ಫೇಸ್ ಬುಕ್ ಖಾತೆ ಡಿಲೀಟ್ ಮಾಡುವುದು ಹೇಗೆ ?

How to Delete FaceBook Account in Kannada | itskannada Technology

(itskannada): ಫೇಸ್ ಬುಕ್ ಖಾತೆ ಅಳಿಸಲು ಮತ್ತು ಫೇಸ್ ಬುಕ್ ಖಾತೆ ಡಿಲೀಟ್ ಮಾಡುವುದು ಹೇಗೆ ? ಅಥವಾ ಶಾಶ್ವತವಾಗಿ ನಿಷ್ಕ್ರಿಯಗೊಳಿಸುವುದು ಹೇಗೆ ?

ಸಾಮಾಜಿಕ ಜಾಲತಾಣದಲ್ಲಿ ನಂಬರ್ 1 ಸ್ಥಾನದಲ್ಲಿರುವ facebook ಯಾರಿಗೆ ತಾನೇ ಗೊತ್ತಿಲ್ಲ ಹೇಳಿ . ಒಂದು ದಿನ ಇಂಟರ್ನೆಟ್ ಪ್ಯಾಕ್ ಇಲ್ಲದೆ ಫೇಸ್ ಬುಕ್ ಉಪಯೋಗಿಸಲು ಆಗದೆ ಹೋದರೆ ಏನೋ ಕಳೆದುಕೊಂಡಂತೆ ಆಗುತ್ತೇವೆ. ನಮ್ಮ ನಿಲ್ಲುವ ಕೂರುವ ಮತ್ತು ಹಲವು ಬಂಗಿಗಳ ಫೋಟೋಗಳಿಗೆ ಒಂದಿಷ್ಟು ಲೈಕ್ ಬಂದರೇನೆ ನೆಮ್ಮದಿಯ ನಿದ್ದೆ. ನಾವು ಇನ್ನೊಬ್ಬರ ಫೋಟೋಗಳಿಗೆ ಲೈಕ್ ಮಾಡಲು ಜಿಪುಣತನ ತೋರಿ , ಅಯ್ಯೋ ನನ್ನ ಫೋಟೋಗೆ likes ಬರಲಿಲ್ಲ ಅಂದು ಕೊಳ್ಳುವುದು ಸಾಮಾನ್ಯ. ಅದಿರಲಿ ಇಲ್ಲಿ ನಾನು ಹೇಳ ಹೊರಟಿರೋದು , ನಾವು ಉಪಯೋಗಿಸದೆ ಇರುವ , ಬೇಡವಾದ ನಮ್ಮ ಫೇಸ್ ಬುಕ್ ಖಾತೆಯನ್ನು ಡಿಲೀಟ್ ಮಾಡುವುದು ಹೇಗೆ ಎಂಬುದರ ಬಗ್ಗೆ .

ಈ ಹಿಂದಿನ ಲೇಖನದಲ್ಲಿ ವಾಟ್ಸ್ ಅಪ್ ಟ್ರಿಕ್ಸ್ ಗಳನ್ನು ತಿಳಿದಿದ್ದಾಯಿತಲ್ಲವೇ , ಈಗ ಫೇಸ್ ಬುಕ್ ಖಾತೆ ಡಿಲೀಟ್ ಮಾಡುವುದು ಹೇಗೆ ? ಎಂದು ತಿಳಿಯೋಣ.

