ಶ್ ಯಾರಿಗೂ ಹೇಳಬೇಡಿ ಈ ವಾಟ್ಸ್ ಅಪ್ ಟ್ರಿಕ್ಸ್

WhatsApp tricks in Kannada | itskannada Technology

(itskannada): ವಾಟ್ಸ್ ಅಪ್ ಟ್ರಿಕ್ಸ್ – ಬಗ್ಗೆ ತಿಳಿಯುವ ಕುತೂಹಲವೆ , ಬನ್ನಿ ವಾಟ್ಸ್ ಅಪ್ ನ ಬಗೆಗೆ ಒಂದಿಷ್ಟು ತಿಳಿಯೋಣ . ಸಮಯಗಳು ಉರುಳಿದಂತೆಲ್ಲಾ ವಾಟ್ಸ್ ಆಪ್ ಬದಲಾಗುತ್ತಲೇ ಇದೆ . ಪ್ರತಿ ಬದಲಾವಣೆಯಲ್ಲಿಯು ಬಳಕೆದಾರರ ಫ್ರೆಂಡ್ಲಿ ಅಪ್ಲಿಕೇಷನ್ ಆಗಿ ಹೊರ ಹೊಮ್ಮುತ್ತಿದೆ. ಇದು ಕೇವಲ ಸಂದೇಶ ಕಳಿಸಲು ಮಾತ್ರವಲ್ಲದೆ , ಚಾಟಿಂಗ್ , ವಿಡಿಯೋ ಕರೆಗಳು , ದ್ವನಿ ಕರೆಗಳು , ಲೈವ್ ಸ್ಟ್ರೀಮ್ ವೀಡಿಯೋಸ್ ಗಳನ್ನೂ ನೋಡುವುದರೊಂದಿಗೆ ಇದು ಇನ್ನಷ್ಟು ಸೌಕರ್ಯಗಳನ್ನು ಒದಗಿಸಿದೆ. WhatsApp ವಾಸ್ತವವಾಗಿ ನಮ್ಮ ಯೋಚನೆಗಿಂತ ಬಹಳಷ್ಟು ಮುಂದೆ ಬಂದಿದೆ.

WhatsApp ಈಗ 1.2 ಶತಕೋಟಿಗೂ ಹೆಚ್ಚು ಸಕ್ರಿಯ ಮಾಸಿಕ ಬಳಕೆದಾರರನ್ನು ಹೊಂದಿದೆ, ಇದನ್ನು ಬಳಸಿ ಜಗತ್ತಿನ ನಾನಾ ಮೂಲೆಯ ಜನರು ಸುಮಾರು 50 ಶತಕೋಟಿ ಸಂದೇಶಗಳನ್ನು , 3.3 ಶತಕೋಟಿ ಚಿತ್ರಗಳನ್ನು ಮತ್ತು 80 ಮಿಲಿಯನ್ GIF ಗಳನ್ನು ದಿನನಿತ್ಯ ರವಾನಿಸುತ್ತಾರೆ. ಇಂದಿಗೆ WhatsApp ಗೊತ್ತಿಲ್ಲದವರಿಲ್ಲ ಎಂದರೆ ತಪ್ಪಾಗುವುದಿಲ್ಲ. ಸಂಪರ್ಕವನ್ನು  ಸುಲಭ ಮಾಡಿದ whatsApp ಉಚಿತ ಅನ್ನುವುದು ಇದರ ವಿಶೇಷ.

ಈ ಇಂದಿನ ಲೇಖನದಲ್ಲಿ ಫೇಸ್ ಬುಕ್ ಕಸ್ಟಮ್ URL ಪಡೆಯೋದು ಹೇಗೆ ಎಂದು ತಿಳಿದಿದ್ದಾಯಿತಲ್ಲವೇ , ಈಗ ವಾಟ್ಸ್ ಅಪ್ ಟ್ರಿಕ್ಸ್ ಬಗ್ಗೆ ತಿಳಿಯೋಣ.

ಬನ್ನಿ ಈ ಲೇಖನದಲ್ಲಿ ಕೆಲವು (WhatsApp) ವಾಟ್ಸ್ ಅಪ್ ಟ್ರಿಕ್ಸ್ ಗಳನ್ನು ತಿಳಿಯೋಣ .

