ಅಮೆರಿಕಾದಲ್ಲಿ ಕೊರೋನಾ ಕಾರ್ಕೋಟಕ, ಒಂದೇ ದಿನ 2,333 ಮಂದಿ ಬಲಿ

ಅಮೆರಿಕಾದಲ್ಲಿ ಕೊರೋನಾ ಒಂದೇ ದಿನದಲ್ಲಿ 2,333 ಮಂದಿಯನ್ನು ಬಲಿಪಡೆದಿದೆ.

ಅಮೇರಿಕಾ ಮಹಾಮಾರಿ ಕೊರೋನಾ ಅಟ್ಟಹಾಸಕ್ಕೆ ಭಾಗಶಃ ತತ್ತರಿಸಿ ಹೋಗಿದೆ, ಒಂದೇ ದಿನದಲ್ಲಿ ಸಾವಿರಾರು ಸಾವಿನ ಗಡಿ ದಾಟುತ್ತಿದ್ದು, ಒಂದೇ ದಿನದಲ್ಲಿ 2,333 ಮಂದಿ ಬಲಿ ಪಡೆಯುವ ಮೂಲಕ ಇಡೀ ಅಮೆರಿಕಾಗೆ ಅಮೆರಿಕಾವೇ ಬೆಚ್ಚಿ ಬಿದ್ದಿದೆ, ಇಂದು ಇಷ್ಟು ನಾಳೆ ಎಷ್ಟು ಎಂಬ ಸಂಖ್ಯೆಯ ಗುಣಾಕಾರ ಆಕುತ್ತಾ ಜೀವ ಕೈಯಲ್ಲಿಡಿಯಬೇಕಿದೆ.

ವಾಷಿಂಗ್ಟನ್ : ಅಮೆರಿಕಾದಲ್ಲಿ ಕೊರೋನಾ ಅಟ್ಟಹಾಸ ಮುಂದುವರೆದಿದ್ದು, ಮಹಾಮಾರಿ ಸೋಂಕಿಗೆ ಒಂದೇ ದಿನ ಬರೋಬ್ಬರಿ 2,333 ಮಂದಿ ಬಲಿಯಾಗಿದ್ದಾರೆ.

ಇದುವರೆಗೆ ಅಮೆರಿಕಾದಲ್ಲಿ ಕೊರೋನಾ ಸೋಂಕಿಗೆ 71,022 ಮಂದಿ ಸಾವನ್ನಪ್ಪಿದ್ದು, ಸೋಮವಾರ ಅಮೆರಿಕಾದಲ್ಲಿ 1,015 ಮಂದಿ ಬಲಿಯಾಗಿದ್ದರು. ಈಗ ಏರಿಕಿ ಕಂಡಿರುವ ಸಾವಿನ ಪ್ರಮಾಣ ಅಮೆರಿಕಾದಲ್ಲಿ ಆತಂಕ ಸೃಷ್ಟಿಮಾಡಿದೆ.

ಮಾರಣಾಂತಿಕ ವೈರಸ್‌ನಿಂದ 71,000 ಅಮೆರಿಕನ್ನರು ಸಾವನ್ನಪ್ಪಿದ್ದಾರೆ ಮತ್ತು 12 ಲಕ್ಷಕ್ಕೂ ಹೆಚ್ಚು ಜನರು ಸೋಂಕಿಗೆ ದೃಢಪಟ್ಟಿದ್ದಾರೆ. ಹೆಚ್ಚುತ್ತಿರುವ ಸಾವಿನ ಸಂಖ್ಯೆಯ ಹೊರತಾಗಿಯೂ, ಯುಎಸ್ ಕಳೆದ ಒಂದು ವಾರದಲ್ಲಿ ದೇಶದಲ್ಲಿ ಹೊಸ ಪ್ರಕರಣಗಳು ಮತ್ತು ಸಾವುಗಳ ಸಂಖ್ಯೆಯಲ್ಲಿ ತೀವ್ರ ಕುಸಿತವನ್ನು ದಾಖಲಿಸಿವೆ ಎಂದು ಹೇಳಿಕೊಂಡಿದೆ.

ಇದನ್ನೂ ಓದಿ : ಸರ್ಕಾರಿ ನೌಕರರಿಗೆ ಕಹಿ ಸುದ್ದಿ, ನೌಕರರ ಗಳಿಕೆ ರಜೆ ರದ್ದು

ವರದಿಗಳ ಪ್ರಕಾರ ಅಮೆರಿಕಾ ರಾಷ್ಟ್ರದಲ್ಲಿ ವೈರಸ್ ನಿಯಂತ್ರಣಕ್ಕೆ ಬರುವ ಬೆಳವಣಿಗೆಗಳು ಕಂಡು ಬರುತ್ತಿದೆ ಎಂಬ ಭರವಸೆಗಳು ಜನರಲ್ಲಿ ಮೂಡುತ್ತಿದ್ದ  ಬೆನ್ನಲ್ಲೇ ಮತ್ತೆ ಅಮೆರಿಕಾದಲ್ಲಿ ಮಹಾಮಾರಿ 2,333 ಮಂದಿಯನ್ನು ಬಲಿ ಪಡೆದುಕೊಂಡಿದೆ. ಇದರಿಂದಾಗಿ ಅಲ್ಲಿನ ಜನತೆಯಲ್ಲಿ ವೈರಸ್ ಕುರಿತ ಆತಂಕ ಮತ್ತಷ್ಟು ಹೆಚ್ಚಾಗಿದೆ.

ಈ ನಡುವೆ ಯುನೈಟೆಡ್ ಸ್ಟೇಟ್ಸ್, ವೆಂಟಿಲೇಟರ್ಗಳಂತಹ ಅಗತ್ಯ ವೈದ್ಯಕೀಯ ಸಾಮಗ್ರಿಗಳನ್ನು ಒದಗಿಸುವುದು ಸೇರಿದಂತೆ ವಿವಿಧ ದೇಶಗಳಿಗೆ ಈಗ ಸಹಾಯ ಮಾಡುತ್ತಿದೆ ಎಂದು ತಿಳಿಸಿದೆ.