ತಂದೆಯಿಂದಲೇ ಗರ್ಭಿಣಿಯಾದ ಯುವತಿ-ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಪ್ರಥಮ

Mangalore (itskannada)ಮಂಗಳೂರು – ತಂದೆಯಿಂದಲೇ ಗರ್ಭಿಣಿಯಾದ ಯುವತಿ-ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಪ್ರಥಮ : ತನ್ನ ತಂದೆಯಿಂದ ಲೈಂಗಿಕ ಕಿರಿಕುಳಕ್ಕೆ ಒಳಗಾಗಿ ಗರ್ಭಿಣಿಯಾದ ಬಾಲಕಿಯು ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಪ್ರಥಮ ದರ್ಜೆಯನ್ನು ಪಡೆಯುವುದರ ಮೂಲಕ ಪಾಸಾಗಿದ್ದಾಳೆ.16 ವರ್ಷದ ಬಾಲಕಿಯಾಗಿದ್ದ ವೇಳೆ ಸ್ವತಃ ತನ್ನ ತಂದೆಯು ದುಷ್ಕೃತ್ಯವೆಸಗಿದ್ದರೂ, ಗಟ್ಟಿ ಮನಸ್ಸು ಮಾಡಿ ಪರೀಕ್ಷೆಗೆ ಹಾಜರಾಗಿದ್ದಳು. ಇದೀಗ ಆಕೆ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ 360 ಅಂಕಗಳನ್ನು ಪಡೆಯುವ ಮೂಲಕ ಪ್ರಥಮ ಶ್ರೇಣಿಯಲ್ಲಿ ಪಾಸಾಗಿದ್ದಾಳೆ.

ಪರೀಕ್ಷೆ ಬರೆಯುವ ವೇಳೆಯಲ್ಲಿ ಬಾಲಕಿಯು 8 ತಿಂಗಳ ಗರ್ಭಿಣಿಯಾಗಿದ್ದಳು ಹಾಗೂ ಜಿಲ್ಲಾಡಳಿತವು ಈಕೆಗೆ ಬೆಂಬಲ ನೀಡಿ ಪರೀಕ್ಷೆ ಬರೆಯಲು ವಿಶೇಷ ವ್ಯವಸ್ಥೆ ಮಾಡಿಕೊಟ್ಟಿದೆ, ದುರಂತದ ನಡೆವೆಯೂ ಯಶಸ್ಸು ಕಂಡಿರುವುದು ನನಗೆ ಸಂತೋಷವನ್ನು ಉಂಟು ಮಾಡಿದೆ ಎಂದು ಮಕ್ಕಳ ಕಲ್ಯಾಣ ಇಲಾಖೆಯ ರೆನ್ನಿ ಡಿ’ಸೋಜಾ ಅವರು ತಿಳಿಸಿದ್ದಾರೆ. ಎರಡು ವಾರಗಳ ಒಳಗಾಗಿ ಆಕೆ ಹೆರಿಗೆಯಾಗಲಿದ್ದಾಳೆ, ಹುಡುಗಿಗೆ ಸಹಕರಿಸಿದ ಜಿಲ್ಲಾ ಅಧಿಕಾರಿಗಳು, ಶಿಕ್ಷಣ ಇಲಾಖೆ, ಪೊಲೀಸರಿಗೆ ಧನ್ಯವಾದಗಳನ್ನು ತಿಳಿಸಿದರು. //// ಈ ವಿಭಾಗದ ಇನ್ನಷ್ಟು ಸುದ್ದಿಗಳಿಗೆ ಕ್ಲಿಕ್ಕಿಸಿ – Mangalore News Online