ನಿಖಿಲ್ ಪರ ಕಣಕ್ಕಿಳಿಯಲಿದ್ದಾರೆ ಆಂಧ್ರ ಕಿಂಗ್ ಚಂದ್ರಬಾಬುನಾಯ್ಡು

Andhra CM Chandrababu Naidu will campaign for Nikhil Kumaraswamy

ನಿಖಿಲ್ ಪರ ಕಣಕ್ಕಿಳಿಯಲಿದ್ದಾರೆ ಆಂಧ್ರ ಕಿಂಗ್ ಚಂದ್ರಬಾಬುನಾಯ್ಡು – Andhra CM Chandrababu Naidu will campaign for Nikhil Kumaraswamy – Kannada News

ನಿಖಿಲ್ ಪರ ಕಣಕ್ಕಿಳಿಯಲಿದ್ದಾರೆ ಆಂಧ್ರ ಕಿಂಗ್ ಚಂದ್ರಬಾಬುನಾಯ್ಡು

ಹೈವೋಲ್ಟೇಜ್ ಕಣ ಮಂಡ್ಯದಲ್ಲಿ ಭರ್ಜರಿ ಪ್ರಚಾರ ನಡೆಯುತ್ತಿದೆ, ಇನ್ನೇನು ಬಹಿರಂಗ ಪ್ರಚಾರಕ್ಕೆ ಒಂದು ದಿನ ಮಾತ್ರ ಬಾಕಿ ಇದ್ದು, ಸಿ.ಎಂ.ಕುಮಾರಸ್ವಾಮಿಯ ಪ್ರತಿಷ್ಠಿತ ಕಣವಾದ ಮಂಡ್ಯದಲ್ಲಿ ನಿಖಿಲ್ ಗೆಲ್ಲಲೇ ಬೇಕೆಂದು ಎಲ್ಲಾ ರೀತಿಯ ಪಾಲಿಟಿಕ್ಸ್ ಸ್ಟಾಟರ್ಜಿಗಳನ್ನೂ ಮಾಡಲಾಗಿದೆ. ಅಜ್ಜ ದೇವೇಗೌಡ, ತಂದೆ ಕುಮಾರಸ್ವಾಮಿ ರಣಬಿಸಿಲಿನಲ್ಲೂ ಊಟ ನಿದ್ದೆ ಬಿಟ್ಟು ನಿಖಿಲ್ ಪರ ಪ್ರಚಾರದಲ್ಲಿ ತೊಡಗಿದ್ದಾರೆ.

ಈ ನಡುವೆ ಒಬ್ಬರ ಮೇಲೊಬ್ಬರಂತೆ ಟೀಕೆಗಳು ಅವರ ಕಾಲು ಇವರು ಇವರ ಕಾಲು ಅವರು ಎಳೆಯುತ್ತಾ, ಮತದಾರರನ್ನು ಸೆಳೆಯಲು ಅತ್ತ ಡೈಲಾಗ್ ಗಳು, ಇತ್ತ ಆಶ್ವಾಸನೆಗಳು ಭರ್ಜರಿಯಾಗಿಯೇ ಇವೆ..

ನಿಖಿಲ್ ಪರ ಪ್ರಚಾರಕ್ಕೆ ಆಂಧ್ರ ಸಿ.ಎಂ. ಚಂದ್ರಬಾಬುನಾಯ್ಡು ಸಾಥ್.

ಒಂದೆಡೆ ಸಿ.ಎಂ ಮಗನನ್ನು ಸೋಲಿಸಿ, ಸಂಸತ್ ಮೆಟ್ಟಿಲೇರಲೇ ಬೇಕೆಂದು ಪಣತೊಟ್ಟಿರುವ ಸುಮಲತಾ, ಯಶ್ ಮತ್ತು ದರ್ಶನ್ ರ ಸಾಥ್ ನಿಂದ ಮಂಡ್ಯದಲ್ಲಿ ರಂಗಿನ ಪ್ರಚಾರ ನಡೆಸಿದ್ರೆ, ಇತ್ತ ಕುಮಾರಸ್ವಾಮಿಗೆ ಸಾಥ್ ನೀಡಲು ಆಂಧ್ರಪ್ರದೇಶ ಸಿ.ಎಂ. ಚಂದ್ರಬಾಬು ನಾಯ್ಡು ಇಂದು ನಿಖಿಲ್ ಗೆ ಸಾಥ್ ನೀಡಲಿದ್ದಾರೆ.

ಮಂಡ್ಯ ಕ್ಷೇತ್ರದ ಕೆ.ಆರ್.ಪೇಟೆ ಹಾಗೂ ಪಾಂಡವಪುರದಲ್ಲಿಂದು ಆಂಧ್ರ ಕಿಂಗ್ ಚಂದ್ರಬಾಬು ನಾಯ್ಡು ಪ್ರಚಾರ ನಡೆಸಲಿದ್ದಾರೆ. ನಾಳೆ ಒಂದೇ ದಿನ ಬಹಿರಂಗ ಪ್ರಚಾರಕ್ಕೆ ಅನುಮತಿ ಇದ್ದು ಈ ಎರಡು ದಿನ ಅಬ್ಬರದ ಪ್ರಚಾರಕ್ಕೆ ಪ್ಲಾನ್ ಮಾಡಲಾಗಿದೆ.

ಚಂದ್ರಬಾಬು ನಾಯ್ಡು , ದೇವೇಗೌಡ ಮತ್ತು ಕುಮಾರಸ್ವಾಮಿ ಒಟ್ಟಾಗಿ ನಿಖಿಲ್ ಪರ ಮತಬೇಟೆ ನಡೆಸಲಿದ್ದಾರೆ.

Web Title : Andhra CM Chandrababu Naidu will campaign for Nikhil Kumaraswamy – Kannada News