುದು ಎಂದು ತನ್ನ ಪತಿಯನ್ನೇ ಕೊಂದ ಪ್ರಕರಣವನ್ನು ರಾಜಮಹೇಂದ್ರವರಂ  ಪೊಲೀಸರು ಭೇದಿಸಿದ್ದಾರೆ.  ಈ ಬಗ್ಗೆ ಮಾಧ್ಯಯಮಗಳಿಗೆ ಡಿಎಸ್ಪಿ ಯು.ರಾಜಾರಾವ್ ಹೇಳಿಕೆ ನೀಡಿದ್ದಾರೆ.

ಇದೆ ತಿಂಗಳು 4 ರಂದು ಕೆಲ ಯುವಕರು ವೆಂಕಟರಮಣ (35) ಎಂಬಾತನನ್ನು ಕೊಂದು ಮೃತ ದೇಹವನ್ನು ರಾಜಮಹೇಂದ್ರವರಂ ಗ್ರಾಮೀಣ ಭಾಗದಲ್ಲಿ ಎಸೆದು ಹೋಗಿದ್ದರು. ಈ ಬಗ್ಗೆ ಮರುದಿನ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು.

ಇಷ್ಟಕ್ಕೂ ನಡೆದದ್ದೇನು ?

ಅದೇ ಗ್ರಾಮದ ನರ್ಸರಿಯಲ್ಲಿ ಗುಮಾಸ್ತನಾಗಿ ಕೆಲಸ ಮಾಡುತ್ತಿದ್ದ ಸತೀಶ್ , ಮೃತ ವೆಂಕಟರಮಣನ ಹೆಂಡತಿ ಜ್ಯೋತಿ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದನು. ಅದ್ಯಾಗೋ ಈ ವಿಷಯ ಜ್ಯೋತಿ ಕುಟುಂಬಕ್ಕೆ ತಿಳಿದು , ಇಬ್ಬರಿಗೂ ಚಳಿ ಬಿಡಿಸಿದ್ದಾರೆ. ಅಲ್ಲದೆ ಇವರಿಬ್ಬರು ಸೇರದಂತೆ ಜಾಗ್ರತೆವಹಿಸಿದ್ದಾರೆ.

ಜ್ಯೋತಿಯನ್ನು ತನಗೆ ಸಿಗದಂತೆ ಮಾಡಿದ ಜ್ಯೋತಿ ಕುಟುಂಬ ಮತ್ತು ಜ್ಯೋತಿ ಪತಿ ವೆಂಕಟರಮಣನ ಮೇಲೆ ಕಕ್ಷ ಬೆಳೆಸಿಕೊಂಡ ಸತೀಶ್ ಅವನ ಹತ್ಯೆಗೆ ನಿರ್ಧರಿಸುತ್ತಾನೆ. ಈ ಬಗ್ಗೆ ಜ್ಯೋತಿಗೆ ತಿಳಿಸಿದಾಗ ಆಕೆ ಕೂಡ ಸಮ್ಮತಿಸುತ್ತಾಳೆ.

ಇದಕ್ಕಾಗಿ ದುಡ್ಡಿನ ಆಸೆ ತೋರಿ ತನ್ನ ಪರಿಚಯಸ್ಥ ಮಹಿಳೆ ನಾಗದೇವಿಯ ಸಹಾಯ ಪಡೆಯುತ್ತಾನೆ.ಇಟ್ಕೊಂಡೋನ್ ಜೊತೆ ಸೇರಿ ಕಟ್ಕೊಂಡೋನ್ ಮರ್ಡರ್-its Kannada

ಬೇರೆ ಬೇರೆ ಮೊಬೈಲ್ ನಂಬರ್ ನಿಂದ ನಾಗದೇವಿ ವೆಂಕಟರಮಣನಿಗೆ ಕರೆ ಮಾಡಿ ” ನೀನಂದ್ರೆ ನಂಗೆ ಇಷ್ಟ , ನಿನ್ನನ್ನು ನೋಡ ಬೇಕು , ನಾನು ಕಾರು ಕಳಿಸುತ್ತೇನೆ, ಡ್ರೈವರ್ ನಾನಿರುವ ಸ್ಥಳಕ್ಕೆ ನಿನ್ನನ್ನು ಕರೆದುಕೊಂಡು ಬರುತ್ತಾನೆ. ಎಂದು ಪುಸಲಾಯಿಸಿದ್ದಾಳೆ.