How to Delete FaceBook Account in Kannada-itskannada

ಕೆಲವೊಮ್ಮೆ ನಮ್ಮ ಫೇಸ್ಬುಕ್ ಖಾತೆ ಉಪಯೋಗಿಸುವುದಿಲ್ಲ , ಅಥವಾ ಬೇರೊಂದು ಖಾತೆ ಉಪಯೋಗಿಸುತ್ತಿರುತ್ತೇವೆ . ಆದರೇ ಬೇಡದ ಖಾತೆ ಅಳಿಸಿಹಾಕದೆ ಬಿಟ್ಟರೆ ನಿಮ್ಮ ಎರೆಡೆರಡು ಖಾತೆಗಳು ನಿಮ್ಮ ಸ್ನೇಹಿತರಿಗೆ ಗೊಂದಲ ಮೂಡಿಸುತ್ತದೆ. ನಿಮ್ಮ ನಿಜವಾದ ಖಾತೆ ಯಾವುದೆಂದು ತಿಳಿಯುವುದಿಲ್ಲ. ಹಾಗೂ ಆ ನಿಮ್ಮಖಾತೆ ನಕಲಿಸಲು ಸುಲಭ. ಆದ್ದರಿಂದ ಅದನ್ನು ಡಿಲೀಟ್ ಮಾಡುವುದು ? ಅಥವಾ ಶಾಶ್ವತವಾಗಿ ನಿಷ್ಕ್ರಿಯಗೊಳಿಸುವುದು ?  ಒಳ್ಳೆಯದು.

ಫೇಸ್ ಬುಕ್ ಖಾತೆ ಡಿಲೀಟ್ ಮಾಡುವುದು ಹೇಗೆ ?

ಇದರಲ್ಲಿ ಎರಡು ವಿಧ :

 1. ತಾತ್ಕಾಲಿಕವಾಗಿ ನಿಷ್ಕ್ರಿಯಗೊಳಿಸುವುದು ( Deactivate)
 2. ಶಾಶ್ವತವಾಗಿ ಅಳಿಸುವುದು .
 • ತಾತ್ಕಾಲಿಕವಾಗಿ ನಿಷ್ಕ್ರಿಯಗೊಳಿಸುವುದು .

ತಾತ್ಕಾಲಿಕವಾಗಿ ನಿಷ್ಕ್ರಿಯಗೊಳಿಸಿದ ಮೇಲೆ ನಿಮ್ಮ FaceBook Account, ಯಾರಿಗೂ ಕಾಣಸಿಗುವುದಿಲ್ಲ , ಫೇಸ್ ಬುಕ್ ಖಾತೆ ಡಿಲೀಟ್ ಮಾಡುವುದು ಹೇಗೆ ?-itskannada 2ನಿಮ್ಮ ಸ್ನೇಹಿತರಿಗೂ ಸಹ.   ಆದರೆ ಅದು ಡಿಲೀಟ್ ಆಗಿರುವುದಿಲ್ಲ , ಮುಂದೆ ಎಂದಾದರು ನೀವು ಆ ಖಾತೆಯನ್ನು ಮರು ಚಾಲನೆ ಮಾಡಲು ಬಯಸಿದರೆ ಮತ್ತೆ ಚಾಲನೆ ಮಾಡಬಹುದು.

 • ಶಾಶ್ವತವಾಗಿ ಅಳಿಸುವುದು.

ಇದು ತಾತ್ಕಾಲಿಕವಾಗಿ ನಿಷ್ಕ್ರಿಯದ ವಿರುದ್ದ ಹಂತ , ನೀವು ಶಾಶ್ವತವಾಗಿ ಅಳಿಸಲು ಈ ಹಂತವನ್ನು ಕೈಗೊಳ್ಳಬಹುದು. ನೆನಪಿರಲಿ ಒಮ್ಮೆ ಈ ಹಂತ ಕೈಗೊಂಡಲ್ಲಿ ಮುಂದೆಂದು ಈ ಖಾತೆ ನಿಮಗೆ ಸಿಗುವುದಿಲ್ಲ. ನಿಮ್ಮ ಖಾತೆ ಯಾರಿಗೂ ಕಾನಸಿಗುವಿದಿಲ್ಲ. ನಿಮಗೂ ಸಹ . ನಿಮ್ಮ ಸಂದೇಶಗಳು , ಫೋಟೋ , ವೀಡಿಯೊ , ಇನ್ನಾವುದೂ ಮರಳಿ ಪಡೆಯಲಾಗುವುದಿಲ್ಲ.

