ರಣಬಿಸಿಲಿನಲ್ಲೂ ನಿಲ್ಲದ ಪ್ರಚಾರ, ಆಪಲ್ ಹಾರ ಆಕಿ ಸ್ವಾಗತಿಸಿದ ಗ್ರಾಮಸ್ಥರು

Big campaigning against Independent candidate Sumalatha

ರಣಬಿಸಿಲಿನಲ್ಲೂ ನಿಲ್ಲದ ಪ್ರಚಾರ, ಆಪಲ್ ಹಾರ ಆಕಿ ಸ್ವಾಗತಿಸಿದ ಗ್ರಾಮಸ್ಥರು – Big campaigning against Independent candidate Sumalatha – Kannada News Today

ರಣಬಿಸಿಲಿನಲ್ಲೂ ನಿಲ್ಲದ ಪ್ರಚಾರ, ಆಪಲ್ ಹಾರ ಆಕಿ ಸ್ವಾಗತಿಸಿದ ಗ್ರಾಮಸ್ಥರು

ಮಂಡ್ಯ: ರಾಷ್ಟ್ರದ ಗಮನ ಸೆಳೆಯುತ್ತಿರುವ ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಸುಮಲತಾ ವಿರುದ್ಧ ಮಾಜಿ ಪ್ರಧಾನಿ ಎಚ್‌ ಡಿ ದೇವೇಗೌಡ ಮತ್ತು ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಜಂಟಿಯಾಗಿ ಶನಿವಾರ ರಣ ಕಹಳೆ ಮೊಳಗಿಸಿದ್ದಾರೆ.

ಮಂಡ್ಯ ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಅಭ್ಯರ್ಥಿ ನಿಖಿಲ್‌ ಕುಮಾರಸ್ವಾಮಿ ಪರ ಭರ್ಜರಿ ಪ್ರಚಾರ ನಡೆಸಿದ್ದಾರೆ. ಮದ್ದೂರು ತಾಲೂಕು ಕೆ.ಹೊನ್ನಗೆರೆಗೆ ಆಗಮಿಸಿದ ಸಿಎಂ ಕುಮಾರಸ್ವಾಮಿ ಅವರಿಗೆ ಗ್ರಾಮಸ್ಥರಿಂದ ಅದ್ದೂರಿ ಸ್ವಾಗತ. ಮಾಜಿ ಪ್ರಧಾನಿ ದೇವೇಗೌಡ ಅವರ ಜತೆ ತೆರೆದ ಬಸ್ನಲ್ಲಿ ಕುಮಾರಸ್ವಾಮಿ ಪ್ರಚಾರ ಆರಂಭಿಸಿದರು.

ಕುಮಾರಸ್ವಾಮಿ ಅವರ ಜತೆ ಮಾಜಿ ಪ್ರದಾನಿ ದೇವೆಗೌಡ ಹಾಗೂ ಡಿಸಿ ತಮ್ಮಣ್ಣ ಸಾಥ್ ನೀಡಿದ್ದಾರೆ. ಹೊನ್ನಗೆರೆಯ ಸುತ್ತಾಮುತ್ತಾ ಪುತ್ರ ನಿಖಿಲ್ ಕುಮಾರಸ್ವಾಮಿ ಪರ ಕುಮಾರಸ್ವಾಮಿ ಪ್ರಚಾರ ನಡೆಸಲಿದ್ದಾರೆ. ಬಳಿಕ ಕೆ.ಎಂ ದೊಡ್ಡಿಯ ಭಾರತಿನಗರದಲ್ಲಿ ರೋಡ್ ಶೋ ನಡೆಸಲಿದ್ದಾರೆ.

ತುಮಕೂರು ಲೋಕಸಭಾ ಕ್ಷೇತ್ರದ ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ದೇವೇಗೌಡ ಹಾಗೂ ಸಿಎಂ ಕುಮಾರಸ್ವಾಮಿ ಅವರನ್ನು ಸ್ವಾಗತಿಸಿದ ಹೊನ್ನಲಗೆರೆ ಗ್ರಾಮದ ಜನತೆ‌ ಬೃಹತ್ ಗಾತ್ರದ ಆ್ಯಪಲ್ ಹಾರ ಹಾಕಿದರು.

ಈ ವೇಳೆ ಸಿಎಂ ಕುಮಾರಸ್ವಾಮಿ ಅವರು ಹತ್ಯೆಯಾದ ತೊಪ್ಪನ ಹಳ್ಳಿ ಗ್ರಾಮ ಪಂಚಾಯತ ಸದಸ್ಯ ಹಾಗೂ ಜೆಡಿಎಸ್ ಮುಖಂಡ ಪ್ರಕಾಶ ಅವರನ್ನು ನೆನಪಿಸಿಕೊಂಡರು. ಮೈ ಶುಗರ್ ಕಾರ್ಖಾನೆಯನ್ನು ಅಭಿವೃದ್ಧಿ ಪಡಿಸುವುದರ ಜೊತೆಗೆ ಮಂಡ್ಯ ಜಿಲ್ಲೆಯ ಯುವಕರಿಗೆ ಉದ್ಯೋಗ ನೀಡಲು ಅನೇಕ ಯೋಜನೆಗಳನ್ನು ಜಾರಿಗೆ ತರುತ್ತಿದ್ದೆನೆ. ನನ್ನನ್ನು ತಮ್ಮ ಮನೆಯ ಮಗ ಎಂದು ಇಷ್ಟು ಎತ್ತರಕ್ಕೆ ಬೆಳಿಸಿದ್ದಿರಿ. ಲೋಕಸಭಾ ಚುನಾವಣೆಯಲ್ಲಿ ನಿಖಿಲ್ನನ್ನು ಗೆಲ್ಲಿಸುವುದರ ಮೂಲಕ ದೇವೇಗೌಡರ ಕೈ ಬಲಪಡಿಸಬೇಕೆಂದು ನಿಮ್ಮಲ್ಲಿ ಕೇಳಿಕೊಳ್ಳುತ್ತೇನೆ‌ ಎಂದು ನೆರೆದವರಲ್ಲಿ ಕುಮಾರಸ್ವಾಮಿ ವಿನಂತಿಸಿದರು.