ಫೇಸ್ ಬುಕ್ ಬಳಕೆ ನಿಲ್ಲಿಸಿ – ಕಾರಣ ಇಲ್ಲಿದೆ

It's good to stop using Facebook | itskannada Technology

(itskannada): ಫೇಸ್ ಬುಕ್ ಬಳಕೆ ನಿಲ್ಲಿಸಿ-ಕಾರಣ ಇಲ್ಲಿದೆ , ಫೇಸ್ಬುಕ್ ಒಂದು ‘ಸಾಂಕ್ರಾಮಿಕ ರೋಗ’ , ಫೇಸ್ ಬುಕ್  ತ್ವರಿತ ಬೆಳವಣಿಗೆ ಸಮರ್ಥನೀಯವೆಂದು ಸಾಬೀತಾಗಿದೆ ಮತ್ತು 2015 ರಿಂದ 2020 ವೇಳೆಗೆ ಫೇಸ್ ಬುಕ್ ತನ್ನ ಬಳಕೆದಾರರ 80 ರಷ್ಟು ಕಳೆದುಕೊಳ್ಳುತ್ತದೆ ಎಂದು ಇತ್ತೀಚಿನ ಅಧ್ಯಯನವು ಭವಿಷ್ಯ ನುಡಿದಿದೆ.

ಪ್ರಿನ್ಸ್ಟನ್ ಸಂಶೋಧಕರ ಸಮೂಹವು ಫೇಸ್ ಬುಕ್ ಒಂದು ಸಾಂಕ್ರಾಮಿಕ ಕಾಯಿಲೆ ಎಂದು ಹೋಲಿಸಿದೆ, “ಸೋಂಕಿತ” ಬಳಕೆದಾರರ ಕೆಲವು ವಿಮರ್ಶಾತ್ಮಕ ನಡವಳಿಕೆ , ದೀರ್ಘ ಆಲೋಚನೆ , ಮಾನಸಿಕ ಸ್ಥಿತಿ, ಫೇಸ್ ಬುಕ್  ನಿಂದ ಹೊರ ಬಂದ ಮೇಲೆ ಆ ವ್ಯಕ್ತಿಗಳು “ಚೇತರಿಸಿಕೊಳ್ಳುತ್ತಾರೆ” ಎಂದಿದ್ದಾರೆ.

ಈ ಹಿಂದಿನ ಲೇಖನದಲ್ಲಿ ಮೊಬೈಲ್ ಬಿಸಿ ಆಗುವುದನ್ನು ತಪ್ಪಿಸಿ ಹೇಗೆ ಕಾಪಾಡುವುದೆಂದು  ಫೇಸ್ ಬುಕ್ ಅದ್ಭುತ ವಿಷಯಗಳು ನಿಮಗೆ ಗೊತ್ತಿಲ್ಲ – ಚಾಲೆಂಜ್ ಎಂಬ ಲೇಖನಗಳ ಬಗ್ಗೆ ತಿಳಿದಿದ್ದಾಯಿತಲ್ಲವೇ , ಈಗ ಫೇಸ್ ಬುಕ್ ಬಳಕೆ ನಿಲ್ಲಿಸಿ – ಕಾರಣ ಇಲ್ಲಿದೆ ಲೇಖನದಲ್ಲಿ ನಮ್ಮ ಮಾನಸಿಕ ಸ್ಥಿತಿ ಹತೋಟಿಯಲ್ಲಿಡುವುದು ಹೇಗೆ ನೋಡೋಣ.

ಫೇಸ್ ಬುಕ್ ಬಳಕೆ ನಿಲ್ಲಿಸಿ – ಕಾರಣ ಇಲ್ಲಿದೆ

ಫೇಸ್ ಬುಕ್ ನಿಂದ ಸಮಯ ವ್ಯರ್ಥ. ವರ್ಷಗಳಿಂದ ಸಕ್ರಿಯವಾಗಿರುವ ಸರಾಸರಿ FaceBook ಬಳಕೆದಾರ ದಿನವೊಂದಕ್ಕೆ ಕಡಿಮೆಯೆಂದರೂ ಸುಮಾರು 15 ನಿಮಿಷಗಳು ಫೇಸ್ ಬುಕ್ ನಲ್ಲಿ ಕಳೆಯುತ್ತಾನೆ . ತನ್ನ 30 ದಿನಗಳ ಸಂಪೂರ್ಣ 450 ನಿಮಿಷಗಳನ್ನು ಕಳೆಯುತ್ತಾನೆ, ಇದು ಕೇವಲ 15 ನಿಮಿಷಗಳಿಗೆ ಹೋಲಿಸಿದರೆ , ಇನ್ನು facebook ನಲ್ಲಿ ಘಂಟೆ ಗಟ್ಟಲೆ ಸ್ಕ್ರೋಲಿಂಗ್ ಮಾಡುವವರು ಮತ್ತು ತಮ್ಮ ಚಿತ್ರಗಳನ್ನು