ಇದನ್ನೆಲ್ಲಾ ನಂಬಿದ ವೆಂಕಟರಮಣ ಅವಳು ತಿಳಿಸಿದ ಜಾಗಕ್ಕೆ ಬಂಡ ಕೂಡಲೇ , ಅದಾಗಲೇ ಸತೀಶ್ ರೆಡಿ ಮಾಡಿದ್ದ 8 ವ್ಯಕ್ತಿಗಳು , ದೊಣ್ಣೆ , ಬೀರ್ ಬಾಟಲ್ , ಚೈನ್ ನಲ್ಲಿ ಮನ ಬಂದಂತೆ ಥಳಿಸಿದ್ದಾರೆ.

ತಂಗಿನ ಮರಕ್ಕೆ ಕಟ್ಟಿ ರಾತ್ರಿ 12.30 ರ ತನಕ ಮನಬಂದಂತೆ ಥಳಿಸಿದ್ದಾರೆ , ಕೊನೆಗೆ ಸತೀಶ್ ಚೂಪಾದ ಚಾಕುವಿನಿಂದ ವೆಂಕಟರಮಣನ ಕುತ್ತಿಗೆ ಕುಯ್ದಿದ್ದಾನೆ. ನಂತರ ತೋಟದ ಆಚೆ ಮೃತದೇಹವನ್ನು ಮುಚ್ಚಿಟ್ಟು , ಬೆಳಿಗ್ಗೆ ಅಲ್ಲೇ ಗುಂಡಿ ತೋಡಿ ಹೂಳಲು ನಿರ್ಧರಿಸುತ್ತಾರೆ.

ಆದರೆ ಅಷ್ಟರಲ್ಲೇ ತೋಟದ ಮಾಲೀಕ ದುರ್ಗಾ ಪ್ರಸಾದ್ ಗೆ ಅನುಮಾನ ಬಂದು ಸತೀಶ್ ನನ್ನ ತರಾಟೆ ತೆಗೆದುಕೊಂಡಾಗ ಆತ ನಡೆದ ವಿಷಯವನ್ನು ಬಾಯ್ಬಿಡುತ್ತಾನೆ, ಮತ್ತು ಅಲ್ಲಿಂದ ಪರಾರಿಯಾಗುತ್ತಾನೆ.

ಕೊಲೆಗೆ ನಾಲ್ವರು ಬಾಲಾಪರಾಧಿಗಳು ಶಾಮಿಲ್ 

ಕೊಲೆಗೆ ಸಂಬಂಧಿಸಿದಂತೆ 9 ಮಂದಿಯನ್ನು ಬಂಧಿಸಿರುವ ಪೊಲೀಸರು , ಕೊಲೆಯಲ್ಲಿ 4 ಬಾಲಾಪರಾಧಿಗಳೂ ಕೂಡ ಶಾಮೀಲಾಗಿದ್ದಾರೆ ಎಂದು ತಿಳಿಸಿದ್ದಾರೆ . ಹತ್ಯೆಗೆ ಬಳಸಿದ ಕತ್ತಿ , ಮೂರೂ ಮೊಬೈಲ್ , ಎರಡು ಬೈಕ್ ಇತರ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಕೊಲೆಯ ಮುಖ್ಯ ಆರೋಪಿಗಳಾದ ಪತ್ನಿ ಜ್ಯೋತಿ ಮತ್ತು ನಾಗಲಕ್ಷ್ಮಿ ತಲೆಮರೆಸಿಕೊಂಡಿದ್ದಾರೆ. ಪೊಲೀಸರು ಅವರ ಬಂಧನಕ್ಕಾಗಿ ಬಲೇ ಬೀಸಿದ್ದಾರೆ.////

WebTitle : ಇಟ್ಕೊಂಡೋನ್ ಜೊತೆ ಸೇರಿ ಕಟ್ಕೊಂಡೋನ್ ಮರ್ಡರ್ – Wife Killed husband with the help of Lover

>>> ಕ್ಲಿಕ್ಕಿಸಿ ಕನ್ನಡ ನ್ಯೂಸ್  : National News KannadaNational News LatestKannada Crime News