300 ವರ್ಷಗಳ ಇತಿಹಾಸ, ಈ ಹಳ್ಳಿಯಲ್ಲಿ ಹಾವುಗಳು ಕಚ್ಚುವುದೇ ಇಲ್ಲ

The history of 300 years, there is no death of a snake bite

300 ವರ್ಷಗಳ ಇತಿಹಾಸ , ಈ ಹಳ್ಳಿಯಲ್ಲಿ ಹಾವುಗಳು ಕಚ್ಚುವುದೇ ಇಲ್ಲ

  • ಮನುಷ್ಯರು ಹಾಗೂ ಸರ್ಪಗಳು ಈ ಹಳ್ಳಿಯಲ್ಲಿ ಸ್ನೇಹದಿಂದ ಇರುತ್ತಾರೆ.
  • ಇಲ್ಲಿ ಯಾರೂ ಹಾವುಗಳಿಗೆ ತೊಂದರೆ ನೀಡಲ್ಲ, ಹಾಗೂ ಹಾವುಗಳೂ ಅಷ್ಟೇ,
  • ಮನೆಯಲ್ಲಿ ಓಡಾಡುತ್ತವೆ ಭಯಾನಕ ಹಾವುಗಳು.

ಕನ್ನಡ ಕಾರ್ನರ್ : ಈ ಹಳ್ಳಿಯಲ್ಲಿ ಯಾರೋಬ್ಬರೂ ಹಾವು ಖಡಿತದಿಂದ ಸತ್ತಿಲ್ಲ , ಅಷ್ಟಕ್ಕೂ ಇಲ್ಲಿ ಹಾವುಗಳು ಕಚ್ಚುವುದೇ ಇಲ್ಲ . ಹಾವಿನ ಕಡಿತದಿಂದ ಯಾರ ಸಾವು ಸಂಭವಿಸಲಿಲ್ಲ ಎಂಬುದಕ್ಕೆ 300 ವರ್ಷಗಳ ಇತಿಹಾಸ ಸಾಕ್ಷಿಯಾಗಿದೆ.

ಹಾವು ನೋಡಿದಾಗ, ಭಯಭೀತರಾಗುವ ನಾವು ಅವುಗಳಿಗೆ ಹಿಂಸೆ ನೀಡುತ್ತೇವೆ, ಇಲ್ಲವೇ ನಾವೇ ಅಲ್ಲಿಂದ ಕಾಲ್ಕಿಳುತ್ತೇವೆ, ಆದರೆ ಈ ಹಳ್ಳಿಯಲ್ಲಿ ಹಾವುಗಳು ಮಾನವರಿಗೆಹೆದರುವುದಿಲ್ಲ ಮತ್ತು ಯಾವುದೇ ವ್ಯಕ್ತಿ ಹಾವುಗಳಿಗೆ ಹೆದುರುವುದಿಲ್ಲ.

ಇಷ್ಟಕ್ಕೂ ಇಂತಹ ಅಪರೂಪದ ಹಳ್ಳಿ ಇರುವುದು ಹರಿಯಾಣದಲ್ಲಿ, ಹರಿಯಾಣದ ರೋಹ್ಟಕ್ ಗ್ರಾಮದಲ್ಲಿ, ಹಾವುಗಳು ಮತ್ತು ಮಾನವರು ಪರಸ್ಪರ ಸ್ನೇಹಿತರಾಗಿ ಬದುಕುತ್ತಾರೆ. ಹಾವು ಇಲ್ಲಿ ಕಚ್ಚುವುದಿಲ್ಲ ಅಥವಾ ಇಲ್ಲಿ ಹಾವಿನ ಕಡಿತದಿಂದಾದ ಸಾವು ಇಲ್ಲ.

ಇದಕ್ಕೆ 300 ವರ್ಷಗಳ ಹಿಂದಿನ ಇತಿಹಾಸವಿದೆ , ಅಂದು ಗ್ರಾಮದ ಹಿರಿಯ ನೀಡಿದ ಆದೇಶ ಇಂದಿಗೂ ಫಾಲಿಸಿಕೊಂಡು ಬರಲಾಗುತ್ತದೆ. ಆ ಕಥೆ ಹೇಳ್ತಿನಿ ಕೇಳಿ . . . .