ಫೇಸ್ ಬುಕ್ ಬಳಕೆ ನಿಲ್ಲಿಸಿ -stop using facebookಪೋಸ್ಟ್ ಮಾಡುವಾರಿದ್ದಾರೆ.  ಈ ಬಗ್ಗೆ ಅಂದಾಜಿಸಲಾಗಿದ್ದು ವರ್ಷಕ್ಕೆ 150 ದಿನಗಳನ್ನು ಕೇವಲ ಫೇಸ್ ಬುಕ್ ಬಳಕೆಗೆ ವ್ಯರ್ಥಮಾಡುವವರಿದ್ದಾರೆ ಎಂದು ಅಂದಾಜಿಸಲಾಗಿದೆ. ವರ್ಷಕ್ಕೆ 150 ದಿನಗಳು ಎಂದರೆ , ನಮ್ಮ ಜಿವಿತಾವದಿಯ ಅರ್ದ ಭಾಗ ಫೇಸ್ ಬುಕ್ ನಲ್ಲಿಯೇ ಕಳೆದಂತೆ. ಇದು ಕೇಳಲು ಓದಲು ನಂಬಲಸಾಧ್ಯ , ಆದರೆ ಇದೇ ಸತ್ಯ.ಫೇಸ್ ಬುಕ್ ಬಳಕೆ ನಿಲ್ಲಿಸಿ ನಿಮ್ಮ ಸಮಯವನ್ನು ಕಾಪಾಡಿಕೊಳ್ಳಿ.

ನೀವು facebook ನೊಂದಿಗೆ ಕಳೆಯುವ ಸಮಯವೆಷ್ಟು ?

ನಾವು ಬೇರೆಯವರ ಬಗೆಗೆ ಮಾತನಾಡದೆ ನಮ್ಮ ನಮ್ಮ ಬಗೆಗೆ ನಮ್ಮಲ್ಲಿ ನಾವೇ ಪ್ರಶ್ನಿಸಿಕೊಳ್ಳೋಣ ! ನಾವು ದಿನಕ್ಕೆ ಎಷ್ಟು ಸಮಯ ಫೇಸ್ ಬುಕ್ ನೊಂದಿಗೆ ಕಳೆಯುತ್ತೇವೆ ? 10 ನಿಮಿಷ , 20 ನಿಮಿಷ , 40 ನಿಮಿಷ , ಅಥವಾ 1 ಘಂಟೆ ?  ನಮಗೆ ಬಂದ ಲಾಭ ? ಫೇಸ್ ಬುಕ್ ಗೆ ಬಂದ ಲಾಭ . ನಮ್ಮ ಬಳಕೆ ನಮಗೆ ವ್ಯರ್ಥ ಹಾಗೂ ಫೇಸ್ ಬುಕ್ ಗೆ ಅಧಾಯ.

facebook ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ .

facebook ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ . ಅಧ್ಯಯನಗಳ ಪ್ರಕಾರ ಅದು ನಿಜವಾಗಿ ನಮಗೆ ಹಾನಿ ಮಾಡುತ್ತದೆ. ಬೆಳವಣಿಗೆಯ ಹಾರ್ಮೋನುಗಳ ಬಿಡುಗಡೆಯನ್ನು ತಡೆಗಟ್ಟುತ್ತವೆ, ಜೀರ್ಣಕ್ರಿಯೆ ಮತ್ತು ದೃಷ್ಟಿ ಕುಗ್ಗಿಸುತ್ತದೆ, ಚಿಂತನೆಯನ್ನು ಮಿತಿಗೊಳಿಸಿ ಮತ್ತು ಸೃಜನಶೀಲತೆಯನ್ನು ಕೊಲ್ಲುತ್ತದೆ, ಮತ್ತು ನಿದ್ರೆಯ ಮಾದರಿಗಳು ಮತ್ತು ಸಂತೋಷಗಳ ಮೇಲೆ ಪರಿಣಾಮ ಬೀರಬಹುದು ಎಂದು ಅಧ್ಯಯನ ಸೂಚಿಸುತ್ತದೆ. ಈ ಕಾರಣಕ್ಕಾಗಿ ನೀವು ಫೇಸ್ ಬುಕ್ ಬಳಕೆ ನಿಲ್ಲಿಸಿ ಆರೋಗ್ಯ ಕಾಪಾಡಿಕೊಳ್ಳಬೇಕು.

