ಮಂಡ್ಯ-ಪರೀಕ್ಷೆ ಬರೆಯಲೆಂದು ಬಂದಳಾ ವಧು

Mandya (itskannada) ಮಂಡ್ಯ-ಪರೀಕ್ಷೆ ಬರೆಯಲೆಂದು ಬಂದಳಾ ವಧು : ಪರೀಕ್ಷೆ ಬರೆಯಲೆಂದು ವಧುವು ಮದುವೆ ಮಂಟಪದಿಂದಲೇ ಬಂದು ಪರೀಕ್ಷೆ ಬರೆದಿರುವ ಘಟನೆಯು ಮಂಡ್ಯ ಜಿಲ್ಲೆಯ ಕೆ.ಆರ್ ಪೇಟೆಯಲ್ಲಿ ಇಂದು ನಡೆದಿದೆ.ತನ್ನ ದ್ವಿತೀಯ ವರ್ಷದ ಪರೀಕ್ಷೆ ಬರೆಯಲೆಂದು ಕಾವ್ಯಾ ಅವರು ಮದುವೆ ಮಂಟಪದಿಂದ ಬಂದಿದ್ದಾರೆ.

ಮಂಡ್ಯ-ಪರೀಕ್ಷೆ ಬರೆಯಲೆಂದು ಬಂದಳಾ ವಧು

ಅವರು ಕಲ್ಪತರು ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿ.ಕಾಂ ವ್ಯಾಸಾಂಗ ಮಾಡುತ್ತಿದ್ದಾರೆ. ಇಂದು ಕಾವ್ಯಾರಿಗೆ ಬ್ಯುಸಿನೆಸ್ ಟ್ಯಾಕ್ಸ್ ಪರೀಕ್ಷೆ ಇತ್ತು, ತನ್ನ ಮದುವೆಯ ಸಂಭ್ರಮದ ನಡುವೆಯೂ ಬಂದು ಪರೀಕ್ಷೆ ಬರೆದಿರುವುದು ಕುತೂಹಲಕಾರಿ ಸಂಗತಿಯೇ ಸರಿ. ಮದುವೆಯ ಕೆಲವು ಶಾಸ್ತ್ರಗಳನ್ನು ಮುಗಿಸಿಕೊಂಡು, ಮದುವೆಯ ಉಡುಪಿನಲ್ಲಿಯೇ ಪರೀಕ್ಷೆ ಬರೆಯಲು ಬಂದು, ಪರೀಕ್ಷೆಯ ಬಳಿಕ ಪೋಷಕರ ಜೊತೆ ಮಂಟಪಕ್ಕೆ ತೆರಳಿದ್ದಾರೆ. /// ಈ ವಿಭಾಗದ ಇನ್ನಷ್ಟು ಸುದ್ದಿಗಳಿಗೆ ತಪ್ಪದೇ ಕ್ಲಿಕ್ಕಿಸಿ – Mandya News Online