ಎರಡು ಹಂತವನ್ನು ಸರಿಯಾಗಿ ಅರ್ಥಮಾಡಿಕೊಂಡು ಆ ನಂತರ ನೀವು ತಾತ್ಕಾಲಿಕವಾಗಿ ಅಥವಾ ಶಾಶ್ವತವಾಗಿ ಅಳಿಸಲು ಬಯಸುತ್ತಿರಾ ಎಂದು ನಿರ್ದರಿಸಿ .

 • ತಾತ್ಕಾಲಿಕವಾಗಿ ನಿಷ್ಕ್ರಿಯಗೊಳಿಸುವ ಕ್ರಮ 

 1. ನೀವು ತಾತ್ಕಾಲಿಕವಾಗಿ ನಿಷ್ಕ್ರಿಯಗೊಳಿಸಲು ಬಯಸಿರುವ ಫೇಸ್ ಬುಕ್ ಖಾತೆಗೆ ಲಾಗಿನ್ ಆಗಿ .
 2.  ನಿಮ್ಮ ಖಾತೆಯಲ್ಲಿ ಕಾಣಸಿಗುವ ಸೆಟ್ಟಿಂಗ್ option ಕ್ಲಿಕ್ ಮಾಡಿ . ನಂತರ Manage account ” Edit ” ಆಪ್ಷನ್ ಕ್ಲಿಕ್ಕಿಸಿ.How to Delete FaceBook Account in Kannada-itskannada 1
 3. ಪುಟದ ಕೊನೆಯಲ್ಲಿ Delete ಅಥವಾ Disable ಮೇಲೆ ಕ್ಲಿಕ್ ಮಾಡಿ .
 4. ಅಲ್ಲಿ ನಿಮಗೆ ನಿಮ್ಮ password ಕೇಳುತ್ತದೆ , ನಮೂ
 5. ದಿಸಿ.
 6. ಮುಂದಿನ ಹಂತದಲ್ಲಿ , ಅದು ಕಾರಣ ಕೇಳುತ್ತದೆ , i have one more account ಆಪ್ಷನ್ ಕ್ಲಿಕ್ ಮಾಡಿ.
 7. Disable or Deactivate ಬಟನ್ ಕ್ಲಿಕ್ಕಿಸಿ.
 8. ನಂತರ ನಿಮಗೆ ಸಂದೇಶ ಕಾಣಿಸುತ್ತದೆ , ಆ ಸಂದೇಶದ ಪ್ರಕಾರ ನಿಮ್ಮ account 14 ದಿನಗಳಿಗೆ ನಿಷ್ಕ್ರಿಯಗೊಂಡಿರುತ್ತದೆ ಮತ್ತು ಈ ವೇಳೆ ನಿವೇನಾದರು ಮತ್ತೆ ಲಾಗಿನ್ ಆದರೆ ಅದು ತನ್ನಷ್ಟಕ್ಕೆ ತಾನೇ Active ಆಗುತ್ತದೆ.
 • ಶಾಶ್ವತವಾಗಿ ಅಳಿಸುವುದು

