ಕನ್ನಡ ಟಿವಿ ಸೀರಿಯಲ್ ಪ್ರಿಯರಿಗೆ ಗುಡ್ ನ್ಯೂಸ್, ಶೂಟಿಂಗ್ ಗೆ ಗ್ರೀನ್ ಸಿಗ್ನಲ್

ಸಿಎಂ ಯಡಿಯೂರಪ್ಪ ಅವರು ಕನ್ನಡ ಟಿವಿ ಸೀರಿಯಲ್ ಶೂಟಿಂಗ್ ಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

ಧಾರಾವಾಹಿ ಚಿತ್ರೀಕರಣಕ್ಕೆ ಅವಕಾಶ : ಕನ್ನಡ ಟಿವಿ ಸೀರಿಯಲ್ ಪ್ರಿಯರು ಇಷ್ಟು ದಿನ ಮಿಸ್ ಮಾಡಿಕೊಂಡಿದ್ದ ತಮ್ಮ ಸೀರಿಯಲ್ ಮನೋರಂಜನೆಯನ್ನು ಇನ್ನು ಮುಂದೆ ಮತ್ತೆ ನೋಡಬಹುದು. ಟಿವಿ ಸೀರಿಯಲ್ ಪ್ರಿಯರಿಗೆ ಗುಡ್ ನ್ಯೂಸ್ ಇದಾಗಿದ್ದು, ಸಧ್ಯ ಟಿವಿ ಸೀರಿಯಲ್ ಚಿತ್ರೀಕರಣಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದೆ.

ಕೊರೊನಾ ಲಾಕ್​ಡೌನ್​ನಿಂದಾಗಿ ಸ್ಥಗಿತಗೊಂಡಿದ್ದ ಧಾರಾವಾಹಿ ಶೂಟಿಂಗ್​ ಮತ್ತೆ ಪ್ರಾರಂಭಿಸಲು ಸರ್ಕಾರ ಷರತ್ತು ಬದ್ಧ ಅನುಮತಿ ನೀಡಿದೆ. ಈ ಬಗ್ಗೆ ಮನವಿ ಮಾಡಿಕೊಳ್ಳಲು ಇತ್ತೀಚೆಗೆ ತಾರಾ ನೇತೃತ್ವದ ನಿಯೋಗ ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಧಾರಾವಾಹಿ ಶೂಟಿಂಗ್​ಗೆ ಅನುಮತಿ ನೀಡುವಂತೆ ಮನವಿ ಮಾಡಿಕೊಂಡಿದ್ದರು.

ಹೌದು ಕರೋನವೈರಸ್ ನಿಂದ ಎಲ್ಲರಿಗೂ ತೊಂದರೆ ಆದಂತೆ ಕಿರುತೆರೆ ಎಂಟರ್ಟೈನ್ಮೆಂಟ್ ಗೂ ಬ್ರೇಕ್ ಬಿದ್ದಿತ್ತು.
ಕಿರುತೆರೆ ಕಲಾವಿದರ ನಿಯೋಗದಿಂದ ಟಿವಿ ಸೀರಿಯಲ್ ಶೂಟಿಂಗ್ ಗೆ ಅನುಮತಿಯನ್ನು ಕೋರಿ ಸಿಎಂ ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದರು.

ಈಗ ಸಿಎಂ ಯಡಿಯೂರಪ್ಪ ಅವರು ಸೀರಿಯಲ್ ಶೂಟಿಂಗ್ ಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದು, ಧಾರಾವಾಹಿ ಚಿತ್ರೀಕರಣ ಮರು ಪ್ರಾರಂಭಗೊಳ್ಳಲಿದೆ. ಚಿತ್ರೀಕರಣಕ್ಕೆ ಹೊರಗಡೆ ಶೂಟಿಂಗ್ ಮಾಡದಂತೆ ಹಾಗೂ ಕಡಿಮೆ ಜನರನ್ನು ಬಳಸಿಕೊಂಡು ಮನೆಯಲ್ಲಿ ಶೂಟಿಂಗ್ ಮಾಡಬಹುದು ಎಂದು ಹಾಗೂ ಸಾಮಾಜಿಕ ಅಂತರದ ಜೊತೆ ಮಾಸ್ಕ್ ಬಳಸಲು ಹೇಳಿದ್ದಾರೆ.

ಹೌದು, ಶೂಟಿಂಗ್ ಮಾಡುವ ಎಲ್ಲಾ ಕಲಾವಿದರು ಹಾಗೂ ತಾಂತ್ರಿಕ ಕೆಲಸ ಮಾಡುವ ಜನರು ಕೂಡ ಸರ್ಕಾರದ ಯಾವುದೇ ನಿಯಮವನ್ನು ಉಲ್ಲಂಘಿಸಿದೆ ಮಾಸ್ಕನ್ನು ಧರಿಸಿ ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಚಿತ್ರೀಕರಣ ಮಾಡಬಹುದು ಎಂದು ತಿಳಿಸಿದ್ದಾರೆ.

ಈ ಆದೇಶವು ಕೇವಲ ಕನ್ನಡ ಟಿವಿ ಸೀರಿಯಲ್ ಗಳಿಗೆ ಮಾತ್ರ, ರಿಯಾಲಿಟಿ ಶೋಗಳು ಸೇರಿದಂತೆ, ಸಿನಿಮಾಗಳಿಗೆ ಅಲ್ಲ ಎಂದು ಸಿಎಂ ಯಡಿಯೂರಪ್ಪ ಅವರು ಸ್ಪಷ್ಟೀಕರಿಸಿದ್ದಾರೆ. ಇನ್ನು ಮುಂದೆ ಎಂದಿನಂತೆ ಸೀರಿಯಲ್ಗಳು ಭರ್ಜರಿಯಾಗಿ ಜನರಿಗೆ ಮನರಂಜಿಸುತ್ತದೆ….

ರಿಪಿಟೇಡ್ ಟೆಲಿಕ್ಯಾಸ್ಟ್ ಇಂದ ಬೇಸರವಾಗಿದ್ದ ಹೆಂಗಳೆಯರು ಇನ್ಮುಂದೆ ತಮ್ಮಿಷ್ಟದ ಧಾರಾವಾಹಿಯನ್ನು ನೋಡಬಹುದು.

ದಿವ್ಯಶ್ರೀ. ವಿ
ಬೆಂಗಳೂರು

Web title : good news for Kannada tv serial viewers, Green signal for shooting