ಕೋಲಾರದಲ್ಲಿ ಬಿ.ಜೆ.ಪಿ ಮಾಸ್ಟರ್ ಪ್ಲಾನ್ ? ಕಾಡುಗೋಡಿ ಮುನಿಸ್ವಾಮಿ ಕಣಕ್ಕೆ

BJP Master Plan in Kolar-Ticket to Kadugodi Muniswamy

Online News Today Team

ಲೋಕಸಭಾ ಚುನಾವಣಾ ೨೦೧೯ : ದಿನದಿಂದ ದಿನಕ್ಕೆ. ಎಲ್ಲಾ ರಾಜಕೀಯ ಲೆಕ್ಕಾಚಾರಗಳು ಊಹಿಸಲಾಗದಂತೆ ಗಳಿಸಿ ಹೋಗುತ್ತಿವೆ. ತೀವ್ರ ಕುತೂಹಲ ಮೂಡಿಸಿದ್ದ ಕೋಲಾರ ಬಿ.ಜೆ.ಪಿ ಯ ಅಭ್ಯರ್ಥಿಯ ಹೆಸರು ಕೊನೆಗೂ ಅಂತಿಮಗೊಂಡಿದೆ.

ಹೇಗಾದರೂ ಮಾಡಿ ಈ ಬಾರಿ ಕೆ.ಹೆಚ್.ಮುನಿಯಪ್ಪರನ್ನು ಮಣಿಸಬೇಕೆಂದು ರಣತಂತ್ರ ಹೂಡಿರುವ ಬಿ.ಜೆ.ಪಿ ಅಭ್ಯರ್ಥಿಯನ್ನು ಅಂತಿಮಗೊಳಿಸಿದೆ. ಈ ಬಾರಿ ಬೆಂಗಳೂರು ಕಾಡುಗೋಡಿ ಕಾರ್ಪೊರೇಟರ್ ಎಸ್.ಮುನಿಸ್ವಾಮಿ ಕೋಲಾರದಿಂದ ಕಣಕ್ಕಿಳಿಯಲಿದ್ದಾರೆ.

ಒಂದೆಡೆ ಮುನಿಸ್ವಾಮಿಯವರು ಅಭ್ಯರ್ಥಿಯಾಗಿ ಆಯ್ಕೆ ಆದದ್ದೇ ವಿಶೇಷ ಹಾಗೂ ಆಶ್ಚರ್ಯಕರ, ಶಾಸಕ ಅಶ್ವತ್ ನಾರಾಯಣ್ ಸಲಹೆಯಂತೆ ನೆನ್ನೆ ಮಧ್ಯಾಹ್ನವಷ್ಟೇ ಸೂಚಿಸಿದ್ದ ಮುನಿಸ್ವಾಮಿಯವರ ಹೆಸರು ಬಿ.ಎಸ.ವೈ ಕೈ ತಲುಪಿತ್ತು.

ಇದನ್ನೂ ಓದಿ : ಬೆಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿ ಇನ್ನೂ ಫೈನಲ್ ಇಲ್ಲ ?

ಅದು ಹೈಕಮಾಂಡ್ ಕೈ ತಲುಪಿ ಕೇವಲ ೩ ಗಂಟೆಯಲ್ಲಿ ಮುನಿಸ್ವಾಮಿಯವರ ಹೆಸರು ಓಕೆ ಯಾಗಿತ್ತು. ಮುನಿಸ್ವಾಮಿಯವರು ಮೂಲತಹ ಕೋಲಾರ ಜಿಲ್ಲೆಯ ಟೇಕಲ್ ಹೋಬಳಿಯ ಮಾಲೂರು ತಾಲೂಕಿನ ಯಲುವಗುಳಿ ಗ್ರಾಮದವರು, ಆದ್ದರಿಂದ ಅಲ್ಲಿನ ಹಾಗು ಹೋಗುಗಳು ಅವರಿಗೆ ಗೊತ್ತಿದೆ, ಸ್ಥಳೀಯ ಸಮಸ್ಯೆಗಳ ಅರಿವಿದೆ ಎಂಬ ಕಾರಣಕ್ಕೆ ಟಿಕೆಟ್ ಗೆ ಒಪ್ಪಿಗೆ ಸಿಕ್ಕಿದೆ.

ಇನ್ನು ಈ ಬಗ್ಗೆ ಸ್ವತಃ ಮಾತನಾಡಿದ ಎಸ್.ಮುನಿಸ್ವಾಮಿಯವರು ” ಕೋಲಾರ ನನ್ನ ಮನೆ, ನನ್ನ ಗ್ರಾಮ , ಕೋಲಾರಮ್ಮನ ಆಶೀರ್ವಾದ ನನ್ನ ಮೇಲೆ ಇದೆ. ಇಲ್ಲಿನ ಜನರ ಸಮಸ್ಯೆಗಳು ಏನು ? ನನ್ನ ಮನೆಯ ಸಮಸ್ಯೆಗಳು ಏನು ? ಎಂಬ ಅರಿವು ನನಗಿದೆ. ನನ್ನ ಜನರಿಗೆ ಏನು ಬೇಕೆಂಬುದು ನನಗೆ ಗೊತ್ತಿದೆ, ಅವರ ಸೇವೆಗೆ ನಾನು ಸಿದ್ದ. ಗೆಲುವು ಖಚಿತ ಎಂದಿದ್ದಾರೆ..

Follow Us on : Google News | Facebook | Twitter | YouTube