 1. ನೀವು ಶಾಶ್ವತವಾಗಿ ಅಳಿಸಲು ಬಯಸಿರುವ ಫೇಸ್ ಬುಕ್ ಖಾತೆಗೆ ಲಾಗಿನ್ ಆಗಿ .
 2. ನಿಮ್ಮ ಖಾತೆಯಲ್ಲಿ ಕಾಣಸಿಗುವ ಸೆಟ್ಟಿಂಗ್ option ಕ್ಲಿಕ್ ಮಾಡಿ .ನಂತರ Manage account ” Edit ” ಆಪ್ಷನ್ ಕ್ಲಿಕ್ಕಿಸಿ.
 3. ಪುಟದ ಕೊನೆಯಲ್ಲಿ Delete ಅಥವಾ Disable ಮೇಲೆ ಕ್ಲಿಕ್ ಮಾಡಿ .
 4. ಅಲ್ಲಿ ನಿಮಗೆ ನಿಮ್ಮ password ಕೇಳುತ್ತದೆ , ನಮೂದಿಸಿ.
 5. ಮುಂದಿನ ಹಂತದಲ್ಲಿ , ಅದು ಕಾರಣ ಕೇಳುತ್ತದೆ , i have one more account ಆಪ್ಷನ್ ಕ್ಲಿಕ್ ಮಾಡಿ.
 6. Delete ಬಟನ್ ಕ್ಲಿಕ್ಕಿಸಿ.
 7. ನಂತರ ನಿಮಗೆ ಸಂದೇಶ ಕಾಣಿಸುತ್ತದೆ , ಆ ಸಂದೇಶದ ಪ್ರಕಾರ ನಿಮ್ಮ account 14 ದಿನಗಳಿಗೆ ನಿಷ್ಕ್ರಿಯಗೊಂಡಿರುತ್ತದೆ
 8. 14 ದಿನಗಳ ಗಡುವು ಮುಗಿದ ನಂತರ ಮತ್ತೆ ಅದೇ ಪುಟ ತಲುಪಿ , Delete My Account ಬಟನ್ ಕ್ಲಿಕ್ಕಿಸಿ. ಆಗ FACEBOOK ಮತ್ತೊಮ್ಮೆ ದೃಡಿಕರಣಕ್ಕಾಗಿ ಶಾಶ್ವತವಾಗಿ ಅಳಿಸಬೇಕಾ ಎಂದು ಕೇಳುತ್ತದೆ. ಹೌದು ಎಂದು ಕ್ಲಿಕ್ಕಿಸಿದರೆ , ಆ ಕ್ಷಣದಿಂದ ನಿಮ್ಮ ಖಾತೆ ಶಾಶ್ವತವಾಗಿ ಅಳಿಸಿಹೊಗುತ್ತದೆ.

ಸ್ನೇಹಿತರೆ ಫೇಸ್ ಬುಕ್ ಖಾತೆ ಡಿಲೀಟ್ ಮಾಡುವುದು ಹೇಗೆ ? ಎಂದು ತಿಳಿದಾಯಿತಲ್ಲವಾ , ಆದರೆ ಮೊದಲು ಅರ್ಥೈಹಿಸಿಕೊಂಡು , ಹಂತಗಳನ್ನು ಕೈಗೊಳ್ಳಿ . – | itskananda Technology


wwebtitle : How to Delete FaceBook Account in Kannada

Keyword : ಫೇಸ್ ಬುಕ್ ಖಾತೆ ಡಿಲೀಟ್ ಮಾಡುವುದು ಹೇಗೆ ?, How to Delete FaceBook Account in Kannada .


 ಇಟ್ಸ್ ಕನ್ನಡ : ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ ಲೈಕ್ ಮಾಡಿ. ಕನ್ನಡ ತಂತ್ರಜ್ಞಾನ ಸುದ್ದಿಗಾಗಿ ತಂತ್ರ-ಜ್ಞಾನ  ಪುಟ ಕ್ಲಿಕ್ಕಿಸಿ ಅಥವಾ ಇಟ್ಸ್ ಕನ್ನಡ ತಂತ್ರಜ್ಞಾನ ಪುಟ –ಕನ್ನಡ ತಂತ್ರಜ್ಞಾನ-ಇಲ್ಲವೇ ವಿಭಾಗ ಕನ್ನಡ ಗ್ಯಾಜೆಟ್ಗಳ ಸುದ್ದಿ ಕ್ಲಿಕ್ಕಿಸಿ itskannada :News-Entertainment-Information: for latest news visit-Kannada news– more in Kannada Technology  click Kannada Technology or look at Kannada Gadgets