ಲೋಕ ಸಮರ – ಬಾಗಲಕೋಟೆ ಲೋಕಸಭಾ ಕಣ, ಕೋಟೆ ಯಾರ ವಶ ?

Bagalkot Lok Sabha constituency, Both are powerful candidates

ಬಾಗಲಕೋಟೆ : ಬಾಗಲಕೋಟೆ ಲೋಕಸಭಾ ಸಮರ ದಿನದಿಂದ ದಿನಕ್ಕೆ ಏರುತ್ತಿದೆ. ಬಿಸಿಲಿನ ಬೇಗೆಯಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀ ಪಿ ಸಿ ಗದ್ದಿಗೌಡರ್ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಶ್ರೀಮತಿ ವೀಣಾ ಕಾಶಪ್ಪನವರ ಬರದ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ.

ಬಿಜೆಪಿ ಅಭ್ಯರ್ಥಿ ಶ್ರೀ ಪಿ ಸಿ ಗದ್ದಿಗೌಡರ್ 2004 ರಿಂದ ಸತತ ಗೆಲುವಿನ ನಗೆ ಕಂಡವರು ಗೆಲುವಿನ ಸರದಾರ ಎಂದೆನಿಸಿಕೊಂಡವರು. ಹಾಗೆ ನಾನು ಯಾರಿಗೂ ಕಡಿಮೆ ಇಲ್ಲ ಎಂಬಂತೆ ಶ್ರೀಮತಿ ವೀಣಾ ಕಾಶಪ್ಪನವರ್ ಬಾಗಲಕೋಟ ಜಿಲ್ಲಾ ಅಧ್ಯಕ್ಷೆಯಾಗಿ ಹಲವಾರು ಅಭಿವೃದ್ಧಿ ಪರಕಾರ ಯೋಜನೆಗಳು ಮಾಡಿರುವ ಕಾರಣದಿಂದಾಗಿ ಜನರ ಮನಸನ್ನು ಗೆದ್ದವರು ಜನರ ಮನೆ ಮಗಳು.

ಹಾಗಾಗಿ ಕಣದಲ್ಲಿರುವ ಇಬ್ಬರು ಅಭ್ಯರ್ಥಿಗಳು ಸಹ ಬಾಗಲಕೋಟ ಕ್ಷೇತ್ರದಲ್ಲಿ ಬಹಳಷ್ಟು ಹೆಸರು ಮಾಡಿದ ಅಭ್ಯರ್ಥಿಗಳಾಗಿದ್ದು ಇವರಿಬ್ಬರ ಮಧ್ಯೆ ಲೋಕ ಸಮರ ನಡೆಯುತ್ತಿದೆ ರಾಜ್ಯದ ಜನತೆಯ ಗಮನ ತನ್ನೆಡೆಗೆ ಬಾಗಲಕೋಟೆ ಕ್ಷೇತ್ರ ಸೆಳೆಯುತ್ತಿದೆ.

ಲೋಕ ಸಮರ - ಬಾಗಲಕೋಟೆ ಲೋಕಸಭಾ ಕಣ, ಕೋಟೆ ಯಾರ ವಶ ? - Kannada News

ಬಾಗಲಕೋಟೆ ಲೋಕಸಭಾ ವ್ಯಾಪ್ತಿಯಲ್ಲಿ ಗದಗ ಜಿಲ್ಲೆಯ ನರಗುಂದ ಸೇರಿ ಒಟ್ಟು 8 ವಿಧಾನಸಭಾ ಕ್ಷೇತ್ರಗಳಿವೆ ಅದರಲ್ಲಿ ಜಮಖಂಡಿ ಬದಾಮಿ ಹೊರತುಪಡಿಸಿದರೆ ಇನ್ನುಳಿದ ಆರು ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರು ಇರುವುದರಿಂದ ಲೋಕಸಭೆ ಚುನಾವಣೆಯಲ್ಲಿ ಶ್ರೀ ಪಿ.ಸಿ ಗದ್ದಿಗೌಡ ಅವರಿಗೆ ಗೆಲುವು ಖಚಿತ ಎಂದು ಕೊಂಡಿದ್ದ ನಾಯಕರಿಗೆ ಸವಾಲಾಗಿ ಕಾಂಗ್ರೆಸ್ ಅಭ್ಯರ್ಥಿ ಬಾಗಲಕೋಟ ಜಿಲ್ಲೆಯ ಮನೆ ಮಗಳು ಶ್ರೀಮತಿ ವೀಣಾ ಕಾಶಪ್ಪನವರ ರಣರಂಗದಲ್ಲಿ ಉಳಿದಿರುವುದು ನುಂಗಲಾರದ ತುತ್ತಾಗಿ ಪರಿಣಮಿಸಿದೆ.

1999 ರವರೆಗೆ ಕಾಂಗ್ರೆಸ್ ಕಾಂಗ್ರೆಸ ಕೋಟೆಯಲ್ಲಿ ತನ್ನ ಪಾರುಪತ್ಯವನ್ನು ಸಾಧಿಸಿತ್ತು.ಆದರೆ 2004 ರಿಂದ ಬಾಗಲಕೋಟ ಲೋಕಸಭಾ ಕ್ಷೇತ್ರದ ಇತಿಹಾಸವೇ ಬದಲಾವಣೆ ಆಯ್ತು.2004ರಿಂದ ಗೆಲುವಿನ ಕುದುರೆಯನ್ನು ಏರದ ಸೋಲಿಲ್ಲದ ಸರ್ದಾರ ಶ್ರೀ ಪಿ ಸಿ ಗದ್ದಿಗೌಡರ್ ಅವರು ಮಾಡಿದ ಅಭಿವೃದ್ಧಿ ಪರ ಕಾರ್ಯ ಯೋಜನೆಗಳು ಜನರ ಮನಸ್ಸನ್ನು ಆಕರ್ಷಿಸಿದವು.

ಆದರೆ ಬಾಗಲಕೋಟೆಯ ಮನೆ ಮಗಳೇ ಎಂದೆ ಹೆಸರಾದ ಶ್ರೀಮತಿ ವೀಣಾ ಕಾಶಪ್ಪನವರ್ ಬಾಗಲಕೋಟ್ ಜಿಲ್ಲಾ ಪಂಚಾಯತ ಅಧ್ಯಕ್ಷರಾದ ಬಳಿಕ ಅವರು ಮಾಡಿದ ಕಾರ್ಯಗಳು ಶ್ರೀ ಪಿ ಸಿ ಗದ್ದಿಗೌಡರ್ ಅವರು ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಹಿಮ್ಮೆಟ್ಟಿಸಿದರು ಎಂದು ಹೇಳಿದರೆ ತಪ್ಪಾಗಲಾರದು.ಬಾಗಲಕೋಟೆ ಲೋಕಸಭಾ ಕ್ಷೇತ್ರದಲ್ಲಿ ಕಣದಲ್ಲಿರುವ ಬಲಾಡ್ಯ ಅಭ್ಯರ್ಥಿಗಳು ನಡೆದಿರುವ ಲೋಕ ಸಮರದಲ್ಲಿ ಯಾರು ಗೆಲುವು ಸಾಧಿಸುತ್ತಾರೆ ಯಾರು ಕೋಟೆಯ ಅಧಿಪತಿ ಆಗುತ್ತಾರೆ ಎಂಬುದನ್ನು ನಿರೀಕ್ಷಿಸಬೇಕಾಗಿದೆ./// ವರದಿ : ರವಿಕುಮಾರ ಮುರಾಳ

Follow us On

FaceBook Google News

Read More News Today