ಪಾಕಿಸ್ತಾನ ಕೊರೋನವೈರಸ್ ಪ್ರಕರಣಗಳ ಸಂಖ್ಯೆ 20,000 ದಾಟಿದೆ

ಪಾಕಿಸ್ತಾನ ಕೊರೋನವೈರಸ್ ಪ್ರಕರಣಗಳಲ್ಲಿ ಅತಿ ಹೆಚ್ಚು ಏಕದಿನ ಹೆಚ್ಚಳವನ್ನು ದಾಖಲಿಸಿದೆ

ಹೊಸ ಕೊರೋನಾ ಸೋಂಕುಗಳೊಂದಿಗೆ ಪಾಕಿಸ್ತಾನ ಕೊರೋನವೈರಸ್ ಪ್ರಕರಣಗಳಲ್ಲಿ ಅತಿ ಹೆಚ್ಚು ಏಕದಿನ ಹೆಚ್ಚಳವನ್ನು ದಾಖಲಿಸಿದೆ ಮತ್ತು ಕಳೆದ 24 ಗಂಟೆಗಳಲ್ಲಿ 22 ಸಾವುನೋವುಗಳೊಂದಿಗೆ ದೇಶದಲ್ಲಿ ಸಾವಿನ ಸಂಖ್ಯೆ 462 ಕ್ಕೆ ಏರಿದೆ. ಈ ಮೂಲಕ ಪಾಕಿಸ್ತಾನ ಕೊರೋನವೈರಸ್ ಪ್ರಕರಣಗಳ ಸಂಖ್ಯೆ 20,000 ದಾಟಿದೆ

1,083 ಹೊಸ ಸೋಂಕುಗಳು ಪತ್ತೆಯಾದ ನಂತರ ಪಾಕಿಸ್ತಾನದ ಕರೋನವೈರಸ್ ಪ್ರಕರಣಗಳು ಸೋಮವಾರ 20,000 ದಾಟಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ಕಳೆದ 24 ಗಂಟೆಗಳಲ್ಲಿ, 1,083 ಹೊಸ ಪ್ರಕರಣಗಳು ವರದಿಯಾಗಿದ್ದು, ಒಟ್ಟು 20,186 ರೋಗಿಗಳನ್ನು ತೆಗೆದುಕೊಳ್ಳಲಾಗಿದೆ. ಈ ಅವಧಿಯಲ್ಲಿ 22 ಸಾವುಗಳು ಸಂಭವಿಸಿದ್ದು, ಈ ಸೋಂಕಿನಿಂದ ಸಾವುನೋವು 462 ಕ್ಕೆ ಏರಿದೆ.

ಈ ನಡುವೆ ದೇಶದಲ್ಲಿ ಒಟ್ಟು 5,590 ರೋಗಿಗಳು ಚೇತರಿಸಿಕೊಂಡಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.

ನೆನ್ನೆಯೂ ಸಹ 1,952 ಹೊಸ ಸೋಂಕುಗಳೊಂದಿಗೆ ಏಕ ಡಣದಲ್ಲಿ ಬಾರಿ ಏರಿಕೆ ದಾಖಲಿಸಿದ್ದು, ಒಟ್ಟು ಕೋವಿಡ್ -19 ರೋಗಿಗಳ ಸಂಖ್ಯೆ 18,770 ಕ್ಕೆ ತಲುಪಿತ್ತು. ಇದೀಗ ಇದೆ ಸರಣಿ ಮುಂದುವರೆದಿದ್ದು ದಿನವೊಂದಕ್ಕೆ ಸಾವಿರದ ಗಡಿ ದಾಟುತ್ತಿರುವ ಪಾಕಿಸ್ತಾನದಲ್ಲಿ ಆತಂಕ ಮನೆ ಮಾಡಿದೆ.

ಏತನ್ಮಧ್ಯೆ, ಪಾಕಿಸ್ತಾನ ತನ್ನ ಪರೀಕ್ಷಾ ಸಾಮರ್ಥ್ಯವನ್ನು ಹೆಚ್ಚಿಸುತ್ತಿದೆ ಎಂದು ಆರೋಗ್ಯ ವಿಶೇಷ ಸಹಾಯಕ ಡಾ. ಜಾಫರ್ ಮಿರ್ಜಾ ಸುದ್ದಿಗಾರರಿಗೆ ತಿಳಿಸಿದ್ದಾರೆ.