ಕಿಚ್ಚನಿಗೆ ಕನ್ನಡದ ಪಾಠ, ಟ್ವೀಟ್ ತಿದ್ದಿಸಿದ ಡಿ ಬಾಸ್ ಅಭಿಮಾನಿಗಳು, ಕಿಚ್ಚ-ದಚ್ಚು ಫ್ಯಾನ್ಸ್ ನಡುವೆ​ ವಾರ್

ದರ್ಶನ್ ಮತ್ತು ಸುದೀಪ್ ಅಭಿಮಾನಿಗಳ ವಾರ್ ಗೆ ಮತ್ತೊಂದು ಕಾರಣ, ಟ್ವೀಟ್ ತಿದ್ದಿಸಿದ ಡಿ ಬಾಸ್ ಅಭಿಮಾನಿಗಳು

ನಿತ್ಯೋತ್ಸವ ಕವಿ ಕೆ. ಎಸ್. ನಿಸ್ಸಾರ್ ಅಹ್ಮದ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದ ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಸಂತಾಪ ವ್ಯಕ್ತ ಪಡಿಸಿ, ಟ್ವೀಟ್ ಮಾಡಿದ್ದರು, ಆ ಟ್ವೀಟ್ ನಲ್ಲಿ ಕನ್ನಡದ ಪದ ತಪ್ಪಾಗಿದ್ದು, ಡಿ ಬಾಸ್ ಅಭಿಮಾನಿಗಳು ಕಿಚಾಯಿಸಿದ್ದರು, ನಂತರ ಸುದೀಪ್ ಟ್ವೀಟ್ ಬದಲಿಸಿದ್ದರು.

ಸ್ಯಾಂಡಲ್ ವುಡ್ :  ಭಾನುವಾರ ಕನ್ನಡ ಸಾಹಿತ್ಯ ಲೋಕದ ಹಿರಿಯ ಕವಿ, ನಿತ್ಯೋತ್ಸವ ಕವಿ ಕೆ. ಎಸ್. ನಿಸ್ಸಾರ್ ಅಹ್ಮದ್ ನಿಧನರಾದರು. ಈ ವೇಳೆ ಅಭಿನಯ ಚಕ್ರವರ್ತಿ ಕವಿಯ ನಿತ್ಯೋತ್ಸವ ಸಾಲುಗಳನ್ನು ಉಲ್ಲೇಖಿಸಿ ಸಂತಾಪ ಸೂಚಿಸಿ ಟ್ವೀಟ್‌ ಮಾಡಿದ್ದರು. ಈ ವೇಳೆ ಸ್ಪೆಲ್ಲಿಂಗ್ ಮಿಸ್ಟೇಕ್ ಆಗಿತ್ತು.

ಅಷ್ಟು ಸಾಕಲ್ವೇ… ಡಿ ಬಾಸ್ ಅಭಿಮಾನಿಗಳು ಆ ಟ್ವೀಟ್ ತಿದ್ದಿಸಿದ್ದಾರೆ, ಸಧ್ಯ ಇದೆ ಈಗ ಕಿಚ್ಚ-ದಚ್ಚು ಫ್ಯಾನ್ಸ್ ನಡುವೆ​  ಸಾಮಾಜಿಕ ಜಾಲತಾಣದಲ್ಲಿ ವಾರ್ ಗೆ ಕಾರಣವಾಗಿದೆ.

ಕಿಚ್ಚ ಸುದೀಪ್ ನಿತ್ಯೋತ್ಸವ ಎನ್ನುವುದರ ಬದಲಿಗೆ ನಿತ್ಯೊತ್ಸವ ಎಂದು ಉಲ್ಲೇಖಿಸಿದ್ದರು. ಇದನ್ನು ಗಮನಿಸಿದ ದರ್ಶನ್ ಅಭಿಮಾನಿಗಳು ಸುದೀಪ್ ಅವರ ಕಾಲೆಳೆದಿದ್ದರು. ನಂತರ ಸುದೀಪ್ ಗಮನಕ್ಕೆ ಅದು ಬಂದ ಕೂಡಲೇ ತಮ್ಮ ಪೋಸ್ಟ್ ನ್ನು ತಿದ್ದಿದ್ದರು.

ಕಿಚ್ಚ-ದಚ್ಚು ಫ್ಯಾನ್ಸ್ ನಡುವೆ​ ವಾರ್ ಗೆ ಕಾರಣವಾದ ಟ್ವೀಟ್
ಕಿಚ್ಚ-ದಚ್ಚು ಫ್ಯಾನ್ಸ್ ನಡುವೆ​ ವಾರ್ ಗೆ ಕಾರಣವಾದ ಟ್ವೀಟ್

ಆದರೆ ಕಿಚ್ಚನ ಅಭಿಮಾನಿಗಳು ಸುಮ್ಮನಿದ್ದರೆ ? ಇಲ್ಲ ಖಂಡಿತಾ ಇಲ್ಲ, ಕಿಚ್ಚನಿಗೆ ಕನ್ನಡ ಕಲಿಸಿದ ಡಿ ಬಾಸ್ ಅಭಿಮಾನಿಗಳಿಗೆ ಮತ್ತೆ ಕನ್ನಡ ಕಲಿಸಿ ತಿರುಗೇಟು ನೀಡಿದ್ದಾರೆ, ಇದೆ ಅಲ್ವೇ ತಾವು ಗಾಜಿನ ಮನೆಯಲ್ಲಿದ್ದು, ಎದುರು ಮನೆಗೆ ಕಲ್ಲು ಹೊಡೆಯೋದು ಅಂದ್ರೆ……. ಒಟ್ಟಿನಲ್ಲಿ ಅವರಿಗೆ ಇವರು, ಇವರಿಗೆ ಅವರು ಕನ್ನಡ ಕಲಿಸಿದ್ದಾರೆ.

ಒಟ್ಟಿನಲ್ಲಿ ಸದ್ಯ ಇಬ್ಬರು ಅಭಿಮಾನಿಗಳ ನಡುವೆ ಸಾಮಾಜಿಕ ಜಾಲತಾಣದಲ್ಲಿ ಮಿನಿ ಯುದ್ಧ ಪ್ರಾರಂಭವಾಗಿದೆ…

ಅಭಿಮಾನಿಗಳಲ್ಲಿ ನಮ್ಮ ಕಡೆಯಿಂದ ಒಂದು ನೇರ ಮನವಿ, ಕಿಚ್ಚ ಸುದೀಪ್ ಮತ್ತು ಡಿ ಬಾಸ್ ದರ್ಶನ್ ಅಭಿಮಾನಿಗಳು ಬೇರೆ ಬೇರೆಯಾದರೂ, ಆ ಕಲಾವಿದರು ಇಬ್ಬರೂ ಕನ್ನಡದ ಮೇರು ನಟರು, ಮುಖ್ಯವಾಗಿ ನಮ್ಮ ಕಲಾವಿದರು, ಅವರ ಹೆಸರು ಬಳಸಿ ನಮ್ಮ ನಮ್ಮಲ್ಲಿ ಜಗಳ ಬೇಡ.

ಅವರಿಬ್ಬರೂ ಸಹ ಕನ್ನಡ ಕಲಾದೇವಿಯ ಮಕ್ಕಳು….. ಇಬ್ಬರನ್ನೂ ಅಭಿಮಾನಿಸೋಣ. ಇಬ್ಬರನ್ನೂ ಪ್ರೀತಿಸೋಣ.