ಶಬರಿಮಲೆ ಮೆಟ್ಟಿಲುಗಳ ಮೇಲೆ ಫೋಟೋ ತೆಗೆಸಿಕೊಂಡ 23 ಪೊಲೀಸರಿಗೆ ಶಿಕ್ಷೆ ಏನು ಗೊತ್ತಾ?
ತಿರುವನಂತಪುರಂ: ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯದ ಪವಿತ್ರ 18 ಮೆಟ್ಟಿಲುಗಳ ಮೇಲೆ 23 ಪೊಲೀಸರು ಗ್ರೂಪ್ ಫೋಟೋ (Sabarimala Photo Shoot) ತೆಗೆದಿರುವ ಘಟನೆಯಲ್ಲಿ ಸರ್ಕಾರ ಶಿಸ್ತು ಕ್ರಮ ಕೈಗೊಂಡಿದೆ.
ಪೊಲೀಸರು ತಕ್ಷಣ ಸರಿಯಾದ ನಡವಳಿಕೆಗಾಗಿ ಕಠಿಣ ತರಬೇತಿ ಪಡೆಯಬೇಕು ಎಂದು ಸರ್ಕಾರ ಆದೇಶ ಹೊರಡಿಸಿದೆ. ಎಸ್‌ಎಪಿ ಶಿಬಿರದ ಪೊಲೀಸ್ ಅಧಿಕಾರಿಗಳು ಈಗ ಕಣ್ಣೂರಿನ ಕೆಎಪಿ-4 ಕ್ಯಾಂಪ್‌ಗೆ ವರದಿ ಮಾಡಬೇಕಾಗುತ್ತದೆ.
ಆ ಶಿಬಿರದಲ್ಲಿ ಪೊಲೀಸರು ಉತ್ತಮವಾಗಿ ವರ್ತಿಸುವಂತೆ ಕಟ್ಟುನಿಟ್ಟಿನ ತರಬೇತಿ ನೀಡಲಾಗುವುದು. ಎಡಿಜಿಪಿ ಎಸ್ ಶ್ರೀಜಿತ್ ಅವರ ಆದೇಶದಂತೆ ತರಬೇತಿ ಮುಂದುವರಿಯಲಿದೆ. ಶಿಸ್ತು ಕ್ರಮದ ಬಗ್ಗೆ ಹೈಕೋರ್ಟ್‌ಗೆ ಮಾಹಿತಿ ನೀಡಲಾಗಿದೆ.
ಅಯ್ಯಪ್ಪನ ಸನ್ನಿಧಾನದ ಮೆಟ್ಟಿಲುಗಳ ಮೇಲೆ ನಿಂತ ಪೊಲೀಸರು ದೇವರಿಗೆ ಬೆನ್ನುಮಾಡಿ ಫೋಟೋಗೆ ಪೋಸ್ ನೀಡಿದ್ದಾರೆ. ಈ ಕುರಿತು ವಿವಾದ ಭುಗಿಲೆದ್ದಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆ ವ್ಯಕ್ತವಾಗಿದ್ದರಿಂದ 23 ಅಧಿಕಾರಿಗಳನ್ನು ತರಬೇತಿಗೆ ವಾಪಸ್ ಕರೆಸಲಾಗಿಗೆ. ಸನ್ನಿಧಾನದ ವಿಶೇಷ ಅಧಿಕಾರಿಯಿಂದಲೂ ಎಡಿಜಿಪಿ ವರದಿ ಕೇಳಲಾಗಿದೆ.