  • ವಾಟ್ಸ್ ಅಪ್ ಟ್ರಿಕ್ಸ್- ಒಂದಕ್ಕಿಂತ ಹೆಚ್ಚು ಬಳಸಬಹುದು .

ಹೌದು , ಸಾಮಾನ್ಯವಾಗಿ ನಾವೆಲ್ಲಾ ತಿಳಿದಿರುವುದು ಒಂದು ಮೊಬೈಲ್ ನಲ್ಲಿ ಒಂದು WhatsApp ಬಳಸಬಹುದೆಂದು , ಆದರೇ ನಾವು ಒಂದಕ್ಕಿಂತ ಅಧಿಕ ಬಳಸಬಹುದು. ಇದನ್ನು CLONE ಎಂದು ಕರೆಯಲಾಗುತ್ತದೆ. ವಯಕ್ತಿಕ ಮತ್ತು ವ್ಯವಹಾರಕ್ಕೆಂದು ಬೇರೆ ಬೇರೆ ಬಳಸಬಹುದು.  PlayStore ನಲ್ಲಿ ಈ Clone ಅಪ್ಲಿಕೇಶನ್ ಸಿಗುತ್ತದೆ ಅದು ಉಚಿತವಾಗಿ.

  • ಎರಡು ಹಂತದ ಪರಿಶೀಲನೆ-two step verification .

ಎರಡು ಅಂತದ ಪರಶೀಲನೆ ಅಥವಾ two step verification ಅನ್ನುವುದು ಉತ್ತಮ ಅನುಕೂಲಕರ ಫೀಚರ್ ,

WhatsApp tricks in Kannada-itskannadaಇದೇನಂದರೆ  ನಾವು ನಮ್ಮ ಅಕೌಂಟ್ ಗೆ ಲಾಗಿನ್ ಆಗುವ ಮೊದಲು ನಮ್ಮ ಮೊಬೈಲ್ ನಂಬರ್ ಗೆ 6 ಅಂಕಿಗಳ ಸೀಕ್ರೆಟ್ ಸಂಖ್ಯೆಯನ್ನು ಕಳಿಸುತ್ತದೆ. ಲಾಗಿನ್ ಆಗುತ್ತಿರುವವರು ನಾವೇ ಎಂದು ದೃಡೀಕರಿಸಿ ಆ ನಂತರ ಒಳ ಪ್ರವೇಶಿಸಲು ಅನುಮತಿಸುತ್ತದೆ. ನಮ್ಮ ಫೋನ್ ಕಳೆದಾಗ , ಇಲ್ಲವೇ ನಮ್ಮ ನಂಬರ್ ನಕಲಿಸಿ ಯಾರಾದರು ಲಾಗಿನ್ ಆಗುವುದನ್ನು ತಪ್ಪಿಸುತ್ತದೆ.

  • ತಾತ್ಕಾಲಿಕವಾಗಿ ವಾಟ್ಸ್ ಅಪ್ ಅಕೌಂಟ್ ನಿಲ್ಲಿಸುವುದು ಹೇಗೆ .

ಹೌದು , ಕೆಲವು ಕಾರಣಗಳಿಂದ ಕೆಲವೊಮ್ಮೆ ನಾವು ಪ್ರಾರಂಭಿಸಿರುವ ವಾಟ್ಸ್ ಅಪ್ ಅಕೌಂಟ್ ಉಪಯೋಗಿಸುತ್ತಿರುವುದಿಲ್ಲ , ಇಲ್ಲವೇ ಆ ಫೋನ್ ನಂಬರ್ ನಮ್ಮ ಬಳಿ ಇರುವುದಿಲ್ಲ , ಕೆಲವೊಮ್ಮೆ ಅತಿಯಾದ ಕಿರಿ ಕಿರಿಗಾಗಿ ಆ ಸಂಖ್ಯೆ ಉಪಯೋಗಿಸುವುದು ಇಷ್ಟವಿಲ್ಲದ ಕಾರಣ ಬೇರೊಂದು ನಂಬರ್ ಉಪಯೋಗಿಸುತ್ತಿರುತ್ತೇವೆ , ಆಗಾದರೆ ಮುಂದಿನ ಹಂತ ಉಪಯೋಗಿಸದೆ ಇರುವ ಆ ನಂಬರ್ ಗೆ ಸಂಭಂದಿಸಿದ ಅಕೌಂಟ್ ಅಳಿಸುವುದು . ಅದು ಹೇಗೆ ? ಇಲ್ಲಿದೆ ನೋಡಿ ಅದರ ಪರಿಹಾರ . . .

