ಕೊರೊನಾ ವಾರಿಯರ್ಸ್ ಗೆ ಚಿತ್ರ ಬಿಡಿಸಿ ಗೌರವ ಸಲ್ಲಿಸಿದ ಐಶ್ವರ್ಯ ರೈ ಮಗಳು

ಕೋರೋನ ಬಿಕ್ಕಟ್ಟಿನ ಸಂದರ್ಭದಲ್ಲಿ ತಮ್ಮ ಕುಟುಂಬವನ್ನು ಬಿಟ್ಟು ದೇಶಕ್ಕಾಗಿ ಹೋರಾಡುತ್ತಿರುವ ಕೋರೋನ ಯೋಧರಿಗೆ ಬಾಲಿವುಡ್ ಬಾದ್ ಷಾ ಮೊಮ್ಮಗಳಿಂದ ಗೌರವಾನ್ವಿತ ಉಡುಗೊರೆ.

ಹೌದು ನಮ್ಮ ಬಾಲಿವುಡ್ ನ ಹೆಮ್ಮೆಯ ಹಿರಿಯ ನಟರಾದ ಅಮಿತಾ ಬಚ್ಚನ್ ಅವರ ಮೊಮ್ಮಗಳು ಹಾಗೂ ಸ್ಟಾರ್ ನಟರಾದ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ಬಚ್ಚನ್ ಅವರ ಪುತ್ರಿ ಆರಾಧ್ಯ ಅವರು ನಮ್ಮ ಕೊರೊನ ಯೋಧರಿಗೆ ತಮ್ಮ ಪುಟ್ಟ ಕೈಗಳಿಂದ ಮುದ್ದಾದ ಚಿತ್ರವನ್ನು ಬಿಡಿಸಿ ಜಾಲತಾಣದಲ್ಲಿ ಎಲ್ಲರ ಗಮನ ಸೆಳೆದಿದ್ದಾರೆ.

ಈ ಮುದ್ದಾದ ಎಂಟು ವರ್ಷದ ಕಂದ ಇತ್ತೀಚಿಗೆ ಒಂದು ಚಿತ್ರವನ್ನು ಬಿಡಿಸಿದ್ದಾರೆ ಅದರಲ್ಲಿ ಸಾಮಾಜಿಕ ಅಂತರ ಮತ್ತು ಲಾಕ್ ಡೌನ್ ಬಗ್ಗೆ ಚಿತ್ರದ ಮೂಲಕ ಹೇಳಿದ್ದಾರೆ. ಆ ಚಿತ್ರದಲ್ಲಿ ಎರಡು ಕೈಜೋಡಿಸಿರುವ ನಮಸ್ತೆ ಬರೆದು ಅಂತರದ ಬಗ್ಗೆ ಜಾಗೃತಿ ಮೂಡಿಸಿದ್ದಾರೆ ಹಾಗೂ ಮನೆಯಲ್ಲಿ ಸುರಕ್ಷಿತವಾಗಿರಿ ಅನಗತ್ಯವಾಗಿ ಹೊರಗೆ ಬಾರದಿರಿ ಎನ್ನುವ ಸಂದೇಶವನ್ನು ನೀಡಿದ್ದಾರೆ ಈ ಪುಟ್ಟ ಪೋರಿ.

ಚಿತ್ರದಲ್ಲಿ ವೈದ್ಯರಿಗೆ, ನರ್ಸ್ ಗಳಿಗೆ, ಪೊಲೀಸರಿಗೆ, ಪೌರಕಾರ್ಮಿಕರಿಗೆ, ಆಶಾ ಕಾರ್ಯಕರ್ತರಿಗೆ ಹಾಗೂ ಸ್ವಯಂ ಸೇವಕರಿಗೆ ಧನ್ಯವಾದಗಳನ್ನು ಚಿತ್ರದಲ್ಲಿ ಹೇಳಿದ್ದಾರೆ. ಇದನ್ನು ಐಶ್ವರ್ಯ ರೈ ಬಚ್ಚನ್ ಅವರು ತಮ್ಮ ಇನ್ಸ್ಟಾಗ್ರಾಂ ಅಕೌಂಟ್ ನಲ್ಲಿ ತಮ್ಮ ಮುದ್ದು ಮಗಳ ದೇಶಪ್ರೇಮವನ್ನು ಜನರಲ್ಲಿ ಹಂಚಿಕೊಂಡಿದ್ದಾರೆ.

ದಿವ್ಯಶ್ರೀ. ವಿ
ಬೆಂಗಳೂರು