ನಿಮ್ಮ ಫೇಸ್ ಬುಕ್ ಖಾತೆಯಲ್ಲಿರುವ ಸ್ನೇಹಿತರೆಷ್ಟು ? ಮತ್ತು ಅವರೆಲ್ಲಾ ಯಾರು ?

ಇವರೆಲ್ಲಾ ಯಾರು, ನಮ್ಮ ಸ್ನೇಹಿತರೇಗಾದರು ? ನಮ್ಮ ಫೇಸ್ ಬುಕ್ ನಲ್ಲಿ ಕಡಿಮೆ ಎಂದರು 300 ಕ್ಕಿಂತ ಹೆಚ್ಚಿನ ಸ್ನೇಹಿತರನ್ನು ಹೊಂದಿರುತ್ತೇವೆ ಪ್ರಾಯಶಃ ಅವುಗಳಲ್ಲಿ 10 ಜನರನ್ನು ಮಾತ್ರ ನಾವು ಬಲ್ಲೆವು.100 ಕ್ಕೂ ಹೆಚ್ಚಿನ ಜನರನ್ನು ನಾವು ನಮ್ಮ ಕಣ್ಣಮುಂದೆ ಬಂದರೂ ಗುರುತಿಸುವುದಿಲ್ಲ , ಮಾತನಾಡುಸುವುದಿಲ್ಲ , ಇನ್ನು 100 ಜನ ನಮಗೆ ಯಾರು ಯಾವಾಗ ಸ್ನೇಹಿತರಾದರು ಎಂದು ತಿಳಿದಿರುವುದಿಲ್ಲ. ಇವರು ನಿಮಗೆ ತಿಳಿದಿರುವ ಸ್ನೇಹಿತರಲ್ಲ, ಮತ್ತು ಅರೆ-ಆಕಸ್ಮಿಕವಾಗಿ ಅವರೊಂದಿಗೆ ಇಟ್ಟುಕೊಳ್ಳುವಿಕೆಯ ಸ್ನೇಹ, ನಿಜವಾದ ಸ್ನೇಹಿತರೊಂದಿಗೆ ಕಳೆಯುವ ಸಮಯವನ್ನು ವ್ಯರ್ಥಮಾಡಿದೆ . ನಮ್ಮ ನಿಜವಾದ ಸ್ನೇಹಿತರಿಂದ ನಾವು ದೂರವಾಗುತ್ತಿದ್ದೇವೆ. ಫೇಸ್ ಬುಕ್ ಬಳಕೆ ನಿಲ್ಲಿಸಿ ನಿಮ್ಮ ನಿಜವಾದ ಸ್ನೇಹಿತರ ಬಗ್ಗೆ ಕಾಳಜಿವಹಿಸಿ.

