ಬೈಕ್ ತಪ್ಪಿಸಲು ಹೋಗಿ ಬಸ್ ಪಲ್ಟಿ, 11 ಪ್ರಯಾಣಿಕರು ಸಾವು

ಬೈಕ್ ತಪ್ಪಿಸಲು ಹೋಗಿ ಬಸ್ ಪಲ್ಟಿ, 11 ಪ್ರಯಾಣಿಕರು ಸಾವು

ಮಹಾರಾಷ್ಟ್ರದಲ್ಲಿ (Maharashtra) ಭೀಕರ ರಸ್ತೆ ಅಪಘಾತ (Bus Accident) ಸಂಭವಿಸಿದೆ. ಬೈಕ್ ತಪ್ಪಿಸುವ ಭರದಲ್ಲಿ ಬಸ್ ಪಲ್ಟಿಯಾಗಿದೆ. ಈ ಅಪಘಾತದಲ್ಲಿ 11 ಮಂದಿ ಸಾವನ್ನಪ್ಪಿದ್ದಾರೆ. ಹಲವಾರು ಪ್ರಯಾಣಿಕರು ಗಾಯಗೊಂಡಿದ್ದಾರೆ. ಗೊಂಡಿಯಾ ಜಿಲ್ಲೆಯಲ್ಲಿ ಈ ದುರ್ಘಟನೆ ನಡೆದಿದೆ.

ಕೊಹ್ಮಾರಾ ಹೆದ್ದಾರಿಯಲ್ಲಿ ಭಂಡಾರಿಯಿಂದ ಗೊಂಡಿಯಾಗೆ ಹೋಗುತ್ತಿದ್ದ ಬಸ್‌ಗೆ ಬೈಕ್‌ ಎದುರಾಗಿದೆ. ಚಾಲಕ ಬೈಕನ್ನು ತಪ್ಪಿಸಲು ಯತ್ನಿಸಿದ್ದಾನೆ.

ಈ ವೇಳೆ ಬಸ್ ಏಕಾಏಕಿ ತಿರುಗಿ ಪಲ್ಟಿಯಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಬಸ್ ಪಲ್ಟಿಯಾದ ನಂತರ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದು.. ಚಾಲಕನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ಬಗ್ಗೆ ಪ್ರಧಾನಿ ಮೋದಿ ಆಘಾತ ವ್ಯಕ್ತಪಡಿಸಿದ್ದಾರೆ. ಸಂತ್ರಸ್ತರಿಗೆ ಎಕ್ಸ್‌ಗ್ರೇಷಿಯಾ ಘೋಷಿಸಲಾಗಿದೆ.

11 Dead In Bus Accident In Maharashtra, Pm Modi Announces Ex Gratia

Related Stories