ಫುಟ್‌ಪಾತ್‌ ಮೇಲೆ ಬೈಕ್ ಸವಾರಿ, ಗ್ರಹಚಾರ ಬಿಡಿಸಿದ ಆಂಟಿ

Video, This aunty from Pune is stopping who ride on footpaths

KNT [ Kannada News Today ] : News Video

ಟ್ರಾಫಿಕ್ ಸಿಗ್ನಲ್ ಬಿತ್ತೆಂದರೆ ಸಾಕು, ತುಂಬಾ ಇಂಪಾರ್ಟೆನ್ಟ್ ಕೆಲಸ ಇರುತ್ತೋ ಬಿಡುತ್ತೋ, ಆಕಾಶಾನೆ ತಲೆ ಮೇಲೆ ಬಿದ್ದಂತೆ ದಟ್ಟಣೆ ಮಧ್ಯ ತಪ್ಪಿಸಿಕೊಳ್ಳಲು ಬೈಕು ಸವಾರರು ಬೈಕು ಮಾರ್ಗವನ್ನು ತಕ್ಷಣ ಫುಟ್ ಪಾತ್ ಕಡೆಗೆ ತಿರುಗಿಸಿಬಿಡುತ್ತಾರೆ.

ಹೇಗಾದರೂ ಟ್ರಾಫಿಕ್ ನಿಂದ ಸುಲಭವಾಗಿ ಹೊರಬರಲು, ಪಾದಚಾರಿಗಳಿಗಾಗಿ ನಿರ್ಮಿಸಲಾದ ಫುಟ್‌ಪಾತ್ ಅನ್ನು ಬೈಕ್‌ಗಳ ಮಾರ್ಗವಾಗಿ ಬಳಸಿಬಿಡುತ್ತಾರೆ. ಇದೇ ರೀತಿಯ ಘಟನೆಗಳಿಗೆ ಸಾಕ್ಷಿಯಾದ ಮಹಿಳೆ ಬೈಕ್‌ ಸವಾರರಿಗೆ ಗ್ರಹಚಾರ ಬಿಡಿಸಿದ್ದಾರೆ.

ಮೂಲತಹಃ ಪುಣೆಯ ಮಹಿಳೆ ನಿರ್ಮಲಾ ಗೋಖಲೆ ಆಗಾಗ್ಗೆ ಫುಟ್‌ಪಾತ್‌ಗಳಲ್ಲಿ ಬೈಕಿಂಗ್ ಮಾಡುವ ಜನರನ್ನು ಕಂಡು ರೋಸಿ ಹೋಗಿದ್ದರು. ಹೇಗಾದರೂ ಮಾಡಿ ಇದನ್ನು ತಪ್ಪಿಸಬೇಕೆಂದು ಬದಲಾವಣೆಗೆ ತಮ್ಮನ್ನು ತಾವು ತೊಡಸಿಕೊಂಡಿದ್ದಾರೆ.

ತನ್ನೊಂದಿಗೆ ಕೆಲವು ಜನರನ್ನು ಕರೆತಂದ ಆಕೆ ಫುಟ್‌ಪಾತ್‌ನಲ್ಲಿ ನಿಂತು, ಸಿಗ್ನಲ್ ಬಿದ್ದ ಕೂಡಲೇ ಬೈಕ್‌ ಸವಾರರು ಫುಟ್‌ಪಾತ್‌ಗೆ ಬಂದರೆ, “ನನ್ನನ್ನು ಡಿಕ್ಕಿ ಹೊಡೆದು ಮುಂದೆ ಹೋಗು, ಇಲ್ಲವೇ ರಸ್ತೆಯಲ್ಲಿ ಹೋಗು ಎಂದು ಕೆಂಡಕಾರಿದರು. ದ್ವಿಚಕ್ರ ವಾಹನ ಸವಾರರು ನಾಚಿಕೆಪಟ್ಟು ಮಹಿಳೆಯ ಮಾತುಗಳನ್ನು ಕೇಳಿ ಮತ್ತೆ ರಸ್ತೆಗೆ ತಿರುಗಲು ಪ್ರಾರಂಭಿಸಿದರು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಆಕೆಯ ಕೆಲಸಕ್ಕೆ ಶ್ಲಾಘನೆ ವ್ಯಕ್ತವಾಗಿದೆ. ಆಕೆ ಮಾಡಿದ ಕೆಲಸವನ್ನು ನೆಟಿಜನ್‌ಗಳು ಹೊಗಳಿದ್ದಾರೆ.

Video, This aunty from Pune is stopping who ride on footpaths - Kannada News Video
Video, This aunty from Pune is stopping who ride on footpaths

Web Title : Video, This aunty from Pune is stopping who ride on footpaths
ಕನ್ನಡ ನ್ಯೂಸ್ ನವೀಕರಣಗಳಿಗಾಗಿ ನಮ್ಮ Facebook | TwitterYouTube News Channel ಅನುಸರಿಸಿ. Latest News ಜೊತೆಗೆ Breaking News ನೀವಿರುವಲ್ಲಿಯೇ ಪಡೆಯಿರಿ.
(ಕನ್ನಡ ಸುದ್ದಿಗಳು Kannada News Today, KNT News Network)


For Breaking News & Live News Updates, Like Us on Facebook, Twitter. Read More Latest Kannada News Live Alerts on kannadanews.today News Portal.

This website uses cookies to improve your experience. We'll assume you're ok with this, but you can opt-out if you wish. Accept Read More