ನಮ್ಮ ಕುಟುಂಬದವರು ನಮ್ಮ ಚಲನವಲನವನ್ನು ಗಮನಿಸಬಹುದು 

ಮಾಡುವ ಪೋಸ್ಟ್ ಗಳು , ನಮ್ಮ ಸಂದೇಶಗಳು , ಇನ್ನಾವುದೇ ವಿಷಯಗಳು ಕೇವಲ ನಮಗಷ್ಟೇ ಅಲ್ಲದೇ , ಯಾವ ವಿಷಯಗಳು ನಮ್ಮ ಕುಟುಂಬಕ್ಕೆ ಗೊತ್ತಾಗದೆ ಮುಚ್ಚಿದ ಬೇಕಾಗಿರುತ್ತದೆಯೋ , ಅದು ಫೇಸ್ ಬುಕ್ ನಲ್ಲಿ ಸಾಧ್ಯವಿಲ್ಲ. ಸುಲಭವಾಗಿ ನಮ್ಮ ಕುಟುಂಬದವರು ಅವೆಲ್ಲವನ್ನು ಗಮನಿಸಬಹುದು . ಇವು ಕೆಲವೊಮ್ಮೆ ಮನಸ್ತಾಪ , ಗಂಡ-ಹೆಂಡತಿ ಜಗಳ , ಇಷ್ಟೇ ಏಕೆ ಸವಿನಂಥಹ ಘಟನೆಗಳು ಗಳಿಸಿಹೊಗಿವೆ. ಇದಕ್ಕಾಗಿ ನಾವು ಫೇಸ್ ಬುಕ್ ಬಳಕೆ ನಿಲ್ಲಿಸಿ ನಮ್ಮ ಖಾಸಗಿತನ ಉಳಿಸಿಕೊಳ್ಳಬೇಕು.

ನಾವು ಪೋಸ್ಟ್ ಮಾಡುವ ಫೋಟೋಗಳು ನಮಗೆ ಮುಜುಗರ

ನಾವು ನಮಗೆ ಸಿಕ್ಕಿದ್ದಾನ್ನೆಲ್ಲಾ ಪೋಸ್ಟ್ ಮಾಡಿ ಲೈಕ್ ಗಳಿಸುವ ಬಿರುಸಿನಲ್ಲಿ , ಕೆಲವೊಮ್ಮೆ ನಮ್ಮನ್ನು ಹೊರತು ಪಡಿಸಿ ಬೇರಾರು ನೋಡಬಾರದ ಫೋಟೋಗಳನ್ನು ಪೋಸ್ಟ್ ಮಾಡಿ ಪೇಚಿಗೆ ಸಿಲುಕುತ್ತೇವೆ .

ಉದಾಹರಣೆ : ಮಕ್ಕಳ , ಅದರಲ್ಲೂ ಹೆಣ್ಣು ಮಗುವಿನ ಫೋಟೋ ಮುದ್ದಾಗಿದೆ ಎಂದು ಮಗುವಿನ ಅರೆ-ಬೆತ್ತಲೆ ಫೋಟೋ ಅಪ್ಲೋಡ್ ಮಾಡಿ ,

ದಿನ ಕಳೆದಂತೆ ಆ ಮಗು ಬೆಳೆದಾಗ ಆ ಫೋಟೋ ಆ ಮಗುವಿಗೆ ಮುಜುಗರ ತರಬಲ್ಲದು. ಈ ಮುಜುಗರ ತಪ್ಪಲು ಫೇಸ್ ಬುಕ್ ಬಳಕೆ ನಿಲ್ಲಿಸಿ.

ಫೇಸ್ ಬುಕ್ ಬಳಕೆ ನಿಲ್ಲಿಸಿ – ಏಕೆಂದರೆ ?

stop using Facebook- ಫೇಸ್ ಬುಕ್ ಬಳಕೆ ನಿಲ್ಲಿಸಿ – ಏಕೆಂದರೆ ? ಇನ್ನೂ ಕೆಲವು ವಿಷಯಗಳು ಇಲ್ಲಿವೆ ನೋಡಿ. ಕೆದುಕುತ್ತಾಹೊದಂತೆ ಈ ಬಗ್ಗೆ ವಿಷಯಗಳು ಸಿಗುತ್ತಲೇ ಇರುತ್ತವೆ.

 

