ಅತ್ಯಾಚಾರಿಗಳ ಮೇಲೆ ಮೃದು ಧೋರಣೆ ಸಲ್ಲದು: ಪರಶುರಾಮ್

ಪ್ರಜ್ಞಾವಂತರು ಮಹಿಳೆಯರ, ಮಕ್ಕಳ ರಕ್ಷಣೆಗೆ ಮುಂದಾಗಬೇಕು, ಅತ್ಯಾಚಾರಿಗಳ ಮೇಲೆ ಮೃದುಧೋರಣೆ ಸಲ್ಲದು ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಪರಶುರಾಮ್ ರವರು ಹೇಳಿದರು.

(Kannada News) : ಮಂಡ್ಯ: ಪ್ರಜ್ಞಾವಂತರು ಮಹಿಳೆಯರ, ಮಕ್ಕಳ ರಕ್ಷಣೆಗೆ ಮುಂದಾಗಬೇಕು, ಅತ್ಯಾಚಾರಿಗಳ ಮೇಲೆ ಮೃದುಧೋರಣೆ ಸಲ್ಲದು ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಪರಶುರಾಮ್ ರವರು ಹೇಳಿದರು.

ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಬೆಂಗಳೂರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಯುನಿಸೆಫ್ ಮತ್ತು ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ವಿಕಸನ ಸಂಸ್ಥೆ, ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆ ಇವರ ವತಿಯಿಂದ ನಗರದ ನೆಹರು ಯುವ ಕೇಂದ್ರದಲ್ಲಿ ನಡೆದ ಮಕ್ಕಳ ಹಕ್ಕುಗಳ ಅರಿವು ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ಈಗಾಗಲೇ ಕೊರೊನಾದಿಂದ ಅನೇಕ ಕಾರ್ಯಕ್ರಮಗಳು ನಿಂತಿವೆ.

ಆದರೆ ಮಹಿಳೆಯರು, ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ನಿಂತಿಲ್ಲದಿರುವುದು ಶೋಚನೀಯ ಸಂಗತಿಯಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಮಂಡ್ಯದ ಕೊಪ್ಪದಲ್ಲಿ ನಡೆದ ಬಾಲಕಿಯ ಅತ್ಯಾಚಾರ, ಕೊಲೆ ಪ್ರಕರಣ ಇಡೀ ನಾಗರಿಕ ಸಮಾಜವನ್ನು ತಲೆತಗ್ಗಿಸುವಂತೆ ಮಾಡಿದೆ. ಮಂಡ್ಯದಲ್ಲಿ ಮಕ್ಕಳ ಮಾರಾಟ, ಮರ್ಯಾದೆ ಹತ್ಯೆ, ಮಾನವ ಸಾಗಾಣಿಕೆ, ಅತ್ಯಾಚಾರ ಇಂತಹ ಪ್ರಕರಣಗಳು ಹೆಚ್ಚಾಗುತ್ತಿವೆ.

ಮಕ್ಕಳ ಆಯೋಗವು ಕಠೋರ ನಿರ್ಧಾರಗಳನ್ನು ಕೈಗೊಂಡಿದೆ ಈ ಮೂಲಕ ಜಾಗೃತಿ ಮೂಡಿಸಿ, ಕೆಲಸಗಳನ್ನು ಕೈಗೊಳ್ಳಬೇಕಿದೆ.

ನಿಮ್ಮ ಮಕ್ಕಳು ಮೊಬೈಲ್‌ನಲ್ಲಿ ಯಾವ ತಾಂತ್ರಿಕತೆ ಅಂಶಗಳನ್ನು ಹೇಗೆ ಬಳಕೆ ಮಾಡುತ್ತಾರೆ ಎಂಬುದನ್ನು ತಾಯಿಯಂದಿರು ತಿಳಿದುಕೊಳ್ಳಿ ಅವರಿಗೆ ಹೆಣ್ಣು ಮಕ್ಕಳ ಮೇಲೆ ಗೌರವ ಮನೋಭಾವ ಮೂಡುವಂತೆ ಮಾಡಿ ಎಂದರು.

ಹೆಣ್ಣು ಮಕ್ಕಳನ್ನು ಕಾಪಾಡಿ, ತಪ್ಪು ಮಾಡಿದವರ ವಿರುದ್ದ ಮೌನ ಮುರಿಯಬೇಡಿ, ಹೋರಾಟ ಕೈಗೊಳ್ಳಿ, ಮಕ್ಕಳ ಉಳಿವು, ರಕ್ಷಣೆಗೆ ನಮ್ಮೊಳಗಿನ ಇಚ್ಚಾಶಕ್ತಿ, ಅಂತಃಕರಣವೂ ಬದಲಾದರೇ ಮಾತ್ರ ಸಾಧ್ಯ ಎಂದರು.

ಸ್ವಯA ಸೇವಾ ಸಂಸ್ಥೆಗಳು, ಇಷ್ಟು ಕೆಲಸ ಮಾಡಿದರು ಮಹಿಳೆಯರ ಮೇಲೆ, ಮಕ್ಕಳ ಮೇಲೆ ದೌರ್ಜನ್ಯಗಳು ನಡೆಯುತ್ತಿವೆ ಈ ನಿಟ್ಟಿನಲ್ಲಿ ಉತ್ತಮ ಕಾಯ್ದೆಗಳು ರೂಪಗೊಂಡು ತಪ್ಪಿಸ್ಥರಿಗೆ ಶಿಕ್ಷೆ ಆಗಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ಮೈಸೂರಿನ ಒಡನಾಡಿ ಸಂಸ್ಥೆಯ ಸ್ಟಾನ್ಲಿ ಕೆ.ವಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳಾದ ಬಸವರಾಜು, ವಿಕಸನ ಸಂಸ್ಥೆಯ ನಿರ್ದೇಶಕರಾದ ಮಹೇಶ್ ಚಂದ್ರಗುರು, ಮಕ್ಕಳ ಸಹಾಯವಾಣಿಯ ನೋಡಲ್ ನಿರ್ದೇಶಕರಾದ ವೆಂಕಟೇಶ್, ಕಾರ್ಮಿಕ ಇಲಾಖೆಯ ನಾಗರತ್ನ, ನೆಹರು ಯುವ ಕೇಂದ್ರದ ಲೆಕ್ಕಾಧಿಕಾರಿ ಬಸವರಾಜು ಮತ್ತಿತರರು ಉಪಸ್ಥಿತರಿದ್ದರು.

Web Title : There is no soft attitude towards rapists

Scroll Down To More News Today