ವಾಟ್ಸ್ ಅಪ್ ಅಕೌಂಟ್ ನಿಲ್ಲಿಸಲು ನೀವು ಈಗೆ ಮಾಡಿ .

  • ಮೊದಲಿಗೆ ನಿಮ್ಮ whatsapp ಗೆ ತೆರಳಿ , ನಂತರ ನಿಮಗೆ ಕಾಣಸಿಗುವ Settings ಗೆ ತೆರಳಿ.
  • Settings ಗೆ ಹೋದ ಮೇಲೆ ಅಕೌಂಟ್ ( Account option) ಆಪ್ಷನ್ ಗೆ ಹೋಗಿ .
  • ನಿಮಗಲ್ಲಿ Delete My Account ( ನನ್ನ ಅಕೌಂಟ್ ಅಳಿಸಿಹಾಕಿ ) ಆಪ್ಷನ್  ಕಾಣ ಸಿಗುತ್ತದೆ , ಅದನ್ನು ಕ್ಲಿಕ್  ಮಾಡಿ .
  • ಈಗ ಅದು ನಿಮ್ಮ ಫೋನ್ ನಂಬರ್ ಕೇಳುತ್ತದೆ , ನಂಬರ್ ಅನ್ನು ನಮೂದಿಸಿ .
  • ನಿಮ್ಮ ನುಬೇರ್ ನಮೂದಿಸಿದ ಮೇಲೆ ಮತ್ತೊಮ್ಮೆ “Delete My Account” option  ಕ್ಲಿಕ್  ಮಾಡಿ .

ಈಗ ನಿಮ್ಮ ಅಥವಾ ನಿಮಗೆ ಬೇಡವಾದ ಅಕೌಂಟ್ ಡಿಲೀಟ್ ಆಗಿದೆ , ನೀವು ಮುಂದೆ ಎಂದಾದರು ಮತ್ತೆ ಇದೇ ಸಂಖ್ಯೆಯಲ್ಲಿ ಖಾತೆ ತೆರೆಯಲು ಇಚ್ಚಿಸಿದರೆ , ಮತ್ತೆ ತೆರೆಯಬಹದು .

ಆದರೆ ಅದು ಹೊಸ ಖಾತೆ ಆಗುತ್ತದೆ . ಹಳೆಯ ಯಾವುದೇ ಫೋಟೋ , ವೀಡಿಯೊ , ಮತ್ತು ಸಂದೇಶಗಳು ಕಾಣಸಿಗುವುದಿಲ್ಲ.

ಇವಿಷ್ಟು ವಾಟ್ಸ್ ಅಪ್ ಟ್ರಿಕ್ಸ್ ನ ಕೆಲವು ವಿಷಯಗಳು , ಇನ್ನು ಹಲವು ವಿಷಯಗಳನ್ನು ಮುಂದಿನ ಲೇಖನದಲ್ಲಿ ನೋಡೋಣ. – | itskannada Technology


WebTitle : ವಾಟ್ಸ್ ಅಪ್ ಟ್ರಿಕ್ಸ್ – WhatsApp tricks in Kannada

keyword: ವಾಟ್ಸ್ ಅಪ್ ಟ್ರಿಕ್ಸ್ – WhatsApp tricks in Kannada


 ಇಟ್ಸ್ ಕನ್ನಡ : ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ ಲೈಕ್ ಮಾಡಿ. ಕನ್ನಡ ತಂತ್ರಜ್ಞಾನ ಸುದ್ದಿಗಾಗಿ ತಂತ್ರ-ಜ್ಞಾನ  ಪುಟ ಕ್ಲಿಕ್ಕಿಸಿ ಅಥವಾ ಇಟ್ಸ್ ಕನ್ನಡ ತಂತ್ರಜ್ಞಾನ ಪುಟ –ಕನ್ನಡ ತಂತ್ರಜ್ಞಾನ-ಇಲ್ಲವೇ ವಿಭಾಗ ಕನ್ನಡ ಗ್ಯಾಜೆಟ್ಗಳ ಸುದ್ದಿ ಕ್ಲಿಕ್ಕಿಸಿ itskannada :News-Entertainment-Information: for latest news visit-Kannada news– more in Kannada Technology  click Kannada Technology or look at Kannada Gadgets