ಈ ಭಯಂಕರ ಆಕ್ಸಿಡೆಂಟ್ ವೀಡಿಯೋ ನೀವು ನೋಡಲೇ ಬೇಕು.
[story-lines]
ರಸ್ತೆ ಮೇಲೆ ಬಂದ್ವಿ ಅಂದ್ರೆ, ಕೇವಲ ನಾವು ಜಾಗರೂಕತೆಯಿಂದ ವಾಹನ ಚಾಲನೆ ಮಾಡಿದರೆ ಸಾಲದು ? ನಮ್ಮ ಅಕ್ಕ ಪಕ್ಕದವರು ಅಜಾಗರೂಕತೆಯಿಂದ ವಾಹನ ಚಾಲನೆ ಮಾಡಿದ್ರೂ ಕೂಡ ಅದಕ್ಕೆ ತಕ್ಕ ಬೆಲೆ ನಾವೇ ತೆತ್ತ ಬೇಕಾಗುತ್ತದೆ.
ಈ ವಿಡಿಯೋದಲ್ಲಿ ನೋಡಿ, ಸಧ್ಯ ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಾರ್ ಚಾಲಕನೊಬ್ಬ ಅಜಾಗರೂಕತೆಯಿಂದ ವಾಹನ ಚಲಾಯಿಸಿ, ಬೈಕ್ ಸವಾರನ ಪ್ರಾಣಕ್ಕೆ ತಂದಿದ್ದಾನೆ ಕಂಟಕ.
ಅದ್ಯಾಕೆ ಅವನು ರಸ್ತೆ ಪಕ್ಕದಲ್ಲಿ ವಾಹನ ನಿಲ್ಲಿಸಿ, ಮತ್ಯಾಕೆ ಅಡ್ಡಾ ದಿಡ್ಡಿ ಎಡಗಡೆಗೆ ತಿರುಗಿದನೋ ಗೊತ್ತಿಲ್ಲ. ವಾಹನಗಳು ಯಾವೂ ಬರುತ್ತಿಲ್ಲ ಎಂದು ಖಾತರಿ ಪಡಿಸಿಕೊಳ್ಳದೆ ಮುನ್ನುಗ್ಗಿ, ಬೈಕ್ ಸವಾರನ ಪಾಲಿಗೆ ಯಮನಾಗಿದ್ದಾನೆ.
ಇನ್ನು ಬೈಕ್ ಸವಾರ ಕೂಡ, ತಾನು ಕಂಟ್ರೋಲ್ ಮಾಡಲಾಗದ ಸ್ಪೀಡ್ ನಲ್ಲಿ ವಾಹನ ಚಾಲನೆ ಮಾಡುತ್ತಾ ಬಂದಿದ್ದೇ, ದೊಡ್ಡ ಅಪಘಾತಕ್ಕೆ ಕಾರಣ ಆಗಿದೆ.
ಬೈಕ್ ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ಪೂರ್ತಿ ಚಿಂದಿಯಾಗಿದೆ, ಇನ್ನು ತಕ್ಷಣ ನೆರವಿಗೆ ಬಂದ ಜನರು, ಬೈಕ್ ಚಾಲಕನನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಸಧ್ಯ ಚಾಲಕ ಸಾವು ಬಧುಕಿನ ನಡುವೆ ಹೊದ್ದಾಡುತ್ತಿದ್ದಾನೆ……
ಸ್ನೇಹಿತರೆ, ವಾಹನ ಚಾಲನೆಯ ಜಾಗರೂಕತೆ ಕೇವಲ ನಮ್ಮ ಪ್ರಾಣ ಸುರಕ್ಷತೆಗೆ ಮಾತ್ರವಲ್ಲ. ಇನ್ನೊಬ್ಬರ ಸುರಕ್ಷತೆಯೂ ನಮ್ಮ ಗಮನದಲ್ಲಿ ಇರಬೇಕು, ಅವರಿಗೂ ಬದುಕೋ ಆಸೆ ಇರೋದಿಲ್ವಾ ? ಅವರಿಗೆ ನಮ್ಮಂತೆ ಕುಟುಂಬ , ಮಕ್ಕಳು ಹಾಗೆ ಸುಂದರ ಕನಸು ಇರೋದಿಲ್ವಾ..?
ನಾನೇಳೋದು ಇಷ್ಟೇ , ಇನ್ನ್ಮೇಲಾದ್ರೂ ನಾವು ವಾಹನ ಚಾಲನೆಯಲ್ಲಿ ಸುರಕ್ಷೆ ವಹಿಸೋಣ. ಜಾಗರೂಕತೆಯ ಚಾಲನೆ ಮಾಡೋಣ.ಎಲ್ಲಾ ರಸ್ತೆ ಸುರಕ್ಷತೆಯ ಕಾನೂನನ್ನು ಪಾಲಿಸೋಣ.
https://www.youtube.com/watch?v=jWalI2rUjJc