ರಷ್ಯಾದ ಪ್ರಧಾನಿ ಮಿಖಾಯಿಲ್ ಮಿಶುಸ್ಟಿನ್‌ಗೆ ಕೊರೊನಾ ವೈರಸ್ ಸೋಂಕು

Russian PM Mikhail Mishustin Tests Positive For COVID-19

ರಷ್ಯಾದ ಪ್ರಧಾನಿ ಮಿಖಾಯಿಲ್ ಮಿಶುಸ್ಟಿನ್ ಅವರಿಗೆ ಮಾರಕ ಕೊರೊನಾ ವೈರಸ್

ರಷ್ಯಾ ಪ್ರಧಾನಿ ಮಿಖಾಯಿಲ್ ಮಿಶುಸ್ಟಿನ್ ಅವರಿಗೆ ಮಾರಕ ಕೊರೊನಾ ವೈರಸ್ ತಗುಲಿದ್ದು, ಈ ಕುರಿತು ಖುದ್ದು ಮಿಖಾಯಿಲ್ ಮಿಶುಸ್ಟಿನ್‌ ಮಾಹಿತಿ ನೀಡಿದ್ದಾರೆ. ವೈದ್ಯರ ಸಲಹೆ ಮೇರೆಗೆ ಸ್ವಯಂ ದಿಗ್ಬಂಧನಗೊಂಡು ಚಿಕಿತ್ಸೆ ಪಡೆಯುವುದಾಗಿ ಅವರು ಹೇಳಿದ್ದಾರೆ.

ಮಾಸ್ಕೊ: ಕರೋನವೈರಸ್‌ ಪಾಸಿಟಿವ್ ಇದೆ ಎಂದು ರಷ್ಯಾದ ಪ್ರಧಾನಿ ಮಿಖಾಯಿಲ್ ಮಿಶುಸ್ಟಿನ್ ಗುರುವಾರ ಹೇಳಿದ್ದಾರೆ. ಮಾಧ್ಯಮ ವರದಿಯ ಪ್ರಕಾರ, ಅವರು ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ 14 ದಿನಗಳ ಕಾಲ ಐಸೋಲೇಷನ್‌ಗೆ ಹೋಗುವುದಾಗಿ ತಿಳಿಸಿದ್ದಾರೆ.

ಈ ಮೂಲಕ ರಷ್ಯಾದ ಪ್ರಧಾನಿ ಮಿಖಾಯಿಲ್ ಮಿಶುಸ್ಟಿನ್‌ಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ. ಹೀಗಾಗಿ ಸ್ವಯಂ ಐಸೋಲೇಷನ್‌ಗೆ ಒಳಪಡುವುದಾಗಿ ಅವರು ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ಗೆ ವಿಡಿಯೊ ಕರೆ ಮೂಲಕ ತಿಳಿಸಿದ್ದಾರೆ ಎನ್ನಲಾಗಿದೆ.

54 ವರ್ಷ ವಯಸ್ಸಿನ ಮಿಖಾಯಿಲ್ ಜನವರಿಯಲ್ಲಿ ಪ್ರಧಾನಿ ಹುದ್ದೆ ಅಲಂಕರಿಸಿದ್ದರು. ಸದ್ಯ, ಉಪ ಪ್ರಧಾನಿ ಆಂಡ್ರೇ ಬೆಲೊಸೊವ್ ಅವರು ತಾತ್ಕಾಲಿಕವಾಗಿ ಮಿಖಾಯಿಲ್ ಕರ್ತವ್ಯಗಳನ್ನು ನಿರ್ವಹಿಸಲಿದ್ದಾರೆ. ಆದಾಗ್ಯೂ, ಪ್ರಮುಖ ವಿದ್ಯಮಾನಗಳ ಬಗ್ಗೆ ನಿಗಾ ವಹಿಸುವುದಾಗಿಯೂ ಮಿಖಾಯಿಲ್ ತಿಳಿಸಿದ್ದಾರೆ. ಮಿಖಾಯಿಲ್ ಮಿಶುಸ್ಟಿನ್ ಈ ವರ್ಷದ ಜನವರಿಯಲ್ಲಿ ಪ್ರಧಾನ ಮಂತ್ರಿಯಾಗಿ ನೇಮಕಗೊಂಡಿದ್ದರು.

Web Title : Russian PM Mikhail Mishustin Tests Positive For COVID-19