Big Breaking, ಮಂಡ್ಯದಲ್ಲಿ ಸುಮಲತಾ ಮುನ್ನಡೆ
Big Breaking, Sumalatha lead in Mandya
ಮಂಡ್ಯದಲ್ಲಿ ಸುಮಲತಾ ಮುನ್ನಡೆ
ಬಾರಿ ಪೈಪೋಟಿ ಕ್ಷೇತ್ರವೆಂದೇ ಬಿಂಬಿತವಾಗಿರುವ ಮಂಡ್ಯ ಕ್ಷೇತ್ರದಲ್ಲಿ ಅಂಚೆ ಮತಗಳ ಆರಂಭಿಕ ಮತ ಎಣಿಕೆಯಲ್ಲಿ ಸುಮಲತಾ ಅಂಬರೀಷ್ 50 ಮತಗಳಿಗೂ ಹೆಚ್ಚು ಮುನ್ನಡೆಯನ್ನು ಸಾಧಿಸಿದ್ದಾರೆ. ಕರ್ನಾಟಕದ ಘಟಾನುಘಟಿ ರಾಜಕಾರಣಿಗಳ ಕಣ್ಣು ಮಂಡ್ಯ ಕ್ಷೇತ್ರದ ಮೇಲೆ ಬಿದ್ದಿತ್ತು. ಸಮ್ಮಿಶ್ರ ಸರ್ಕಾರವು ನಿಖಿಲ್ ಕುಮಾರಸ್ವಾಮಿ ಗೆಲುವಿಗೆ ನಾನಾ ತಂತ್ರಗಳನ್ನು ರೂಪಿಸಿದ್ದವು.
ಈ ಮೂಲಕ ಹಲವು ಆರೋಪಗಳು ಕೇಳಿ ಬಂದಿದ್ದವು, ಸುಮಲತಾರನ್ನು ಸೋಲಿಸಲು ನಾನಾ ತಂತ್ರಗಳನ್ನು ರೂಪಿಸಲಾಗಿದೆ ಎಂಬ ಆರೋಪಗಳೂ ಕೇಳಿ ಬಂದಿದ್ದವು. ಸಧ್ಯ ಇದೀಗ ಅಂಚೆ ಮತಗಳ ಎಣಿಕೆ ನಡೆಯುತ್ತಿದ್ದು ಆರಂಭಿಕ ಹಂತದಲ್ಲಿ ಸುಮಲತಾ ಬಾರಿ ಮುನ್ನಡೆ ಸಾಧಿಸಿದ್ದಾರೆ, ಈ ಮೂಲಕ ರಾಜಕೀಯ ನಾಯಕರುಗಳ ಆತಂಕ ಹೆಚ್ಚಿದ್ದು ಸಂಜೆಯ ವೇಳೆಗೆ ಅಧಿಕೃತ ಫಲಿತಾಂಶ ಸಿಗಲಿದೆ.
ಈ ನಡುವೆ ಅದಾಗಲೇ ಸುಮಲತಾ ಅಭಿಮಾನಿಗಳು ಮತ ಎಣಿಕೆಗೂ ಮೊದಲೇ ಗೆಲುವಿನ ವಿಶ್ವಾಸ ವ್ಯಕ್ತ ಪಡಿಸಿದ್ದು, ಸುಮಲತಾರವರು ಗೆಲ್ಲುವುದು ನಿಶ್ಚಿತ ಎಂದು ತಮ್ಮ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ. ಇದೆಲ್ಲಾ ಆರಂಭಿಕ ಎಣಿಕೆ ಆದರೂ ಅಂತಿಮ ಹಂತದ ಫಲಿತಾಂಶ ನಾನಾ ತಿರುವುಗಳನ್ನೂ ಸಹ ನೀಡಬಹುದು.///
Follow us On
Google News |