ವೀಡಿಯೋ, ಬಿಜೆಪಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ “ಅಶ್ಲೀಲ ನೃತ್ಯ”

vulgar dance video goes viral, event organised by BJP Leaders

ಬಿಜೆಪಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ “ಅಶ್ಲೀಲ ನೃತ್ಯ” – vulgar dance video goes viral, event organised by BJP Leaders

ಬಿಜೆಪಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ “ಅಶ್ಲೀಲ ನೃತ್ಯ”

ಕನ್ನಡ ನ್ಯೂಸ್ ಟುಡೇ : ಹರಿಯಾಣದ ಕುರುಕ್ಷೇತ್ರದ ಥನೇಸರ್ ಕ್ಷೇತ್ರದ ಹತಿರಾ ಗ್ರಾಮದಲ್ಲಿ ಮಂಗಳವಾರ ಸಿಎಂ ಮನೋಹರ್ ಲಾಲ್ ಖಟ್ಟರ್ ಅವರ ಜನವರಿ ಆಶೀರ್ವಾದ್ ಯಾತ್ರೆಯ ಸಂದರ್ಭದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ನೃತ್ಯಗಾರರು, ಅಶ್ಲೀಲ ಹಾಡಿನ ನೃತ್ಯ ಮಾಡುವ ಮಾಡುವ ಮೂಲಕ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿದೆ.

ಸಿಎಂ ಮನೋಹರ್ ಲಾಲ್ ಖಟ್ಟರ್ ಬರುವ ಮುನ್ನ ಈ ರೀತಿಯ ನೃತ್ಯ ನಡೆದಿದೆ ಎಂದು ತಿಳಿದು ಬಂದಿದೆ. ಇನ್ನು ನೆಟ್ಟಿಗರು ಈ ಬಗ್ಗೆ ಆಕ್ರೋಶ ವ್ಯಕ್ತ ಪಡಿಸಿದ್ದು, ಕಾರ್ಯಕ್ರಮ ಆಯೋಜಕರ ಮೇಲೆ ಸಿಟ್ಟಾಗಿದ್ದಾರೆ.

ಅಂತರ್ಜಾಲ ಮತ್ತು ವಾಟ್ಸಾಪ್‌ನ ಹಲವಾರು ಬಳಕೆದಾರರು, ಸಾರ್ವಜನಿಕ ಜನಸಾಮಾನ್ಯರನ್ನು ಆಕರ್ಷಿಸಲು ಭಾರತೀಯ ಜನತಾ ಪಕ್ಷ (ಬಿಜೆಪಿ) ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ ಎಂದು ದೂಷಿಸಿದ್ದಾರೆ.

ಈ ಕಾರ್ಯಕ್ರಮವನ್ನು ಗ್ರಾಮದ ಪಂಚಾಯತ್ ಸದಸ್ಯ ಸುನಿಲ್ ಮೆಹ್ರಾ ಆಯೋಜಿಸಿದ್ದರು ಎಂದು ತಿಳಿದು ಬಂದಿದೆ.

ಥನೇಸರ್ ಶಾಸಕ ಸುಭಾಷ್ ಸುಧಾ ಅವರು ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಹತಿರಾ ಗ್ರಾಮದಲ್ಲಿ ವೇದಿಕೆಯಲ್ಲಿ ಅಶ್ಲೀಲ ನೃತ್ಯದ ಸಮಯದಲ್ಲಿ ಯಾವುದೇ ಬಿಜೆಪಿ ಮುಖಂಡರು ಇರಲಿಲ್ಲ. ನಾನು ಹತಿರಾ ಗ್ರಾಮದ ಸರ್ಪಂಚ್‌ಗೆ ಎಚ್ಚರಿಕೆ ನೀಡಿದ್ದೇನೆ ಮತ್ತು ಅಂತಹ ಘಟನೆಗಳು ನಮ್ಮ ಸಂಸ್ಕೃತಿಯಲ್ಲಿಲ್ಲ ಎಂದು ಹೇಳಿದ್ದೇನೆ. ಇದಕ್ಕಾಗಿ ಅವರು ಕ್ಷಮೆಯಾಚಿಸಿದ್ದಾರೆ ಎಂದಿದ್ದಾರೆ.

ಹತಿರಾ ಗ್ರಾಮದ ಪಂಚಾಯತ್ ಸದಸ್ಯ ಮಾತನಾಡಿ, ಹರಿಯಾಣ ಮುಖ್ಯಮಂತ್ರಿಯ ಆಗಮನದ ಮೊದಲು ಸಾರ್ವಜನಿಕರನ್ನು ರಂಜಿಸಲು ನಾನು ಈ ಕಾರ್ಯಕ್ರಮವನ್ನು ಆಯೋಜಿಸಿದ್ದೆ, ಅವರು ಹೆಂಗಳೆಯರಲ್ಲ, ಅವರು ನಪುಂಸಕರು ಎಂದು ತಿಳಿಸಿದ್ದಾರೆ. ಏನೇ ಆಗಲಿ ಈ ರೀತಿಯ ನೃತ್ಯದಿಂದ ನೆರೆದಿದ್ದ ಜನರು ಮುಜುಗರಕ್ಕೊಳಗಾದರು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

/////

Web Title : vulgar dance video goes viral, event organised by BJP Leaders