ರಾಜ್ಯದಲ್ಲಿ ಕಳೆದ ಮೂರು ವರ್ಷದಲ್ಲಿ 2.14 ಲಕ್ಷ ಸಣ್ಣ ಕೈಗಾರಿಕೆ ನೋಂದಣಿ: ಸಚಿವ ಎಂ.ಟಿ.ಬಿ. ನಾಗರಾಜ್

ಕಳೆದ ಮೂರು ವರ್ಷಗಳಲ್ಲಿ ಭಾರತ ಸರ್ಕಾರದ ಉದ್ಯೋಗ ಆಧಾರ್ ಮೆಮೊರಾಂಡಮ್ ಪೋರ್ಟಲ್‍ನಲ್ಲಿ 2,14,992 ಸೂಕ್ಷ್ಮ, ಸಣ್ಣ, ಮತ್ತು ಕೈಗಾರಿಕೆಗಳು ನೋಂದಣಿಯಾಗಿವೆ

Online News Today Team

ಬೆಳಗಾವಿ ಸುವರ್ಣಸೌಧ, ಡಿ.21 : ಕಳೆದ ಮೂರು ವರ್ಷಗಳಲ್ಲಿ ಭಾರತ ಸರ್ಕಾರದ ಉದ್ಯೋಗ ಆಧಾರ್ ಮೆಮೊರಾಂಡಮ್ ಪೋರ್ಟಲ್‍ನಲ್ಲಿ 2,14,992 ಸೂಕ್ಷ್ಮ, ಸಣ್ಣ, ಮತ್ತು ಕೈಗಾರಿಕೆಗಳು ನೋಂದಣಿಯಾಗಿವೆ ಎಂದು ಪೌರಾಡಳಿತ ಮತ್ತು ಸಣ್ಣಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಸಚಿವರಾದ ಎನ್. ನಾಗರಾಜು ಎಂ.ಟಿ.ಬಿ. ಅವರು ತಿಳಿಸಿದ್ದಾರೆ.

ಸದಸ್ಯ ಹೆಚ್.ಎಂ. ರಮೇಶಗೌಡ ಅವರ ಪ್ರಶ್ನೆಗೆ ಉತ್ತರಿಸಿರುವ ಅವರು 2017-18ನೇ ಸಾಲಿನಲ್ಲಿ 48,482, 2018-19ರಲ್ಲಿ 69,278 ಹಾಗೂ 2019-20 ರಲ್ಲಿ 97,232 ಸಣ್ಣ ಉದ್ದಿಮೆಗಳು ನೊಂದಣಿಯಾಗಿವೆ. ಈ ಅವಧಿಯಲ್ಲಿ ಸಣ್ಣ ಕೈಗಾರಿಕೆಗಳನ್ನು ಸ್ಥಾಪಿಸಲು ಕೆ.ಐ.ಎ.ಡಿ.ಬಿ. ವತಿಯಿಂದ ಕೈಗಾರಿಕಾ ಪ್ರದೇಶಕ್ಕಾಗಿ 5208 ಎಕರೆ, ಏಕ ಘಟಕ ಸಂಕೀರ್ಣಗಳಿಗಾಗಿ 4668 ಎಕರೆ ಒಳಗೊಂಡಂತೆ 9876.23 ಎಕರೆ ಜಮೀನು ಸ್ವಾಧೀನಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

Follow Us on : Google News | Facebook | Twitter | YouTube