ಅಂದು ಮಗುವಿನ ಜೊತೆಗೆ ಮಹಿಳೆಯೊಬ್ಬಳು ಒಂದು ಹಾವಿಗೂ ಜನ್ಮ ಕೊಟ್ಟಳಂತೆ , ತನ್ನ ಮಗುವಿನ ಜೊತೆಗೆ ಹಾವನ್ನೂ ಪೋಷಣೆ ಮಾಡಿ ಮಗುವಿನಂತೆಯೇ ನೋಡಿಕೊಂಡಿದ್ದಾಳೆ. ಸ್ವಲ್ಪ ದಿನದ ನಂತರ ಮಗು ಮತ್ತು ಹಾವನ್ನು ಮನೆಯಲ್ಲೇ ಬಿಟ್ಟು ಆಕೆ ತೋಟದ ಕೆಲಸಕ್ಕೆ ಹೋದಳಂತೆ.300 ವರ್ಷಗಳ ಇತಿಹಾಸ, ಈ ಹಳ್ಳಿಯಲ್ಲಿ ಹಾವುಗಳು ಕಚ್ಚುವುದೇ ಇಲ್ಲ-its Kannada

ಮಹಿಳೆಯನ್ನು ಹುಡುಕಿ ಬಂದ ಅವಳ ಸಹೋದರ ಮನೆಯಲ್ಲಿ ಮಗುವಿನ ಜೊತೆ ಮಲಗಿದ್ದ ಹಾವನ್ನು ಕಂಡು ಕೋಪದಿಂದ ಕೊಂದು ಬಿಟ್ಟನಂತೆ, ಹಾವು ಸತ್ತ ಸ್ವಲ್ಪವತ್ತಿನಲ್ಲಿಯೇ ಮಗುವೂ ಕೂಡ ಮರಣವೊಂದಿತಂತೆ.

ಮಗು ಮತ್ತು ಹಾವು ಸತ್ತ ವಿಷಯ ತಿಳಿದ ಮಹಿಳೆ ಸಹೋದರನ ಮೇಲೆ ಕೂಗಾಡುತ್ತಾಳೆ , ಮನೆಯಿಂದ ಹೊರಗಟ್ಟುತ್ತಾಳೆ , ಒಂದು ಲೋಟ ನೀರು ಕೊಡುವುದಿಲ್ಲ ಎಂದು ಹಠಹಿಡಿಯುತ್ತಾಳೆ.

ಅಂದಿನ ಆ ಘಟನೆಯ ದಿನವನ್ನೇ ಇಂದಿಗೂ ಆ ಬುಡಕಟ್ಟಿನ ಜನ ಆಚರಿಸುತ್ತಾರೆ , ಇಂದಿಗೂ ಆ ದಿನ ಯಾರೂ ಅಥಿತಿಗಳು ಬರುವ ಹಾಗೆ ಇಲ್ಲ , ಅಷ್ಟೇಕೆ ಒಬ್ಬ ಭಿಕ್ಷುಕನನ್ನು ಆ ದಿನ ಈ ಹಳ್ಳಿಗೆ ಸೇರಿಸುವುದಿಲ್ಲ.

ಹಳ್ಳಿಯಲ್ಲಿರುವ ನಾಗ ದೇವನಿಗೆ ಆ ವಿಶೇಷ ದಿನದಂದು ಪೂಜಿಸಿ ನೆನೆಯುತ್ತಾರೆ. ಕಳೆದ 300 ವರ್ಷಗಳ ಹಿಂದೆ ನಡೆದ ಘಟನೆ ನಂತರ ಇಂದಿಗೂ ಹಾವಿಗೆ ಇಲ್ಲಿ ತೊಂದರೆ ಕೊಡುವವರು ಇಲ್ಲ . ಇಲ್ಲಿ ಹಾವಿಗೆ ಪೂರ್ತಿ ಸ್ವಾತಂತ್ರ್ಯ ನೀಡಲಾಗಿದೆ.

ಮಕ್ಕಳು ಆಟಿಕೆಗಳಂತೆ ಹಾವುಗಳ ಜೊತೆ ಆಟ ಆಡುತ್ತಾರೆ. ಹಾವುಗಳು ಮನೆ , ಕೋಣೆ , ಅಡುಗೆ ಮನೆ ಎಲ್ಲೆಂದರಲ್ಲಿ ಆರಾಮಾಗಿ ಅಡ್ಡಾಡುತ್ತವೆ. /////

ಒಂದ್ನಿಮಿಷ ಪ್ಲೀಸ್ : ಮಾಹಿತಿ ಇಷ್ಟವಾಗಿದ್ದರೆ ದಯವಿಟ್ಟು ನಮ್ಮನ್ನು ಫಾಲೋ ಮಾಡಿ , ಹಾಗೂ ನಿಮ್ಮ ಸ್ನೇಹಿತರಲ್ಲಿ ಈ ಮಾಹಿತಿ ಶೇರ್ ಮಾಡಿ , ಇನ್ನಷ್ಟು ಇದೆ ರೀತಿಯ ಮಾಹಿತಿ ಒದಗಿಸಲು ನಮ್ಮನ್ನು ಬೆಂಬಲಿಸಿ…

WebTitle : 300 ವರ್ಷಗಳ ಇತಿಹಾಸ, ಈ ಹಳ್ಳಿಯಲ್ಲಿ ಹಾವುಗಳು ಕಚ್ಚುವುದೇ ಇಲ್ಲ-The history of 300 years, there is no death of a snake bite

>>> ಕ್ಲಿಕ್ಕಿಸಿ ಕನ್ನಡ ನ್ಯೂಸ್  : Kannada CornerLatest Kannada News