Video, ದೆಹಲಿಯಲ್ಲಿ ಚೈನ್ ಸ್ನ್ಯಾಚಿಂಗ್, ಸಿನಿಮೀಯ ರೀತಿಯಲ್ಲಿ ಎಸ್ಕೇಪ್

ವ್ಯಕ್ತಿಯನ್ನು ತಡೆದು ಚಿನ್ನದ ಸರ ಲಪಟಾಯಿಸಿ ಎಸ್ಕೇಪ್

ಬೈಕ್ ನಲ್ಲಿ ಬಂದ ಮೂವರು ಅವರ ಮುಂದೆ ಬೈಕ್‌ ನಿಲ್ಲಿಸಿ, ಆ ವ್ಯಕ್ತಿಯ ಬಳಿ ಜಗಳ ಕಿತ್ತಿದ್ದಾರೆ. ಅಂಗಿಯನ್ನು ಹಿಡಿದು ಎಳೆದಾಡಿದ್ದಾರೆ. ನಂತರ ಆ ಮೂವರು ಒಟ್ಟಿಗೆ ಬೈಕ್ ನಲ್ಲಿ ಹೋಗುತ್ತಿರುವಂತೆ ನಟಿಸಿ, ನಂತರ ಹಿಂಭಾಗದಲ್ಲಿ ಕುಳಿತಿದ್ದ ವ್ಯಕ್ತಿ ಮಾತ್ರ ಮತ್ತೆ ಬೈಕ್‌ನಿಂದ ಇಳಿದು ವ್ಯಕ್ತಿಯ ಬಳಿ ಚಿನ್ನದ ಸರ ಕಸಿದುಕೊಂಡಿದ್ದಾನೆ.

( Kannada News ) ನವದೆಹಲಿ : ರಾಷ್ಟ್ರ ರಾಜಧಾನಿಯ ಹೊರವಲಯದಲ್ಲಿ ಖತರ್ನಾಕ್ ಕಳ್ಳರ ಗುಂಪೊಂದು ವ್ಯಕ್ತಿಯನ್ನು ತಡೆದು ಚಿನ್ನದ ಸರ ಲಪಟಾಯಿಸಿ ಎಸ್ಕೇಪ್ ಆಗಿದ್ದಾರೆ. ಹಸುಗಳಿಗೆ ಬಾಳೆಹಣ್ಣನ್ನು ತಿನ್ನಲು ಕೊಟ್ಟು ವಾಪಸ್ ಹೊರಟಿದ್ದ ವ್ಯಕ್ತಿಯನ್ನು ತನ್ನ ಸೆಲ್ ಫೋನ್‌ನಲ್ಲಿ ಮಾತನಾಡುತ್ತ ಬಂದ ವ್ಯಕ್ತಿ ಬೇಕಂತಲೇ ಕಾಲು ಅಡ್ಡಕೊಟ್ಟಿದ್ದಾನೆ.

ನಂತರ ಅದೇ ಮಾರ್ಗದಲ್ಲಿ ಬೈಕ್ ನಲ್ಲಿ ಬಂದ ಮೂವರು ಅವರ ಮುಂದೆ ಬೈಕ್‌ ನಿಲ್ಲಿಸಿ, ಆ ವ್ಯಕ್ತಿಯ ಬಳಿ ಜಗಳ ಕಿತ್ತಿದ್ದಾರೆ. ಅಂಗಿಯನ್ನು ಹಿಡಿದು ಎಳೆದಾಡಿದ್ದಾರೆ. ನಂತರ ಆ ಮೂವರು ಒಟ್ಟಿಗೆ ಬೈಕ್ ನಲ್ಲಿ ಹೋಗುತ್ತಿರುವಂತೆ ನಟಿಸಿ, ನಂತರ ಹಿಂಭಾಗದಲ್ಲಿ ಕುಳಿತಿದ್ದ ವ್ಯಕ್ತಿ ಮಾತ್ರ ಮತ್ತೆ ಬೈಕ್‌ನಿಂದ ಇಳಿದು ವ್ಯಕ್ತಿಯ ಬಳಿ ಚಿನ್ನದ ಸರ ಕಸಿದುಕೊಂಡಿದ್ದಾನೆ.

ಚಿನ್ನದ ಸರ ಕಿತ್ತುಕೊಂಡು ವ್ಯಕ್ತಿಯ ಮುಖಕ್ಕೆ ಕಪಾಳಮೋಕ್ಷ ಮಾಡಿ, ಅವನನ್ನು ಕೆಳಕ್ಕೆ ತಳ್ಳಿ ಓಡಿಹೋಗಿದ್ದಾರೆ. ಇವೆಲ್ಲವೂ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ವ್ಯಕ್ತಿ ನೀಡಿದ ದೂರಿನ ನಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

Source Hindustan Times
Via YouTube
Scroll Down To More News Today