ಕಾಲೇಜಿನ ಪ್ರಾಂಶುಪಾಲರಿಗೆ ಕಪಾಳಮೋಕ್ಷ ಮಾಡಿದ ಶಾಸಕ, ವಿಡಿಯೋ ವೈರಲ್
ಕರ್ನಾಟಕದ ಜನತಾದಳ ಶಾಸಕ ಎಂ.ಶ್ರೀನಿವಾಸ್ ಕಾಲೇಜು ಪ್ರಾಂಶುಪಾಲರೊಬ್ಬರ ಮೇಲೆ ಕೈ ಮಾಡಿದ್ದಾರೆ.
ಮಂಡ್ಯ: ಕರ್ನಾಟಕದ ಜನತಾದಳ ಶಾಸಕ ಎಂ.ಶ್ರೀನಿವಾಸ್ ಕಾಲೇಜು ಪ್ರಾಂಶುಪಾಲರೊಬ್ಬರ ಮೇಲೆ ಕೈ ಮಾಡಿದ್ದಾರೆ. ಮಂಡ್ಯ ಕ್ಷೇತ್ರದ ಶಾಸಕ ಕೃಷ್ಣರಾಜ ಒಡೆಯರ್ ಐಟಿಐ ಕಾಲೇಜು ಪರಿಶೀಲನೆಗೆ ತೆರಳಿದ್ದರು. ಆದರೆ, ಕಾಲೇಜಿನಲ್ಲಿ ಕಂಪ್ಯೂಟರ್ ಲ್ಯಾಬ್ ಅಭಿವೃದ್ಧಿ ಕಾಮಗಾರಿ ಕುರಿತು ಕೇಳಿದಾಗ ಪ್ರಾಂಶುಪಾಲರು ಸರಿಯಾದ ಉತ್ತರ ನೀಡಿಲ್ಲ.
ಇದರಿಂದ ಆಕ್ರೋಶಗೊಂಡ ಶಾಸಕರು ಪ್ರಾಂಶುಪಾಲರ ಮೇಲೆ ಕೈ ಮಾಡಿದರು. ಪದೇ ಪದೇ ಅವರು ಕೈ ಮಾಡಲು ಮುಂದಾಗುವುದು ವಿಡಿಯೋದಲ್ಲಿ ಕಾಣಬಹದು. ಜೂನ್ 20 ರಂದು ಈ ಘಟನೆ ನಡೆದಿದೆ. ಈ ಘಟನೆಗೆ ಸಂಬಂಧಿಸಿದ ವಿಡಿಯೋ ಇದೀಗ ವೈರಲ್ ಆಗಿದೆ. ಎಂಎಲ್ ಎ ಪ್ರಾಂಶುಪಾಲರ ಮೇಲೆ ಕೈ ಮಾಡುವಾಗ ಬಗಲಲ್ಲಿ ನಿಂತಿದ್ದ ಎಲ್ಲರು ಸ್ತಬ್ಧರಾಗಿದ್ದರು.
ವಿಷಯ ಅದೇನೇ ಇರಲಿ, ಅವರೊಬ್ಬರು ಪ್ರಾಂಶುಪಾಲರು… ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯೇ ನೀಡುವ ಗುರುಗಳು, ಅವರ ಮೇಲೆ ಕೈ ಮಾಡುವುದು ಎಷ್ಟು ಸರಿ, ವಿದ್ಯಾರ್ಥಿಗಳ ಮೇಲೆ ಶಿಕ್ಷಕರು ಕೈ ಮಾಡಬಾರದು ಎಂಬ ಕಾನೂನು ಇರಬೇಕಾದರೆ, ಶಿಕ್ಷಕರನ್ನೇ ಹೊಡೆದರೆ ಸರಿಯೇ, ಅವರ ಮೇಲೆ ವಿದ್ಯಾರ್ಥಿಗಳ ಮನದಲ್ಲಿ ಮೂಡುವ ಭಾವನೆ ಏನು ? ಎನ್ನುತ್ತಿದ್ದಾರೆ ನೆಟ್ಟಿಗರು.
JanataDal MLA M Srinivas slaps the Principal of Nalwadi krishnaraja college in Karnataka in infront of everyone
This happens when power goes to head
Shame😈 pic.twitter.com/8RTCCud8Mo
— Sheetal Chopra 🇮🇳 (@SheetalPronamo) June 21, 2022
Janata Dal Leader Has Been Caught On Camera Slapping The Principal Of A College In Mandya