ಕೋವಿಡ್-19 ಪಾಸಿಟಿವ್ ಬಂದಿರುವವರಿಗೆ ಮೊದಲು ಲಸಿಕೆ

ಲಸಿಕೆಯನ್ನು ಕೋವಿಡ್ ಪಾಸಿಟಿವ್ ಬಂದಿರುವವರಿಗೆ ಹಾಗೂ ಅವರ ಕುಟುಂಬದವರಿಗೆ ಮೊದಲು ನೀಡಬೇಕು ಎಂದು ಜಿಲ್ಲಾಧಿಕಾರಿ ಡಾ ಎಂ.ವಿ.ವೆಂಕಟೇಶ್ ಹೇಳಿದರು.

(Kannada News) : ಮಂಡ್ಯ: ಲಸಿಕೆಯನ್ನು ಕೋವಿಡ್ ಪಾಸಿಟಿವ್ ಬಂದಿರುವವರಿಗೆ ಹಾಗೂ ಅವರ ಕುಟುಂಬದವರಿಗೆ ಮೊದಲು ನೀಡಬೇಕು ಎಂದು ಜಿಲ್ಲಾಧಿಕಾರಿ ಡಾ ಎಂ.ವಿ.ವೆಂಕಟೇಶ್ ಹೇಳಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆವತಿಯಿಂದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಕೋವಿಡ್ -19 ಲಸಿಕೆ ಪರಿಚಯ ಕುರಿತ 3ನೇ ಜಿಲ್ಲಾ ಮಟ್ಟದ ಚಾಲನಾ ಸಭೆಯಲ್ಲಿ ಮಾತನಾಡಿದ ಅವರು, ಈ ಕೋವಿಡ್-19 ಚುಚ್ಚುಮದ್ದು ನೀಡುವಿಕೆಗೆ ಹಾಸ್ಟೆಲ್ ಗಳು, ಹೈಸ್ಕೂಲ್ ಗಳು, ಕಾಲೇಜುಗಳು, ವಸತಿ ಶಾಲೆಗಳು, ವೈದ್ಯಕೀಯ ಕಾಲೇಜುಗಳನ್ನ ಬಳಸಿಕೊಳ್ಳಿ ಎಂದರು.

ಬೆಡ್, ಚೇರ್, ಹಾಸಿಗೆ, ವ್ಯವಸ್ಥೆ ಗಳನ್ನು ಮಾಡಿಕೊಳ್ಳಿ, ಶೌಚಾಲಯ, ನೀರು, ಎಲ್ಲಾ ವ್ಯವಸ್ಥೆ ಕಲ್ಪಿಸಿ. ಕೋವಿಡ್-19 ವ್ಯಾಕ್ಸಿನೇಷನ್ ಕಂಟ್ರೋಲ್ ರೂಂ ಕೆಲಸ ಮಾಡುತ್ತಿದ್ದು. ಪರಿಶೀಲನಾ ಹಂತ, ಚುಚ್ಚುಮದ್ದು ನೀಡುವಿಕೆ ಹಂತ, ಚುಚ್ಚುಮದ್ದು ನಂತರದ ಪರೀಕ್ಷಾ ಹಂತ, ಇವುಗಳನ್ನ ಸಮರ್ಪಕವಾಗಿ ನಿರ್ವಹಿಸಿ ಎಂದು ತಿಳಿಸಿದರು.

ಕೋವಿಡ್-19 ಚುಚ್ಚುಮದ್ದನ್ನು ಮೊದಲಿಗೆ ಆರೋಗ್ಯ ಇಲಾಖೆಯ ಸಿಬ್ಬಂದಿಗಳಿಗೆ, ಫ್ರಂಟ್ ಲೈನ್ ವಾರಿಯರ್ಸ್ ಗಳಿಗೆ, ಪೌರಕಾರ್ಮಿಕರಿಗೆ ಹಾಗೂ 50 ವರ್ಷ ಮೇಲ್ಪಟ್ಟವರು ಎಂಬ 3 ವರ್ಗಗಳಾಗಿ ಚುಚ್ಚುಮದ್ದನ್ನು ನೀಡಲಾಗುತ್ತದೆ.

ಜಿಲ್ಲಾ ಆರ್.ಸಿ.ಎಚ್ ಅಧಿಕಾರಿ ಡಾ. ಎಂ.ಸಿ.ಸೋಮಶೇಖರ್ ಹೇಳಿದರು. ಚುಚ್ಚುಮದ್ದು ನೀಡುವಾಗ ಸ್ಥಳಗಳನ್ನು ಮೊದಲು ಪರೀಕ್ಷಿಸಿ, ಸಾಮಾಜಿಕ ಅಂತರದೊAದಿಗೆ, ಮಾಸ್ಕ್, ಸ್ಯಾನಿಟೈಸರ್ ಗಳನ್ನು ನೀಡಿ ಎಂದರು.

ಊರುಗಳಲ್ಲಿ ಶಿಬಿರಗಳನ್ನು ಏರ್ಪಡಿಸಿ ಮೊದಲು ವಿಕಲಚೇತನರಿಗೆ, ಇನ್ನಿತರ ರೋಗ ಇರುವವರಿಗೆ, ಪಾರ್ಶ್ವವಾಯು ಪೀಡಿತರಿಗೆ, ದುರ್ಬಲರಿಗೆ, ಕೋವಿಡ್ ಪೋರ್ಟಲ್ ನಲ್ಲಿ ನೋಂದಣಿ ಮಾಡಿದವರಿಗೆ ಮೊದಲು ಚುಚ್ಚುಮದ್ದನ್ನು ನೀಡಿ ಎಂದು ತಿಳಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಶೈಲಜಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಚ್ ಪಿ.ಮಂಚೇಗೌಡ, ವಾರ್ತಾ ಮತ್ತು ಪ್ರಸಾರ ಇಲಾಖೆಯ ಸಹಾಯಕ ನಿರ್ದೇಶಕರಾದ ಟಿ.ಕೆ.ಹರೀಶ್ ಮತ್ತಿತರರು ಉಪಸ್ಥಿತರಿದ್ದರು.

Web Title : First vaccine for Covid-19 positives

Scroll Down To More News Today