ಹೆರಿಗೆ ಆಸ್ಪತ್ರೆ ಬಳಿ ಆತ್ಮಾಹುತಿ ಬಾಂಬ್ ಸ್ಫೋಟ, ನವಜಾತ ಶಿಶುಗಳು ಸೇರಿ 15 ಮಂದಿ ಸಾವು

ಕಾಬೂಲ್ ಆಸ್ಪತ್ರೆಯ ಹೆರಿಗೆ ಆಸ್ಪತ್ರೆ ಮೇಲೆ ನಡೆದ ದಾಳಿಯಲ್ಲಿ 15 ಜನರು ಸಾವನ್ನಪ್ಪಿದ್ದಾರೆ

ಕಾಬೂಲ್: ಆಫ್ಘಾನಿಸ್ತಾನದ ಹೆರಿಗೆ ಆಸ್ಪತ್ರೆಯೊಂದರಲ್ಲಿ ಆತ್ಮಾಹುತಿ ಬಾಂಬ್ ಸ್ಫೋಟದಲ್ಲಿ ನವಜಾತ ಶಿಶುಗಳು ಮತ್ತು ದಾದಿಯರು ಸೇರಿದಂತೆ ಕನಿಷ್ಠ 15 ಜನರು ಸಾವನ್ನಪ್ಪಿದ್ದಾರೆ.

ದೇಶಾದ್ಯಂತ ಉಗ್ರಗಾಮಿ ಕೃತ್ಯಗಳು ಏರಿಕೆ, ಕೊರೋನಾ ಸೋಂಕು ಉಲ್ಬಣ ಮತ್ತು ವಿದೇಶಿ ಮಿಲಿಟರಿ ಬೆಂಬಲವನ್ನು ಕಡಿಮೆ ಮಾಡುವುದು ಸೇರಿದಂತೆ ಅಸಂಖ್ಯಾತ ಬಿಕ್ಕಟ್ಟುಗಳನ್ನು ಎದುರಿಸುತ್ತಿರುವಾಗ ಆಫ್ಘಾನಿಸ್ತಾನದಲ್ಲಿ ಹಿಂಸಾಚಾರ ಸಂಭವಿಸಿದೆ.

ಮುಂಜಾನೆ ನಡೆದ ದಾಳಿಯ ನಂತರ ಮೂವರು ಬಂದೂಕುಧಾರಿಗಳು ಕಾಬೂಲ್‌ನ ಬಾರ್ಚಿ ರಾಷ್ಟ್ರೀಯ ಆಸ್ಪತ್ರೆಗೆ ಮುತ್ತಿಗೆ ಹಾಕಿದ್ದರು. ಭದ್ರತಾ ಪಡೆಗಳು ತೆರವು ಕಾರ್ಯಾಚರಣೆಯಲ್ಲಿ ಅವರನ್ನು ಹತ್ಯೆಗೈಯಲ್ಲಾಗಿದೆ ಎಂದು ಆಂತರಿಕ ಸಚಿವಾಲಯ ತಿಳಿಸಿದೆ.

ಇದೇ ವೇಳೆ ಸುಮಾರು 15 ಜನರು ಗಾಯಗೊಂಡಿದ್ದಾರೆ. ಇನ್ನು ಮೂವರು ವಿದೇಶಿ ಪ್ರಜೆಗಳು ಸೇರಿದಂತೆ 100ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ ಎಂದರು.

ಇನ್ನು ಈ ದಾಳಿಯನ್ನು ನಾವು ಸಂಘಟಿಸಿಲ್ಲ ಎಂದು ತಾಲಿಬಾನ್ ಹೇಳಿಕೊಂಡಿದೆ.