ಶಾಕಿಂಗ್, ಮೈ ಮರೆತು ನಿದ್ದೆ ಮಾಡಿದ್ರೆ ಏನಾಗುತ್ತೆ ಈ ವೀಡಿಯೋ ನೋಡಿ

Consumer who attempted to steal Caught on Security Camera

ಶಾಕಿಂಗ್, ಮೈ ಮರೆತು ನಿದ್ದೆ ಮಾಡಿದ್ರೆ ಏನಾಗುತ್ತೆ ಈ ವೀಡಿಯೋ ನೋಡಿ – Consumer who attempted to steal Caught on Security Camera

ಚಿಂತೆ ಇಲ್ಲದವನಿಗೆ ಸಂತೆಯಲ್ಲೂ ನಿದ್ದೆ, ಅನ್ನೋ ಗಾದೆ ಕೇಳಿದ್ದೀರಲ್ಲ. ಅದೇ ಈ ವಿಡಿಯೋದಲ್ಲೂ ಆಗಿದ್ದು, ಯಾರೂ ಗಿರಾಕಿ ಬರದಿದ್ದಾಗ ಅಂಗಡಿ ಮಾಲೀಕ ನೋಡಿ ನೋಡಿ ನಿದ್ದೆಗೆ ಜಾರಿದ್ದಾನೆ.

ಅದೇ ಸಮಯಕ್ಕೆ ಬಂದ ಗ್ರಾಹಕನೊಬ್ಬ , ಅಂಗಡಿ ಮಾಲೀಕ ಗಾಢ ನಿದ್ದೆಗೆ ಜಾರಿರುವುದನ್ನು ಗಮನಿಸಿ, ಇದೆ ಒಳ್ಳೆ ಸಮಯವೆಂದು ಗಲ್ಲಾ ಪೆಟ್ಟಿಗೆಗೆ ಕೈ ಆಕಿದ್ದಾನೆ, ಅವನ ದುರಾದೃಷ್ಟವೋ ಅಂಗಡಿ ಮಾಲೀಕನ ಅದೃಷ್ಟವೋ, ಎಷ್ಟೇ ಹುಡುಕಿದರೂ ಗಲ್ಲಾ ಪೆಟ್ಟಿಗೆಯಲ್ಲಿ ಹಣ ಸಿಗುವುದೇ ಇಲ್ಲ.

ಪ್ರಯತ್ನ ಪಟ್ಟು ಪಟ್ಟು, ಆಕಸ್ಮಿಕವಾಗಿ, ಕೈ ತಪ್ಪಿ ಕ್ಯಾಶ್ ಕೌನ್ ಟರ್ ನಲ್ಲಿ ಶಬ್ದವಾಗುತ್ತದೆ. ಗಾಢ ನಿದ್ದೆಯಲ್ಲಿದ್ದ ಅಂಗಡಿ ಮಾಲೀಕ ಏನಪ್ಪಾ ಇದು ಶಬ್ದ ಎಂದು ನಿದ್ದೆಯಿಂದ ತೇರ್ಗಡೆ ಆದ ತಕ್ಷಣ, ಕಳ್ಳ ಗ್ರಾಹಕ ಅಲ್ಲಿಂದ ಕಾಲ್ಕಿಳುತ್ತಾನೆ…

ನೋಡಿದ್ರಲ್ಲಾ ಸ್ನೇಹಿತರೆ, ಎಚ್ಚರ, ನಮ್ಮ ಕೆಲವು ವೀಕ್ನೆಸ್ ಆನ್ನೇ ಕೆಲವರು ಬಂಡವಾಳವನ್ನಾಗಿ ಮಾಡಿಕೊಳ್ಳುತ್ತಾರೆ. ನಮ್ಮ ಜಾಗ್ರತೆಯಲ್ಲಿ ನಾವು ಇರಬೇಕು, ಇಲ್ಲದೆ ಹೋದರೆ ಇಲ್ಲಿ ನಡೆದದ್ದೇ ನಮಗೂ ನಡೆಯಬಹುದು. ಇಲ್ಲಿ ಮಾಲೀಕನ ಅದೃಷ್ಟ ಚನ್ನಾಗಿತ್ತು, ಆದರೆ ಎಲ್ಲರ ಅದೃಷ್ಟ ಈಗೆ ಇರುತ್ತೆ ಅಂತ ಹೇಳೋಕೆ ಹಾಗೋಲ್ಲ . . . . ..