ಬಕ್ರೀದ್ ! ಶಾಂತಿ ಭದ್ರತೆಯ ಮೇಲೆ ಕಣ್ಣಿರಿಸಿದ ಯಡಿಯೂರಪ್ಪ

CM Warning to many departments including police

ಬಕ್ರೀದ್ ! ಶಾಂತಿ ಭದ್ರತೆಯ ಮೇಲೆ ಕಣ್ಣಿರಿಸಿದ ಯಡಿಯೂರಪ್ಪ – CM Warning to many departments including police

ಬಕ್ರೀದ್ ! ಶಾಂತಿ ಭದ್ರತೆಯ ಮೇಲೆ ಕಣ್ಣಿರಿಸಿದ ಯಡಿಯೂರಪ್ಪ

  • ಬಕ್ರೀದ್ ಸಮಯದಲ್ಲಿ ಬಂದೋಬಸ್ತ್ ಹೆಚ್ಚಿಸಿ, ಪೊಲೀಸ್ ಅಧಿಕಾರಿಗಳಿಗೆ ಸಿಎಂ ಯಡಿಯೂರಪ್ಪ ಸೂಚನೆ.
ಬೆಂಗಳೂರು : ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಅತ್ಯಾಧುನಿಕ ಭದ್ರತಾ ಕಣ್ಗಾವಲು ಹೆಚ್ಚಿಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಪೊಲೀಸ್ ಮುಖ್ಯಸ್ಥರಿಗೆ ನಿರ್ದೇಶನ ನೀಡಿದ್ದಾರೆ. ಸಚಿವಾಲಯದಲ್ಲಿ ಹಣಕಾಸು ಮತ್ತು ವಸತಿ ಇಲಾಖೆಗಳ ಪ್ರಗತಿಯನ್ನು ಪರಿಶೀಲಿಸಿದ ನಂತರ ಪ್ರತ್ಯೇಕವಾಗಿ ಪೊಲೀಸ್ ಅಧಿಕಾರಿಗಳ ಜೊತೆ ಸಮಾಲೋಚಿಸಿದರು.
ಶಾಂತಿಪಾಲನಾ ಪರಿಸ್ಥಿತಿಯ ಬಗ್ಗೆ ಜಿಲ್ಲಾವಾರು ವಿಮರ್ಶೆ ಪಡೆದರು. ಡಿಜಿಪಿ ಸೀಲಮಣಿ ರಾಜು ಸಿಎಂ ಗೆ ಪರಿಸ್ಥಿತಿಯನ್ನು ಕೂಲಂಕಷವಾಗಿ ವಿವರಿಸಿದರು. ಬೆಂಗಳೂರು ನಗರದಲ್ಲಿ ದರೋಡೆ ಮತ್ತು ಹತ್ಯೆಗಳಿಗೆ ಸಂಪೂರ್ಣ ಬ್ರೇಕ್ ಹಾಕಲು ಸಿ.ಎಂ ಸೂಚಿಸಿದರು.

ಆರ್ಥಿಕ ಪರಿಸ್ಥಿತಿ ಕೆಟ್ಟದಾಗಿದೆ

ರಾಜ್ಯದ ಆರ್ಥಿಕ ಪರಿಸ್ಥಿತಿ ಸುಧಾರಿಸಬೇಕಾಗಿದೆ ಎಂದ ಬಿ.ಎಸ್.ವೈ 
ಹಣಕಾಸು ಇಲಾಖೆಯ ಮೇಲಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯಭಾಸ್ಕರ್ ಸೇರಿದಂತೆ ಉನ್ನತ ಅಧಿಕಾರಿಗಳು ಭಾಗವಹಿಸಿದ್ದರು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಯಡಿಯೂರಪ್ಪನವರು ಮುಂದಿನ ದಿನಗಳಲ್ಲಿ ಆರ್ಥಿಕ ಪರಿಸ್ಥಿತಿ ಸುಧಾರಿಸಬೇಕಾಗಿದೆ, ಹಾಗೂ ಆದಷ್ಟು ಬೇಗ ಸುಧಾರಿಸುತ್ತದೆ ಎಂದು ಭರವಸೆ ವ್ಯಕ್ತಪಡಿಸಿದರು. ರೈತ ಸಾಲ ಮತ್ತು ನೇಕಾರರ ಕಲ್ಯಾಣ ಮುಂತಾದ ನಿರ್ಣಯಗಳ ಹಿನ್ನೆಲೆಯಲ್ಲಿ, ಆರ್ಥಿಕ ಸಂಪನ್ಮೂಲಗಳ ಕ್ರೋಡೀಕರಣದ ಬಗ್ಗೆ ಗಮನಹರಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು..////