ಲಾಕ್‌ಡೌನ್ ನಂತರ ಕಾರ್ಖಾನೆಗಳ ಮರುಪ್ರಾರಂಭ, ಕೇಂದ್ರದಿಂದ ಮಾರ್ಗಸೂಚಿ ಪ್ರಕಟ

ಲಾಕ್‌ಡೌನ್ ನಂತರ ಉತ್ಪಾದನಾ ಕೈಗಾರಿಕೆ ಮರು ಆರಂಭಕ್ಕೆ ಗೃಹ ಸಚಿವಾಲಯ ಮಾರ್ಗಸೂಚಿ ಪ್ರಕಟ ಮಾಡಿದೆ, ಕೈಗಾರಿಕೆಗಳನ್ನು ಮರು ಆರಂಭಿಸುವುದಕ್ಕೆ ಸಂಬಂಧಪಟ್ಟಂತೆ ಮಾರ್ಗಸೂಚಿಗಳನ್ನು ಹೊರಡಿಸಿದೆ.

ಕೊರೊನಾವೈರಸ್ COVID-19 ಲಾಕ್‌ಡೌನ್ ಅವಧಿ ಮುಗಿದ ನಂತರ ಉತ್ಪಾದನೆ ಮತ್ತು ರಾಸಾಯನಿಕ ಕೈಗಾರಿಕೆಗಳನ್ನು ಪುನರಾರಂಭಿಸುವ ಕುರಿತು ಗೃಹ ಸಚಿವಾಲಯ (ಎಂಎಚ್‌ಎ) ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎನ್‌ಡಿಎಂಎ) ಭಾನುವಾರ (ಮೇ 10) ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

ನವದೆಹಲಿ ( Kannada News ) : ಲಾಕ್‌ಡೌನ್ ನಂತರ ಉತ್ಪಾದನಾ ಕೈಗಾರಿಕೆ ಮರು ಆರಂಭಕ್ಕೆ ಗೃಹ ಸಚಿವಾಲಯ ಮಾರ್ಗಸೂಚಿ ಪ್ರಕಟಗೊಳಿಸಿದ್ದು, ಕೈಗಾರಿಕೆಗಳು ಮರು ಆರಂಭಿಸುವಾಗ ಮೊದಲ ವಾರವನ್ನು ಪ್ರಯೋಗ ಹಂತದ ಸಮಯ ಎಂದು ಪರಿಗಣಿಸಿ, ಎಲ್ಲಾ ನಿಯಮ, ಷರತ್ತುಗಳನ್ನು ಪಾಲಿಸಿಕೊಂಡು ಮುಂಜಾಗ್ರತೆ ಕ್ರಮ ಕೈಗೊಂಡು ಕೆಲಸ ಆರಂಭಿಸಿ, ಈ ಸಮಯದಲ್ಲಿ ಗರಿಷ್ಠ ಪ್ರಮಾಣದಲ್ಲಿ ಉತ್ಪಾದನೆ ಮಾಡಬೇಕೆಂದು ಉದ್ದೇಶ ಇಟ್ಟುಕೊಳ್ಳಬೇಡಿ ಎಂದು ಗೃಹ ಸಚಿವಾಲಯ ತಿಳಿಸಿದೆ.

ಕೊರೊನಾವೈರಸ್ COVID-19 ಲಾಕ್‌ಡೌನ್ ಅವಧಿ ಮುಗಿದ ನಂತರ ಉತ್ಪಾದನೆ ಮತ್ತು ರಾಸಾಯನಿಕ ಕೈಗಾರಿಕೆಗಳನ್ನು ಪುನರಾರಂಭಿಸುವ ಕುರಿತು ಗೃಹ ಸಚಿವಾಲಯ (ಎಂಎಚ್‌ಎ) ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎನ್‌ಡಿಎಂಎ) ಭಾನುವಾರ (ಮೇ 10) ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

ರಾಷ್ಟ್ರವ್ಯಾಪಿ ಲಾಕ್‌ಡೌನ್ ಮೇ 17 ರಂದು ಕೊನೆಗೊಳ್ಳಲಿದೆ , ಈ ಹಿನ್ನೆಲೆಯಲ್ಲಿ ಕೆಲವು ಷರತ್ತುಗಳೊಂದಿಗೆ ಹಾಟ್‌ಸ್ಪಾಟ್ ಅಲ್ಲದ ಪ್ರದೇಶಗಳಲ್ಲಿ ಕೈಗಾರಿಕೆಗಳನ್ನು ಪುನಃ ತೆರೆಯಲು ಕೇಂದ್ರವು ಅನುಮತಿ ನೀಡಿದೆ.

“ಹಲವಾರು ವಾರಗಳ ಲಾಕ್‌ಡೌನ್ ಮತ್ತು ಲಾಕ್‌ಡೌನ್ ಅವಧಿಯಲ್ಲಿ ಕೈಗಾರಿಕಾ ಘಟಕಗಳನ್ನು ಮುಚ್ಚಿರುವ ಕಾರಣದಿಂದಾಗಿ ಸಮಸ್ಯೆಗಳು ಉದ್ಭವಿಸಬಹುದು, ಎಂದು ತಿಳಿಸಲಾಗಿದೆ. ಎಚ್ಚರಿಕೆವಹಿಸಲು ನಿರ್ದೇಶನ ನೀಡಲಾಗಿದೆ.

ಮೇ 7 ರಂದು ಆಂಧ್ರಪ್ರದೇಶದ ವಿಶಾಖಪಟ್ಟಣಂನ ಎಲ್ಜಿ ಪಾಲಿಮರ್ಸ್ ಸ್ಥಾವರದಲ್ಲಿ ಅನಿಲ ಸೋರಿಕೆಯಿಂದಾಗಿ 11 ಜನರು ಸಾವನ್ನಪ್ಪಿದ ನಂತರ ಹೊಸ ಮಾರ್ಗಸೂಚಿಗಳನ್ನು ಹೊರಡಿಸಲು ಕೇಂದ್ರ ಆಡಳಿತ ನಿರ್ಧರಿಸಿದೆ.

Web Title : Centre issues guidelines for restarting factories, after Lockdown