ಕೈತಪ್ಪಿದ ಕೋಟೆ, ಪುನಃ ಕೈಸೇರುವ ರಣಕಣ

Bagalkot can get the Congress back

ಕೈತಪ್ಪಿದ ಕೋಟೆ, ಪುನಃ ಕೈಸೇರುವ ರಣಕಣ – Bagalkot can get the Congress back – Kannada News Today

ಬಾಗಲಕೋಟೆ : ಬಹುತೇಕ ಕ್ಷೇತ್ರಗಳ ಇತಿಹಾಸ ಹೇಳುವಂತೆ 1999ರ ಚುನಾವಣೆಯವರೆಗೆ ಈ ಭಾಗದಲ್ಲಿ ಕಾಂಗ್ರೆಸ್ ತನ್ನ ಪಾರುಪತ್ಯ ಹೊಂದಿತ್ತು. ಈ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಆರ್ ಎಸ್ ಪಾಟೀಲ್ ಗೆಲುವು ಸಾಧಿಸಿ ಸಂಸದರಾಗಿ ಆಯ್ಕೆಯಾದದ್ದು ಇಲ್ಲಿ ಕಾಂಗ್ರೆಸ್ಸಿನ ಕೊನೆಯ ಗೆಲುವು.

ಆ ವರೆಗೂ ಎಲ್ಲಾ ಚುನಾವಣೆಯಲ್ಲಿಯೂ ಈ ಕ್ಷೇತ್ರದಲ್ಲಿ ಕಾಂಗ್ರೆಸ್ಸಿನ ಎದುರಾಗಿ ಜನತಾದಳ ಇತ್ತು. ಆದರೆ 2004ರ ಲೋಕಸಭಾ ಚುನಾವಣೆ ಎಲ್ಲವನ್ನು ಬದಲು ಮಾಡಿತು. ಬಿಜೆಪಿಯಿಂದ ಸ್ಪರ್ಧಿಸಿದ ಗದ್ದಿಗೌಡರ್ ಮೊದಲ ಬಾರಿಗೆ ಕಾಂಗ್ರೆಸ್ ಕೋಟೆಯಲ್ಲಿ ಬಿಜೆಪಿ ಬಾವುಟ ಹಾರಿಸಿದರು.

ನಂತರ ದಿನಗಳಲ್ಲಿ ಕಾಂಗ್ರೆಸ್ ಇಲ್ಲಿ ಒಂದೊಂದು ವಿಧಾನಸಭಾ ಕ್ಷೇತ್ರ ಕಳೆದುಕೊಳ್ಳುತ್ತ ಬಂದಿತ್ತು. ಬಿಜೆಪಿ ಪಕ್ಷದ ಸಂಘಟನೆ ಬೇರು ಮಟ್ಟದಿಂದ ಬಲವಾಗಿತ್ತು. ಆದರೆ ಈಗ 2019 ರ ಲೋಕಸಭಾ ಚುನಾವಣೆಯಲ್ಲಿ ಸಂಕಷ್ಟ ಎದುರಾಗಿದೆ.

2004ರಿಂದ ಆಯ್ಕೆಯಾದ ಗದ್ದಿಗೌಡರ ಅಭಿವೃದ್ಧಿಯಾಗದ ಯೋಜನೆಗಳು ಜನರ ಮನಸ್ಸನ್ನು ಪರಿವರ್ತಿಸಿ ಕೈ ಯತ್ತ ಮನಸ್ಸು ಸೆಳೆಯುವಂತೆ ಮಾಡಿದೆ. ಕಳೆದ 2018ರ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ನಾನಾ ಕಾರಣಗಳಿಗಾಗಿ ಸದ್ದು ಮಾಡಿದ ಜಿಲ್ಲೆ ಬಾಗಲಕೋಟೆ.

ಮಾಜಿ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಬಿಜೆಪಿ ಮಾಜಿ ಸಚಿವ ಶ್ರೀರಾಮುಲು ನಡುವೆ ರಾಜಕೀಯ ಕಾದಾಟಕ್ಕೆ ಇಲ್ಲಿನ ಬಾದಾಮಿ ವಿಧಾನಸಭಾ ಕ್ಷೇತ್ರ ವೇದಿಕೆ ಕಲ್ಪಿಸಿತು. ಸುಮಾರು ಎಂಟು ತಿಂಗಳ ನಂತರ ಲೋಕಸಭಾ ಚುನಾವಣೆ ಎದುರಾಗಿದೆ. ಬಾಗಲಕೋಟೆ ಜಿಲ್ಲೆ ಮತ್ತೊಮ್ಮೆ ರಾಜ್ಯ ಗಮನಹರಿಸುವಂತೆ ರಾಜಕೀಯ ಬೆಳವಣಿಗೆ ವೇದಿಕೆ ಕಲ್ಪಿಸಿದೆ.

