ರೈಲ್ವೆ ಫೆನ್ಸಿಂಗ್ ದಾಟಲಾಗದೆ ಆನೆ ಸಾವು

Elephant dies trying to cross fence in Nagarhole

ರೈಲ್ವೆ ಫೆನ್ಸಿಂಗ್ ದಾಟಲಾಗದೆ ಆನೆ ಸಾವು

ಶನಿವಾರದಂದು ಕರ್ನಾಟಕದ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಕಬ್ಬಿಣದ ಫೆನ್ಸಿಂಗ್ ದಾಟಲು ಪ್ರಯತ್ನಿಸಿದ ಗಂಡು ಆನೆ ಸಾವನ್ನಪ್ಪಿದೆ.

ಆನೆಗಳು ವಸತಿ ಪ್ರದೇಶಕ್ಕೆಬರುವುದನ್ನುತಡೆಯಲು ಉದ್ಯಾನದ ಭಾಗಗಳಲ್ಲಿ ಕಬ್ಬಿಣದ ಬೇಲಿಗಳನ್ನು ನಿರ್ಮಿಸಲಾಗಿದೆ.

ಅದನ್ನು 42 ವರ್ಷದ ವಯಸ್ಸಿನ ಆನೆಯೊಂದು ದಾಟಿ ಶುಕ್ರವಾರ ವೀರಹೋಸಹಳ್ಳಿಗೆ ಲಗ್ಗೆಯಿಟ್ಟು ಬೆಳೆಗಳ ಮೇಲೆ ದಾಳಿ ಮಾಡಿದೆ.

ವಿಷಯ ತಿಳಿದ ಗ್ರಾಮಸ್ಥರು ಮತ್ತೆ ಆನೆಯನ್ನು ಕಾಡಿಗಟ್ಟಲು ಪ್ರಯತ್ನಿಸಿ ಅಲ್ಲಿಂದ ಹಿಂದಕ್ಕೆ ಹೊರಡಿಸಿದ್ದಾರೆ. ಗ್ರಾಮಕ್ಕೆ ಹೋಗುವಾಗ ಹೇಗೋ ಫೆನ್ಸಿಂಗ್ ದಾಟಿದ್ದ ಆನೆ ಮತ್ತೆ ಕಾಡಿನ ಕಡೆ ಬರುವಾಗ ಫೆನ್ಸಿಂಗ್ ದಾಟಲಾಗದೆ ಅರ್ಧಕ್ಕೆ ಸಿಲುಕಿದೆ.

ಬಾರೀ ಗಾತ್ರದ ಆನೆ ದಾಟಲೂ ಆಗದೆ ಹಿಂದಕ್ಕೆ ಬರಲೂ ಆಗದೆ ಇದ್ದಲ್ಲೇ ಇದ್ದು ಬಿಟ್ಟಿದೆ. ಆನೆಯು ಫೆನ್ಸಿಂಗ್ ಮೇಲೆ ಬಿದ್ದ ಒತ್ತಡದ ಕಾರಣದಿಂದ ತೀವ್ರ ಆಯಾಸಗೊಂಡಿದೆ.

ಅಲ್ಲದೇ ಉಸಿರುಗಟ್ಟುವಿಕೆ ಉಂಟಾಗಿತ್ತು ಎಂದು ಅರಣ್ಯ ಪ್ರದೇಶದ ಸಂರಕ್ಷಣಾಧಿಕಾರಿ ಮತ್ತು ನಾಗರಹಳ್ಳಿ ರಾಷ್ಟ್ರೀಯ ಉದ್ಯಾನ ನಿರ್ದೇಶಕ ಕೆ.ಎಂ.ನಾರಾಯಣಸ್ವಾಮಿ ತಿಳಿಸಿದ್ದಾರೆ.

ಹೊರಬರಲು ಪ್ರಯತ್ನಿಸಿದರೂ ಸಹ ಆಗದೆ , ಕೊನೆಗೆ ಆನೆ ಸುಮಾರು ಮುಂಜಾನೆ 5 ಗಂಟೆಗೆ ನಿಧನಹೊಂದಿದೆ. ////

WebTitle : ರೈಲ್ವೆ ಫೆನ್ಸಿಂಗ್ ದಾಟಲಾಗದೆ ಆನೆ ಸಾವು-Elephant dies trying to cross fence in Nagarhole

>>> ಕ್ಲಿಕ್ಕಿಸಿ ಕನ್ನಡ ನ್ಯೂಸ್  : Latest Kannada NewsKannada News Today