ರೌಡಿ ಶೀಟರ್ ಪಟ್ಟಿಯಲ್ಲಿರುವ ಅಭ್ಯರ್ಥಿ ನಾಮಪತ್ರ ರದ್ದುಗೆ ಆಗ್ರಹ

ಮದ್ದೂರು ತಾಲೂಕು ಹೊಸಕೆರೆ ಗ್ರಾ.ಪಂ. ಚುನಾವಣೆಯಲ್ಲಿ ಸಾಮಾನ್ಯ ವರ್ಗದಿಂದ ಸ್ಪರ್ಧಿಸಿರುವ ಎಚ್.ಎಲ್ ದಯಾನಂದ ಅವರ ವಿರುದ್ಧ ವಿವಿಧ ಪ್ರಕರಣಗಳಲ್ಲಿ ಮೊಕದ್ದಮೆಗಳಿದ್ದು ಈ ಹಿನ್ನೆಲೆಯಲ್ಲಿ ಸದರಿ ವ್ಯಕ್ತಿ ರೌಡಿ ಶೀಟರ್ ಪಟ್ಟಿಯಲ್ಲಿದ್ದು ಚುನಾವಣಾ ಕಣದಿಂದ ಇವರ ನಾಮಪತ್ರವನ್ನು ರದ್ಧುಗೊಳಿಸುವಂತೆ ಒತ್ತಾಯಿಸಿ ಸ್ಥಳೀಯರು ಪ್ರತಿಭಟನೆ ನಡೆಸಿದರು.

(Kannada News) : ಮದ್ದೂರು: ಮದ್ದೂರು ತಾಲೂಕು ಹೊಸಕೆರೆ ಗ್ರಾ.ಪಂ. ಚುನಾವಣೆಯಲ್ಲಿ ಸಾಮಾನ್ಯ ವರ್ಗದಿಂದ ಸ್ಪರ್ಧಿಸಿರುವ ಎಚ್.ಎಲ್ ದಯಾನಂದ ಅವರ ವಿರುದ್ಧ ವಿವಿಧ ಪ್ರಕರಣಗಳಲ್ಲಿ ಮೊಕದ್ದಮೆಗಳಿದ್ದು ಈ ಹಿನ್ನೆಲೆಯಲ್ಲಿ ಸದರಿ ವ್ಯಕ್ತಿ ರೌಡಿ ಶೀಟರ್ ಪಟ್ಟಿಯಲ್ಲಿದ್ದು ಚುನಾವಣಾ ಕಣದಿಂದ ಇವರ ನಾಮಪತ್ರವನ್ನು ರದ್ಧುಗೊಳಿಸುವಂತೆ ಒತ್ತಾಯಿಸಿ ಸ್ಥಳೀಯರು ಪ್ರತಿಭಟನೆ ನಡೆಸಿದರು.

ಮದ್ದೂರು ತಾಲೂಕು ಕಚೇರಿ ಬಳಿ ಜಮಾಯಿಸಿದ ಹೊಸಕೆರೆ ಗ್ರಾ.ಪಂ. ವ್ಯಾಪ್ತಿಯ ಸಾಮಾನ್ಯ ಸ್ಥಾನಕ್ಕೆ ಸ್ಪರ್ಧಿಸಿರುವ ಎಚ್.ಸಿ. ಸುಧೀರ್‌ಕುಮಾರ್ ನೇತೃತ್ವದಲ್ಲಿ ಶಿರಸ್ತೇದಾರ್ ರಾಜು ಅವರಿಗೆ ಮನವಿ ಸಲ್ಲಿಸಿದ ಪ್ರತಿಭಟನಾ ನಿರತರು ಎಚ್.ಎಲ್.ದಯಾನಂದ ಅವರನ್ನು ಕಣದಿಂದಲೇ ವಜಾಗೊಳಿಸುವಂತೆ ಆಗ್ರಹಿಸಿದರು.

ಬೆಸಗರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ರೌಡಿ ಶೀಟರ್‌ಗಳಲ್ಲಿ ಒಬ್ಬರಾದ ದಯಾನಂದ ಅವರು ೭ಕ್ಕೂ ಅಧಿಕ ಪ್ರಕರಣಗಳಲ್ಲಿ ಆರೋಪಿಯಾಗಿದ್ದು, ಸ್ಥಳೀಯವಾಗಿ ಸಾರ್ವಜನಿಕ ಆಸ್ತಿಪಾಸ್ತಿಗೆ ಮುಂದಿನ ದಿನಗಳಲ್ಲಿ ಹಾನಿ ಉಂಟಾಗುವ ಆತಂಕವಿರುವುದಾಗಿ ದೂರಿದರು.

ಈ ಎಲ್ಲ ಕಾರಣಗಳಿಂದ ಸ್ಥಳೀಯ ಚುನಾವಣಾಧಿಕಾರಿ ಮಲ್ಲಿಕಾರ್ಜುನ ಅವರು ಹೊಸಕೆರೆ ಗ್ರಾ.ಪಂ. ವ್ಯಾಪ್ತಿಯ ಕೊತ್ತನಹಳ್ಳಿ ಗ್ರಾಮದವರೇ ಆಗಿದ್ದು ಏಕಪಕ್ಷೀಯವಾಗಿ ಚುನಾವಣಾ ಕರ್ತವ್ಯ ನಿರ್ವಹಿಸುತ್ತಿದ್ದು ಇವರನ್ನು ಕೂಡಲೇ ಬಿಡುಗಡೆಗೊಳಿಸಿ ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿಯನ್ನು ಮರು ನೇಮಿಸುವಂತೆ ಒತ್ತಾಯಿಸಿದರು.

ಏಕಪಕ್ಷೀಯವಾಗಿ ಕರ್ತವ್ಯ ನಿರ್ವಹಿಸುತ್ತಿರುವ ಚುನಾವಣಾಧಿಕಾರಿ ಮಲ್ಲಿಕಾರ್ಜುನ ಮತ್ತು ಆರೋಪಿತ ಅಭ್ಯರ್ಥಿ ದಯಾನಂದ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಈಗಾಗಲೇ ದೂರು ನೀಡಿದ್ದು ಈ ಸಂಬಂಧ ಕ್ರಮವಹಿಸಿಲ್ಲವೆಂದು ಆರೋಪಿಸಿದರಲ್ಲದೆ, ಸದರಿ ಪ್ರಕರಣದಲ್ಲಿ ದೂರು ಸ್ವೀಕರಿಸಿ ಮೌನಕ್ಕೆ ಶರಣಾಗಿರುವ ತಹಸೀಲ್ದಾರ್ ವಿಜಯಕುಮಾರ್ ವಿರುದ್ಧ ಹರಿಹಾಯ್ದರು.

ಚುನಾವಣಾಧಿಕಾರಿ ಬದಲಾವಣೆ ಸಂಬಂಧ ಉಪ ವಿಭಾಗಾಧಿಕಾರಿಗಳಿಗೆ ಲಿಖಿತ ಮನವಿ ಸಲ್ಲಿಸಿದ್ದು ಈ ಸಂಬAಧ ಮದ್ದೂರು ತಹಸೀಲ್ದಾರ್ ಅವರಿಗೆ ಕ್ರಮ ಕೈಗೊಳ್ಳುವ ಕುರಿತಾಗಿ ಸೂಚನೆ ನೀಡಿದ್ದು ತಕ್ಷಣ ಇದಕ್ಕೆ ತಹಸೀಲ್ದಾರ್ ಅವರು ಕ್ರಮ ವಹಿಸುವಂತೆ ಪ್ರತಿಭಟನಾ ನಿರತರು ಒತ್ತಾಯಿಸಿ ಮನವಿಪತ್ರ ಸಲ್ಲಿಸಿದರು.

ಪ್ರತಿಭಟನೆ ವೇಳೆ ಮುಖಂಡರಾದ ಎಚ್.ಎಲ್. ಲಿಂಗೇಗೌಡ, ಮಹೇಶ್, ಗೋಪಿ, ಶಂಕರ, ಚಂದ್ರು, ಚಿಕ್ಕಬೋರಯ್ಯ, ವೆಂಕಟೇಶ್ ನೇತೃತ್ವ ವಹಿಸಿದ್ದರು.

Web Title : Candidate in Rowdy Sheet list demands for cancellation of nomination

Scroll Down To More News Today