ಬಾಗಲಕೋಟೆ ಲೋಕಸಭಾ ಕ್ಷೇತ್ರದಲ್ಲಿ ಇದೇ ಮೊದಲ ಬಾರಿಗೆ ಮನೆಯ ಮಗಳನ್ನು ಜನ ಆರಿಸುವ ಅವಕಾಶ ಕಲ್ಪಿಸಿದೆ.ಕಾಂಗ್ರೆಸ್ ಪಕ್ಷ ಶ್ರೀಮತಿ ವೀಣಾ ಕಾಶಪ್ಪನವರ್ ಅವರಿಗೆ ಟಿಕೆಟ್ ನೀಡಿ ಕಣಕ್ಕೆ ಬಿಟ್ಟಿರುವುದು ಅಚ್ಚರಿಯ ಸಂಗತಿ. ಬಾಗಲಕೋಟೆಯ ಮನೆ ಮಗಳು ಶ್ರೀಮತಿ ವೀಣಾ ಕಾಶಪ್ಪನವರ್ ಈ ಬಾರಿಯ ಲೋಕಸಭಾ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ 20 ಕ್ಷೇತ್ರಗಳ ಪೈಕಿ ಈಗ ಘೋಷಣೆಯಾಗಿರುವ 19 ಅಭ್ಯರ್ಥಿಗಳಲ್ಲಿ ಇರುವ ಏಕೈಕ ಮಹಿಳಾ ಅಭ್ಯರ್ಥಿ ಕೂಡ ಹೌದು.

ಇವರ ಪ್ರತಿಸ್ಪರ್ಧಿಯಾಗಿ ಬಿಜೆಪಿಯಿಂದ ಹಾಲಿ ಸಂಸದರು ಆಗಿರುವ ಶ್ರಿ ಪಿ ಸಿ ಗದ್ದಿಗೌಡರ್ ಕಣದಲ್ಲಿದ್ದಾರೆ ಇದು ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ನಡುವಿನ ರಣಕಣವಾಗಿದೆ.

ಉತ್ತರ ಕರ್ನಾಟಕದ ಬಿಜೆಪಿ ಪಾಲಿನ ಭದ್ರಕೋಟೆ ಎನಿಸಿಕೊಂಡಿರುವ ಜಿಲ್ಲೆ ಬಾಗಲಕೋಟೆ ಲೋಕಸಭಾ ಚುನಾವಣೆಯಲ್ಲಿ ಶ್ರೀಮತಿ ವೀಣಾ ಕಾಶಪ್ಪನವರ್ ಬರದ ಪ್ರಚಾರದ ಜೊತೆ ಹೊಸ ಅಲೆ ಎಬ್ಬಿಸಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಜಿಲ್ಲಾ ಪಂಚಾಯಿತಿಯ ಅಧ್ಯಕ್ಷೆಯಾಗಿದ್ದ ಶ್ರೀಮತಿ ವೀಣಾ ಕಾಶಪ್ಪನವರ್ ಬಹುತೇಕ ಗ್ರಾಮಗಳಲ್ಲಿ ನೂರಾರು ಶೌಚಾಲಯ ಮುಕ್ತ ಜಾತ ಹಾಗೂ ಗ್ರಾಮ ವಾಸ್ತವ್ಯ ಹೀಗೆ ಹತ್ತು ಹಲವು ಕಾರ್ಯಕ್ರಮಗಳ ಮೂಲಕ ಬಾಗಲಕೋಟೆ ಜಿಲ್ಲೆಯ ಜನರ ಮನಸನ್ನು ಗೆದ್ದು ಬಾಗಲಕೋಟೆ ಜಿಲ್ಲೆಯ ಮನೆಯ ಮಗಳಾಗಿ ಕಣದಲ್ಲಿ ಉಳಿದಿದ್ದಾರೆ.//// ವರದಿ : ರವಿಕುಮಾರ ಮುರಾಳ