ಅಭಿಷೇಕ್ ಅಪ್ಪನ ಮೇಲೆ ಆಣೆ ಇಟ್ಟು ಹೇಳಿದ್ದೇನು ಗೊತ್ತಾ ?

Do you know what Abhishek has sworn

ಅಭಿಷೇಕ್ ಅಪ್ಪನ ಮೇಲೆ ಆಣೆ ಇಟ್ಟು ಹೇಳಿದ್ದೇನು ಗೊತ್ತಾ ? – Do you know what Abhishek has sworn

ಮಂಡ್ಯ : ಸಿಲ್ವರ್ ಜ್ಯೂಬಿಲಿ ಪಾರ್ಕ್ ನಲ್ಲಿ ” ಸ್ವಾಭಿಮಾನಿಗಳ ಸಮಾವೇಶ” ಕ್ಕೆ ಮಂಡ್ಯ ಜನ ಫುಲ್ ಫಿದಾ ಆಗಿರೋದು ಸುಳ್ಳಲ್ಲ.ಸುಮಾರು ಇಪ್ಪತ್ತು ದಿನಗಳ ನಿರಂತರ ಚುನಾವಣಾ ಪ್ರಚಾರದ ನಂತರ ಬಹಿರಂಗ ಪ್ರಚಾರದ ಕೊನೆಯ ದಿನ ಹಮ್ಮಿಕೊಳ್ಳಲಾಗಿದ್ದ, ಸಮೇವೇಶದಲ್ಲಿ ನೆರೆದಿದ್ದ ಸ್ಟಾರ್ ಗಳು ತಮ್ಮ ಮನಬಿಚ್ಚಿ ಮಾತನಾಡಿದರು.

ನೀರಲ್ಲಾದರೂ ಹಾಕಿ, ಹಾಲಲ್ಲಾದರೂ ಹಾಕಿ, ನಿಮ್ಮನ್ನೇ, ನಂಭಿರವ ನಮ್ಮನ್ನು ಕೈ ಬಿಡಬೇಡಿ ಎಂಬ ಮಾತುಗಳು ಕೇಳಿಬಂದವು. ಈ ನಡುವೆ ಥೇಟ್ ಅಪ್ಪನಂತೆ ಮಾತಿಗಿಳಿದ ಅಭಿಷೇಕ್ ಮಾತಿಗೆ ಭರ್ಜರಿ ಚಪ್ಪಾಳೆ ಮತ್ತು ಜನ ಭಾವುಕರಾಗಿ ಒಂದು ನಿಮಿಷ ಯೋಚಿಸುವಂತೆ ಮಾಡಿತು.

ಮಾತಿನ ಶುರುವಿನಲ್ಲಿಯೇ , ಅಭಿಷೇಕ್, ನೇರವಾಗಿ ಹೇಳಿದ್ದು ನಮ್ಮ ಅಪ್ಪನ ಮತ್ತು ತಾಯಿಯ ಬಗ್ಗೆ ಮಾತನಾಡಿದರೆ ಸುಮ್ಮನೆ ಇರೋಲ್ಲ ಎಂಬುದು. ಅಷ್ಟೇ ಅಲ್ಲ, ಅಂಬರೀಶ್ ಮೃತಪಟ್ಟ ಕೊನೆಗಳಿಗೆಯಲ್ಲಿ, ಅವರ ಮೃತ ದೇಹವನ್ನು ಮಂಡ್ಯಕ್ಕೆ ಕರೆದೊಯ್ಯಲು ಕೇಳಿದ ಅಭಿಷೇಕ್ ಮನವಿಗೆ ಇದೆ ಸಿ.ಎಂ.ಕುಮಾರಸ್ವಾಮಿ, ಕಷ್ಟ, ಸಾಧ್ಯವಿಲ್ಲ, ಎಂದಿದ್ದರಂತೆ.

ವಿಷಯನ್ನು ಜನಗಳ ಮುಂದೆ ಇಟ್ಟ ಅಭಿಷೇಕ್ , ತನ್ನ ತಂದೆಯ ಮೇಲೆ ಆಣೆ ಇಟ್ಟು ಹೇಳಿದ್ದು , ಜನಕ್ಕೆ ಇನ್ನಷ್ಟು ಹತ್ತಿರವಾಗಿದ್ದು ಸುಳ್ಳಲ್ಲ. ನಿಮ್ಮ ವಿಚಾರ ನಮ್ಮ ವಿಚಾರ ಏನೇ ಇದ್ರೂ ಮಾತಾಡಿ, ಆದ್ರೆ ನಮ್ಮ ತಂದೆ ಬಗ್ಗೆ ಇನ್ನೊಂದು ಮಾತನಾಡಬೇಡಿ, ಬೇಕಾದ್ರೆ ನಿಮ್ಮಲ್ಲಿ ನನ್ನ ಕೈಮುಗಿದು ಬೇಡಿಕೊಳ್ಳುತ್ತೀನಿ, ಎಂದು ಪರೋಕ್ಷವಾಗಿ ಬೆಂಕಿ ಚೆಲ್ಲಿದ ಅಭಿಷೇಕ್ ಮಾತಿನಲ್ಲಿ ಗೆಲುವಿನ ನಂಭಿಕೆ ಇತ್ತು.

ಹೌದು, ಜನಕೂಡಾ ಇದನ್ನೇ ಆಲೋಚನೆ ಮಾಡಿದ್ದಾರೇನೋ, ಹೆಮ್ಮೆಯ ಕಲಾವಿದನಾಗಿ, ಭಲಿಷ್ಟ ರಾಜಕಾರಣಿಯಾಗಿ, ಹಾಗೂ ಹಲವಾರು ಅಭಿಮಾನಿಗಳ ಆರಾಧ್ಯ ದೈವವಾಗಿ, ಸಧ್ಯ ನಮ್ಮನ್ನೆಲ್ಲಾ ಆಗಲಿರುವ ಅವರ ಬಗ್ಗೆ ಈಗ ಕಟುವಾಗಿ ಮಾತನಾಡುವುದು, ರಾಜಕೀಯವಾಗಿ ಇಲ್ಲದವರ ಬಗೆಗೆ ದೂಷಿಸುವುದು ಎಷ್ಟು ಸರಿ….