ವರ್ಷಾಚರಣೆಗೆ ಮೋಜು-ಮಸ್ತಿ ಮಾಡಿದರೆ ಕ್ರಮ

ಮಹಾಮಾರಿ ಕೊರೋನ ಹಿನ್ನೆಲೆಯಲ್ಲಿ ಹೊಸವರ್ಷ ಆಚರಣೆಗೆ ಮೋಜು-ಮಸ್ತಿ ನಡೆಸದಂತೆ ಮತ್ತು ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ನೀಡದಂತೆ ಸೂಚಿಸಲಾಗಿದೆ.

(Kannada News) : ಮೈಸೂರು: ಮಹಾಮಾರಿ ಕೊರೋನ ಹಿನ್ನೆಲೆಯಲ್ಲಿ ಹೊಸವರ್ಷ ಆಚರಣೆಗೆ ಮೋಜು-ಮಸ್ತಿ ನಡೆಸದಂತೆ ಮತ್ತು ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ನೀಡದಂತೆ ಸೂಚಿಸಲಾಗಿದ್ದು ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ವತಿಯಿಂದ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಮೈಸೂರಿನ ಹಿರಿಯ ಪೊಲೀಸ್ ಅಧಿಕಾರಿ ಆರ್.ಶಿವಕುಮಾರ್ ತಿಳಿಸಿದ್ದಾರೆ.

ನಂಜನಗೂಡು ತಾಲೂಕು ಚಿಕ್ಕಯ್ಯನಛತ್ರ ಗ್ರಾಮದಲ್ಲಿ ಸರಗಳ್ಳತನ ನಡೆದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಈ ಬಾರಿ ಕೊರೋನ ಮಹಾಮಾರಿ ಸೋಂಕಿನಿಂದ ಹಲವಾರು ಸಾವು-ನೋವುಗಳು ಸಂಭವಿಸಿದ್ದು, ಈ ಹಿನ್ನೆಲೆಯಲ್ಲಿ ಈ ರೋಗವನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರದ ಸೂಚನೆಯಂತೆ ಈ ಬಾರಿಯ ಹೊಸವರ್ಷ ಸಂಭ್ರಮಾಚರಣೆಗೆ ತಡೆ ಹಾಕಲಾಗಿದೆ.

ಸಾರ್ವಜನಿಕರು ಹೊಸವರ್ಷ ಎಂದು ಹೇಳಿಕೊಂಡು ಮೋಜು-ಮಸ್ತಿ ಮಾಡುವುದಾಗಲಿ ಅಥವಾ ಗುಂಪು ಸೇರಿಕೊಳ್ಳುವುದಾಗಲಿ ಮಾಡುವುದು ಕಂಡು ಬಂದರೆ ಅಂಥವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದರು.

ಎಲ್ಲಿಯಾದರೂ ಹೊಸ ವರ್ಷಾಚರಣೆ ಸಂಭ್ರಮದಲ್ಲಿ ಸಾರ್ವಜನಿಕರು ಕಂಡು ಬಂದರೆ ಹತ್ತಿರದ ಪೊಲೀಸ್ ಠಾಣೆಗೆ ವಿಷಯವನ್ನು ತಿಳಿಸಿ ಪೊಲೀಸ್ ಇಲಾಖೆಗೆ ಸಹಕಾರ ನೀಡಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಡಿವೈಎಸ್ಪಿ ಗೋವಿಂದರಾಜು ಸರ್ಕಲ್ ಇನ್ಸ್ ಪೆಕ್ಟರ್ ತಳವಾರ್, ಇನ್ಸ್ ಪೆಕ್ಟರ್ ಸತೀಶ್ ಸೇರಿದಂತೆ ಹಲವರು ಇದ್ದರು.

Web Title : certain restrictions to celebrate New Year

Scroll Down To More News Today