ಮಾಧ್ಯಮದವರನ್ನ ಹೊರಗಿಟ್ಟು ಸಭೆ ನಡೆಸಿದ ಸಂಸದ ಬಿ.ವೈ.ರಾಘವೇಂದ್ರ

BY Raghavendra, blocked the media and convened the meeting

ಮೆಗ್ಗಾನ್ ಆಸ್ಪತ್ರೆಯಲ್ಲಿ ಖಾಲಿ ಇರುವ ರೆಡಿಯಾಲಜಿ ತಂತ್ರಜ್ಞರ ಹುದ್ದೆಯನ್ನ ಭರ್ತಿ ಮಾಡಿಕೊಳ್ಳಲು ಹಾಗೂ ಕಾಲೇಜಿನ ಸಮಸ್ಯೆ ಕುರಿತು ಚರ್ಚೆ ನಡೆಸುವಂತೆ ಸಚಿವ ಈಶ್ವರಪ್ಪರ ಸೂಚನೆ ಮೇರೆಗೆ ಸಂಸದ ಬಿ.ವೈ.ರಾಘವೇಂದ್ರ ನೇತೃತ್ವದಲ್ಲಿ  ಸಭೆ ನಡೆದಿದ್ದು, ಮಾಧ್ಯಮದವರನ್ನ ಹೊರಗಿಟ್ಟು ಈ ಸಭೆಯನ್ನ ನಡೆಸಲಾಯಿತು.

ರೇಡಿಯಾಲಜಿಯ 133 ಹುದ್ದೆ ಖಾಲಿ ಇದ್ದು, ರೋಸ್ಟರ್ ಪದ್ದತಿ ಮೂಲಕ ಹುದ್ದೆ ಭರ್ತಿ ಮಾಡಿಕೊಳ್ಳಿ,  ಶಾರ್ಟೇಜ್ ಬಿದ್ದಲ್ಲಿ ಹೊರಗುತ್ತಿಗೆ ಮೂಲಕ ನೇಮಿಸಿಕೊಳ್ಳಬೇಕು.

ಈ ಕುರಿತು ಶೀಘ್ರವೇ ಟೆಂಡರ್ ಕರೆಯಲು ಸೂಚಿಸಲಾಗಿತ್ತು.

ಮಾಧ್ಯಮದವರನ್ನ ಹೊರಗಿಟ್ಟು ಸಭೆ ನಡೆಸಿದ ಸಂಸದ ಬಿ.ವೈ.ರಾಘವೇಂದ್ರ - Kannada News

ಈ ನಿರ್ಣಯವನ್ನ ಏ.18 ರಂದು ನಡೆದ ಸಭೆಯಲ್ಲಿ ಏ.20 ರಂದು ಸಭೆ ನಡೆಸಿ ಟೆಂಡರ್ ಕರೆಯುವ ಬಗ್ಗೆ ತೀರ್ಮಾನಿಸಲು ಸಚಿವರ ಸೂಚಿಸಿದ್ದರು. ಆದರೆ ನಡೆದ ಸಭೆಯಲ್ಲಿ ಮಾಧ್ಯಮದವರನ್ನ ಹೊರಗಿಟ್ಟು ಸಂಸದರು ಸಭೆ ನಡೆಸಿದ್ದು ಯಾಕೆ ಎಂಬುದು ಗೊತ್ತಾಗಲಿಲ್ಲ.

ಹೊರಗಡೆ ಸುಮಾರು 2 ಗಂಟೆಗೂ ಅಧಿಕ ಸಮಯ ಪತ್ರಕರ್ತರು ಕಾಯ್ದು ಕುಳಿತು ನಂತರ ಸಂಸದರ ಬೈಟ್ ಪಡೆದುಕೊಳ್ಳಲಾಯಿತು. ಮಾತು ಎತ್ತಿದರೆ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಮಾಡಲಾಗುತ್ತಿದೆ ಎನ್ನುವ ಸಂಸದರು ಈ ಸಭೆಯಲ್ಲಿ ನಡೆದ ಮಹತ್ವದ ನಿರ್ಣಯಗಳ ಬಗ್ಗೆ ಸಾರ್ವಜನಿಕರಿಗೆ ಗೊತ್ತಾಗಲು ಮಾಧ್ಯಮದ ಮೂಲಕ ಹೋಗಬೇಕೆಂಬ ಮಾಹಿತಿ ತಿಳಿಯದೆ ಇರುವುದು ಸೋಜಿಗ !

Follow us On

FaceBook Google News

Read More News Today