ಬೈ ಒನ್ ಗೆಟ್ ಒನ್ ಫ್ರೀ ಚಿತ್ರದಲ್ಲಿ ಕಿಶೋರ್, ಸಸ್ಪೆನ್ಸ್ ಚಿತ್ರಕ್ಕೆ ಸಹಿ

ಸಸ್ಪೆನ್ಸ್ ಕಥೆ ಆಧಾರಿತ ಚಿತ್ರ ಬೈ ಒನ್ ಗೆಟ್ ಒನ್ ಫ್ರೀ ಅಲ್ಲಿ ನಟ ಕಿಶೋರ್ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

“ಬೈ ಒನ್ ಗೆಟ್ ಒನ್ ಫ್ರೀ” ಎಂಬ ಚಿತ್ರದ ಹೆಸರಿನಲ್ಲೇ ವಿಭಿನ್ನ ಮತ್ತು ಕುತೂಹಲ ತುಂಬಿದ್ದು, ನಟ ಕಿಶೋರ್ ಅಭಿನಯದ ಕುತೂಹಲಕಾರಿ ಸಿನಿಮಾ ಇನ್ನೇನು ಚಿತ್ರೀಕರಣ ಪ್ರಾರಂಭಿಸಲಿದೆ. ವಿಭಿನ್ನ ಕಥಾಹಂದರ ಹೊಂದಿರೋ ಈ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಇತ್ತೀಚೆಗೆ ಬಿಡುಗಡೆಯಾಗಿತ್ತು.

ಸ್ಯಾಂಡಲ್ ವುಡ್ ನಟ ಕಿಶೋರ್, “ಬೈ ಒನ್ ಗೆಟ್ ಒನ್ ಫ್ರೀ” ಎಂಬ ಹೊಸ ಚಿತ್ರಕ್ಕೆ ಸಹಿ ಹಾಕಿದ್ದಾರೆ. ಹರೀಶ್ ಅನಿಲ್ ನಿರ್ದೇಶನದ ಈ ಚಿತ್ರದಲ್ಲಿ ನಟ ಕಿಶೋರ್ ವಿಶಿಷ್ಟ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಇತ್ತೀಚೆಗೆ ಬಿಡುಗಡೆಯಾಗಿತ್ತು.

ಅವಳಿಗಳ ಜೀವನದ ಕುರಿತಾದ ಕಥಾಹಂದರ ಇರುವ ಈ ಚಿತ್ರದಲ್ಲಿ ಮಧು ಮತ್ತು ಮಿಥುನ್ ಮುಖ್ಯ ಪಾತ್ರದಲ್ಲಿದ್ದಾರೆ. ಮಾಹಿತ್ ಪ್ರಕಾರ ಈ ಚಿತ್ರವು ಅವಳಿ ಮಕ್ಕಳು ಜನಿಸಿದಾಗ ಉಂಟಾಗುವ ಸಮಸ್ಯೆಗಳನ್ನು ವಿವರಿಸುತ್ತದೆ. ಚಿತ್ರವು ಸಸ್ಪೆನ್ಸ್ ಅಂಶವನ್ನು ಹೊಂದಿದ್ದು, ಸಿನಿರಸಿಕರಿಗೆ 100% ಮನೋರಂಜನೆ ನೀಡಲಿದೆ ಎಂದು ಚಿತ್ರ ತಂಡ ಭರವಸೆ ವ್ಯಕ್ತ ಪಡಿಸಿದೆ..

ಇನ್ನು ಸಧ್ಯ ಲಾಕ್ ಡೌನ್ ಹಿನ್ನೆಲೆ ಎಲ್ಲಾ ಚಿತ್ರೀಕರಣಗಳು ಸ್ಥಗಿತ ಗೊಂಡಿದ್ದು, ಸರ್ಕಾರದಿಂದ ಚಿತ್ರೀಕರಣಕ್ಕೆ ಅನುಮತಿ ಸಿಕ್ಕ ಕೂಡಲೇ ಚಿತ್ರದ ಚಿತ್ರೀಕರಣ ಪ್ರಾರಂಭವಾಗಲಿದೆ.