ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ವಾರ್ ಗಿಳಿದ ವಾರಗಿತ್ತಿಯರು

ಇಲ್ಲಿ ವಾರಗಿತ್ತಿಯರೇ ಪ್ರತಿಸ್ಪರ್ಧಿಗಳಾಗಿದ್ದರೆ, ಜೋಡಿ ದಂಪತಿ, ತಂದೆ-ಮಗ ಪ್ರತ್ಯೇಕ ಸ್ಪರ್ಧೆ ಹೀಗೆ ಹತ್ತಾರು ಕುತೂಹಲಕಾರಿ ವಿಚಾರಗಳು ಹೊರಬರುತ್ತಿವೆ. ಎಲ್ಲರೂ ಗೆದ್ದೇ ಗೆಲ್ಲ ಬೇಕೆಂಬ ಪಣತೊಟ್ಟು ಮತದಾರರ ಕೈಕಾಲು ಹಿಡಿದು ಮತಯಾಚನೆಗೆ ಇಳಿದಿದ್ದಾರೆ

(Kannada News) : ಮೈಸೂರು: ಹಳ್ಳಿ ಸಮರ ದಿನದಿಂದ ದಿನಕ್ಕೆ ಕಾವೇರುತ್ತಿದೆ. ಬಹಳಷ್ಟು ಕಡೆ ಸ್ಪರ್ಧೆಗಳಿದಿರುವ ಅಭ್ಯರ್ಥಿಗಳನ್ನು ನೋಡಿದರೆ ಅಚ್ಚರಿಯಾಗುತ್ತದೆ. ಇಲ್ಲಿ ವಾರಗಿತ್ತಿಯರೇ ಪ್ರತಿಸ್ಪರ್ಧಿಗಳಾಗಿದ್ದರೆ.

ಜೋಡಿ ದಂಪತಿ, ತಂದೆ-ಮಗ ಪ್ರತ್ಯೇಕ ಸ್ಪರ್ಧೆ ಹೀಗೆ ಹತ್ತಾರು ಕುತೂಹಲಕಾರಿ ವಿಚಾರಗಳು ಹೊರಬರುತ್ತಿವೆ. ಎಲ್ಲರೂ ಗೆದ್ದೇ ಗೆಲ್ಲ ಬೇಕೆಂಬ ಪಣತೊಟ್ಟು ಮತದಾರರ ಕೈಕಾಲು ಹಿಡಿದು ಮತಯಾಚನೆಗೆ ಇಳಿದಿದ್ದಾರೆ.

ಹುಣಸೂರು ತಾಲೂಕಿನ ಕಟ್ಟೆಮಳಲವಾಡಿ ಗ್ರಾಮ ಪಂಚಾಯ್ತಿತಿಯಲ್ಲಿ ಕಳೆದ ಅವಧಿಯ ಚುನಾವಣೆಗೆ ನಾಲ್ಕು ಜೋಡಿ ದಂಪತಿಗಳು ಹಾಗೂ ಎರಡು ಜೋಡಿ ಅಪ್ಪ-ಮಕ್ಕಳು ಸ್ಪರ್ಧಿಸಿ ಗಮನಸೆಳೆದಿದ್ದರು.

ವಾರಗಿತ್ತಿಯರ ನಡುವೆ ಬಿರುಸಿನ ಸ್ಪರ್ಧೆ

ಈ ಬಾರಿ ಕಟ್ಟೆಮಳಲವಾಡಿ ಗ್ರಾ.ಪಂ.ನ 3ನೇ ಬ್ಲಾಕ್‌ನಲ್ಲಿ ವಾರಗಿತ್ತಿಯರ ನಡುವೆ ಬಿರುಸಿನ ಸ್ಪರ್ಧೆ ಇದ್ದು, ಸಹೋದರರಾದ ಶಿವು ಪತ್ನಿ ಭಾರತಿ, ಕಿರಣ್ ಪತ್ನಿ ಮಂಜುಳ ಪ್ರತಿಸ್ಪರ್ಧಿಗಳಾಗಿದ್ದಾರೆ.

ಇನ್ನು ಮಾಜಿ ಉಪಾಧ್ಯಕ್ಷ ವೀರಭದ್ರಯ್ಯ ಒಂದೇ ಬ್ಲಾಕ್‌ನಿಂದ, ಪತ್ನಿ ಶಿವಮ್ಮ 2ನೇ ಬ್ಲಾಕ್‌ನಿಂದ ಹಾಗೂ ನಾಗೇಂದ್ರಶೆಟ್ಟಿ 5ನೇ ಬ್ಲಾಕ್‌ನಿಂದ, ಪತ್ನಿ ರುಕ್ಮಿಣಿ ಒಂದನೇ ಬ್ಲಾಕ್‌ನಿಂದ(ಇಬ್ಬರೂ ಮಾಜಿ ಸದಸ್ಯರು) ಕಣಕ್ಕಿಳಿದ ಜೋಡಿ ದಂಪತಿಗಳು.

ಮಾಜಿ ಸದಸ್ಯ ವೆಂಕಟರಮಣ ನಾಲ್ಕನೇ ಬ್ಲಾಕ್‌ನಿಂದ ಹಾಗೂ ಇವರ ಪುತ್ರ ಸುಂದರ್ ಎರಡನೇ ಬ್ಲಾಕ್‌ನಿಂದ ಸ್ಪರ್ಧೆಗಿಳಿದಿದ್ದಾರೆ.

ಮಾಜಿ ಅಧ್ಯಕ್ಷರಾದ ಇದ್ರೀಸ್, ಗೌಸ್‌ಷರೀಫ್ ಸೇರಿದಂತೆ ಮಾಜಿ ಉಪಾಧ್ಯಕ್ಷ ವೀರಭದ್ರಯ್ಯ, ಮಾಜಿಸದಸ್ಯರಾದ ದೇವರಾಜ್, ನಾಗೇಂದ್ರ, ರುಕ್ಮಿಣಿ, ಶಿವು, ಪ್ರೇಮಪ್ರಸಾದ್, ವೆಂಕಟರಮಣ ಮತ್ತೆ ಅದೃಷ್ಟ ಪರೀಕ್ಷೆಗಿಳಿದಿದ್ದರೆ, ಈ ಬಾರಿ ಹಲವಾರು ಮಂದಿ ಹೊಸಬರು ಕಣದಲ್ಲಿದ್ದು, 16 ಸ್ಥಾನಕ್ಕೆ 63 ಮಂದಿ ಕಣದಲ್ಲಿರುವುದು ಕುತೂಹಲಕಾರಿಯಾಗಿದೆ.

Web Title : Surprise in Gram Panchayat Election Mysore

Scroll Down To More News Today