ಊಹಾಪೋಹಾಗಳಿಗೆ ತೆರೆ, ಕಿಮ್ ಜಾಂಗ್ ಉನ್ ಸಾರ್ವಜನಿಕವಾಗಿ ಪ್ರತ್ಯಕ್ಷ

ಕಿಮ್ ಜಾಂಗ್ ಉನ್ ಸಾರ್ವಜನಿಕವಾಗಿ ಪ್ರತ್ಯಕ್ಷವಾಗಿ ಊಹಾಪೋಹಾಗಳಿಗೆ ತೆರೆ ಎಳೆದಿದ್ದಾರೆ, ಈ ಮೂಲಕ ಸಾರ್ವಜನಿಕ ಕಾರ್ಯಕ್ರಮದಲ್ಲಿ ಕಿಮ್ ಜಾಂಗ್ ಉನ್ ಪ್ರತ್ಯಕ್ಷ ವಾಗಿ ಸಾವಿನ ವದಂತಿಗಳಿಗೆ ಅಂತ್ಯ ಹಾಡಿದ್ದಾರೆ.

ಕಿಮ್ ಜಾಂಗ್ ಉನ್ ಕಳೆದ ಹಲವು ದಿನಗಳಿಂದ ಸಾರ್ವಜನಿಕವಾಗಿ ಕಾಣಿಸಿಕೊಳ್ಳದೇ ಸಾವಿನ ವದಂತಿಗಳು ವೈರಲ್ ಆಗಿದ್ದವು. ಕೆಲವೊಂದು ಸುದ್ದಿಸಂಸ್ಥೆಗಳು ಕಿಮ್ ಜಾಂಗ್ ಉನ್ ಸಾವನ್ನಪಿರಬಹುದು ಎಂದು.. ಕೆಲವು ಸಂಸ್ಥೆಗಳು ಸೋಂಕಿಗೆ ಹೆದರಿ ಅಡಗಿರಬಹುದು ಎಂದು ವರದಿ ಮಾಡಿದ್ದವು. ಸಾರ್ವಜನಿಕವಾಗಿ ಪ್ರತ್ಯಕ್ಷ ಆಗಿರುವ ಕಿಮ್ ಜಾಂಗ್ ಉನ್ ಎಲ್ಲ ಊಹಾಪೋಹಾಗಳಿಗೆ ತೆರೆ ಎಳೆದಿದ್ದಾರೆ.

ನವದೆಹಲಿ : ಕಿಮ್ ಜಾಂಗ್ ಉನ್ ಅವರ ಆರೋಗ್ಯದ ಬಗ್ಗೆ ಹೆಚ್ಚುತ್ತಿದ್ದ ಊಹಾಪೋಹಗಳ ಮಧ್ಯೆ, ಉತ್ತರ ಕೊರಿಯಾದ ಸರ್ವೋಚ್ಚ ನಾಯಕ ಕಿಮ್ ಜೊಂಗ್ ಉನ್ ಅವರು ಶುಕ್ರವಾರ 20 ದಿನಗಳಲ್ಲಿ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.

ದಕ್ಷಿಣ ಪ್ಯೊಂಗ್ಯಾಂಗ್ ಪ್ರಾಂತ್ಯದ ಸನ್‌ಚಾನ್‌ನಲ್ಲಿ ರಸಗೊಬ್ಬರ ಘಟಕ ಕೆಮಿಕಲ್ ಕಾರ್ಖಾನೆ ಉದ್ಘಾಟನೆ ಸಮಾರಂಭದಲ್ಲಿ ಕಿಮ್ ಭಾಗವಹಿಸಿದ್ದರು ಎಂದು ಉತ್ತರ ಕೊರಿಯಾದ ರಾಜ್ಯ ಮಾಧ್ಯಮ ವರದಿ ಮಾಡಿದೆ.

ವರದಿಗಳ ಪ್ರಕಾರ, ಸತ್ತನೆಂದು ವದಂತಿಗಳಿದ್ದ ಉತ್ತರ ಕೊರಿಯಾದ ನಾಯಕ ರಸಗೊಬ್ಬರ ಘಟಕದ ರಿಬ್ಬನ್ ಕತ್ತರಿಸಿ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ. ಕಾರ್ಯಕ್ರಮದಲ್ಲಿ ಹಾಜರಿದ್ದ ಜನರು ಕಿಮ್ ಅವರ ಹಾಜರಿಗೆ ಸಾಕ್ಷಿಯಾಗಿ ನಂತರ ‘ಘೋಷಣೆಯ ಹರ್ಷೋದ್ಗಾರ ಮೊಳಗಿತು’ ಎಂದು ವರದಿಗಳು ತಿಳಿಸಿವೆ.

ತಮ್ಮ ಸಹೋದರಿ ಕಿಮ್ ಯೋ ಜಾಂಗ್ ಜೊತೆ ಸುಂಜಾನ್ ಫೋಸ್ಪೇಟಿಕ್ ಫರ್ಟಿಲೈಸರ್ ಎಂಬ ಕಾರ್ಖಾನೆಯ ರಿಬ್ಬನ್ ಕಟ್ಟಿಂಗ್ ಕಾರ್ಯಕ್ರಮದಲ್ಲಿ ಕಿಮ್ ಪಾಲ್ಗೋಂಡಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು ವರದಿಯಲ್ಲಿ ಹೇಳಿದೆ.

ಕಾರ್ಮಿಕರ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಈ ಕಾರ್ಯಕ್ರಮಕ್ಕೆ ಕಿಮ್ ಜಾಂಗ್ ಆಗಮಿಸಿ ಸಾರ್ವಜನಿಕವಾಗಿ ಕಾಣಿಸಿಕೊಂಡರು. ಸುಮಾರು ಮೂರು ವಾರಗಳಿಂದ ಅವರು ಸಾರ್ವಜನಿಕವಾಗಿ ಕಾಣಿಸದ ಕಾರಣ ಕಿಮ್ ಅವರ ಅನಾರೋಗ್ಯದ ಬಗ್ಗೆ ಊಹಾಪೋಹಗಳು ಹೆಚ್ಚಿದ್ದವು.

Web Title : Kim Jong Un Appears in Public Amid Death Rumours