  1. ಗೊತ್ತಿಲ್ಲದ ವ್ಯಕ್ತಿಗಳನ್ನು ಸ್ನೇಹಿತರನ್ನಾಗಿ ಮಾಡಿಕೊಳ್ಳಲು ಫೇಸ್ ಬುಕ್ ಉತ್ತೇಜಿಸುತ್ತದೆ .
  2. ನಿಮ್ಮ ಮಾಹಿತಿಯನ್ನು ಯಾರಾದರು ಪಡೆಯಬಹುದು .
  3. ಯಾರದೇ ಫೋನ್ ನಂಬರ್ ಸುಲಭವಾಗಿ ಪಡೆದುಕೊಳ್ಳಬಹುದು.
  4. ನಮ್ಮ ಅನುಮತಿ ಇಲ್ಲದೆ ನಿಮ್ಮ ಮಾಹಿತಿಯನ್ನು ಯಾರು , ಯಾವಾಗ ಬೇಕಾದರೂ ಪಡೆಯಬಹುದು.
  5. ನಿಮ್ಮ ಅನುಮತಿ ಇಲ್ಲದೆ , ಕೆಲವು ಜಾಹಿರಾತುಗಳು ನಿಮ್ಮ ಇಂಟರ್ನೆಟ್ ಅನ್ನು ಬಳಸುತ್ತವೆ.
  6. ನಮ್ಮೆಲ್ಲರ ಎಲ್ಲಾ ಚಲನವಲನಗಳು ಫೇಸ್ ಬುಕ್ ರೆಕಾರ್ಡ್ ಮಾಡಿಕೊಳ್ಳುತ್ತದೆ.stop using Facebook-itskannada
  7. ಕೆಲವು ಕಂಪನಿಗಳು ಆನ್ಲೈನ್ನಲ್ಲಿ ನಿಮ್ಮನು ಟ್ರ್ಯಾಕ್ ಮಾಡಲು ಫೇಸ್ಬುಕ್ ಕಂಪನಿಗಳನ್ನು ಶಕ್ತಗೊಳಿಸುತ್ತದೆ.
  8. ನಿಮ್ಮ ಖಾಸಗಿ ಸಂದೇಶಗಳು ನಿಜವಾಗಿಯೂ ಖಾಸಗಿಯಾಗಿರುವುದಿಲ್ಲ.
  9. ಫೇಸ್ ಬುಕ್ ಬಳಸುವ ನಾವು ಅದಕ್ಕೆ ಅಧೀನರಾಗಿರ ಬೇಕು.
  10. ಫೇಸ್ ಬುಕ್ ಗೆ ಇಷ್ಟ ಬಂದಾಗ ನಮ್ಮನ್ನು facebook ನಿಂದ ಹೊರ ದಬ್ಬಬಹುದು.

ಲೇಖನದ ಪ್ರಾರಂಭದಲ್ಲಿ ಫೇಸ್ ಬುಕ್ ಬಳಕೆ ನಿಲ್ಲಿಸಿ (stop using Facebook) ಎಂದದಕ್ಕೆ  ಕಾರಣಗಳು ತಿಳಿದನ್ತಾಯಿತಲ್ಲವಾ ,

ಈ ಲೇಖನದಿಂದೇನು ನೀವು facebook ನಿಂದ ಹೊರ ಉಳಿಯುವುದಿಲ್ಲ ಆದರೆ ಈ ವಿಷಯಗಳು ನಿಮಗೆ ತಿಳಿಯಲಿ ಎನ್ನುವುದೇ ಉದ್ದೇಶ.

ಪೂರ್ಣ ನಿಲ್ಲಿಸಲಾಗುವುದಿಲ್ಲ ಎಂದರೆ ಅದರ ಬಳಕೆ ಮಿತವಾಗಿಸುವುದೇನು ಅಷ್ಟು ಕಷ್ಟಕರವಲ್ಲ. ಆಲೋಚನೆ ,ನಿರ್ಧಾರ ನಿಮಗೆ ಬಿಟ್ಟಿದ್ದು. – | itskannada Technology


webtitle : Good to stop using Facebook

keyword : ಫೇಸ್ ಬುಕ್ ಬಳಕೆ ನಿಲ್ಲಿಸಿ , stop using Facebook .


 ಇಟ್ಸ್ ಕನ್ನಡ : ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ ಲೈಕ್ ಮಾಡಿ. ಕನ್ನಡ ತಂತ್ರಜ್ಞಾನ ಸುದ್ದಿಗಾಗಿ ತಂತ್ರ-ಜ್ಞಾನ  ಪುಟ ಕ್ಲಿಕ್ಕಿಸಿ ಅಥವಾ ಇಟ್ಸ್ ಕನ್ನಡ ತಂತ್ರಜ್ಞಾನ ಪುಟ –ಕನ್ನಡ ತಂತ್ರಜ್ಞಾನ-ಇಲ್ಲವೇ ವಿಭಾಗ ಕನ್ನಡ ಗ್ಯಾಜೆಟ್ಗಳ ಸುದ್ದಿ ಕ್ಲಿಕ್ಕಿಸಿ itskannada :News-Entertainment-Information: for latest news visit-Kannada news– more in Kannada Technology  click Kannada Technology News or look at Kannada Gadgets News