ವೈರಲ್ ವೀಡಿಯೋ, ಬಾಲಕಿಯನ್ನು ಮೇಲೆಸೆದ ಕಾಡು ಕೋಣ

ಫ್ಲೋರಿಡಾ : ಪ್ರಾಣಿಸಂಗ್ರಹಾಲಯಗಳಿಗೆ ಭೇಟಿ ನೀಡಿದಾಗ, ಅಲ್ಲಿನ ಸಿಬ್ಬಂದಿ ಸಂದರ್ಶಕರಿಗೆ ಮೃಗಗಳಿಂದ ದೂರವಿರಲು ಹೇಳುತ್ತಾರೆ. ಆದರೆ ನಾವು ಅವರ ಅಪಾಯದ ಸೂಚನೆಗಳನ್ನು ತೆಗೆದುಕೊಳ್ಳುವುದಿಲ್ಲ. ಫ್ಲೋರಿಡಾದ ಯೆಲ್ಲೊಸ್ಟೋನ್ ರಾಷ್ಟ್ರೀಯ ಉದ್ಯಾನದಲ್ಲಿ ನಡೆದ ಇತ್ತೀಚಿನ ಘಟನೆ ಇದಕ್ಕೆ ಸಾಕ್ಷಿಯಾಗಿದೆ.

ಒಂಬತ್ತು ವರ್ಷದ ಬಾಲಕಿಯನ್ನು ಕಾಡು ಕೋಣ ತನ್ನ ಕೊಂಬಿನಿಂದ ೧೦ ಅಡಿ ಎತ್ತರಕ್ಕೂ ಮೇಲೆ ಬಿಸಾಡಿದೆ, . ಅದೃಷ್ಟವೆಂದರೆ ಆಕೆ ಸಣ್ಣಪುಟ್ಟ ಗಾಯಗಳಿಂದ ಬದುಕುಳಿದಿದ್ದಾಳೆ. ಸೋಮವಾರ ನಡೆದ ಘಟನೆಯ ವಿಡಿಯೋ ಪ್ರಸ್ತುತ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಹೇಲಿ ಡೇಟನ್ ಎಂಬ ಯುವಕ ತನ್ನ ಕ್ಯಾಮೆರಾದೊಂದಿಗೆ ವಿಡಿಯೋ ತೆಗೆದುಕೊಂಡು ಅದನ್ನು ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಿದಾಗ ಈ ಘಟನೆ ಹೊರಬಿದ್ದಿದೆ.

Viral video, child who gets thrown by a charging bison-viral videos in kannada

ಉದ್ಯಾನವನದ ಸಿಬ್ಬಂದಿಯ ಪ್ರಕಾರ, ಸಂದರ್ಶಕರಿಗೆ ಕನಿಷ್ಠ 75 ಅಡಿ ದೂರವಿರಲು ಸೂಚಿಸಲಾಗುತ್ತದೆ. ಆದರೆ ಅವರ ಮಾತನ್ನು ಆಲಿಸದೆ ಮೃಗಗಳ ಬಳಿ ಹೋದಾಗ ಈ ರೀತಿಯ ಘರ್ಷಣೆಗೆ ಕಾರಣವಾಗುತ್ತದೆ.

ವೀಡಿಯೊದಲ್ಲಿ, ಬಾಲಕಿ ಪ್ರಾಣಿಯ ಬಹು ಹತ್ತಿರದಲ್ಲೇ ಇರುವುದು ಕಂಡು ಬರುತ್ತದೆ, ಅದೇ ಸಮಯದಲ್ಲಿ ಕೆಲವು ಸಂದರ್ಶಕರು ಪ್ರಾಣಿಯನ್ನು ಕೆಣಕಿದ್ದಾರೆ, ಅಲ್ಲದೆ ಕೆಲವರು ಕಲ್ಲಿನಿಂದ ಹೊಡೆದಿದ್ದಾರೆ. ಇದೆ ಕೋಪಕ್ಕೆ ಆ ಪ್ರಾಣಿ ಆ ಬಾಲಕಿಯನ್ನು ಮೇಲಕ್ಕೆ ಎಸೆದಿದೆ, ಎಂದು ತಿಳಿದು ಬಂದಿದೆ.  ಆದರೆ, ಘಟನೆಯಲ್ಲಿ ಮಗು ಸಣ್ಣಪುಟ್ಟ ಗಾಯಗಳೊಂದಿಗೆ ಬದುಕುಳಿದಿದೆ. ಗಾಯಗೊಂಡ ಬಾಲಕಿಯನ್ನು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತು. ಈ ಘಟನೆ ಸದ್ಯ ತನಿಖೆ ಹಂತದಲ್ಲಿದೆ.////

Web Title : Viral video, child who gets thrown by a charging bison
Watch the latest news videos and the top news video clips online at Kannada News Today