ರಾಜ್ಯದಲ್ಲಿ ಕೈ ಪಕ್ಷ ಗೆಲುವು, ಸ್ಥಾನಗಳು ಎಷ್ಟು? ಕುತೂಹಲಕಾರಿ ಸುದ್ದಿ ಸ್ಪೋಟ

Congress wins in state, you Know How many seats ?

ರಾಜ್ಯದಲ್ಲಿ ಕೈ ಪಕ್ಷ ಗೆಲುವು ಸ್ಥಾನಗಳು ಎಷ್ಟು? ಕುತೂಹಲಕಾರಿ ಸುದ್ದಿ ಸ್ಪೋಟ – Congress wins in state, you Know How many seats ?

ರಾಜ್ಯದಲ್ಲಿ ಕೈ ಪಕ್ಷ ಗೆಲುವು, ಸ್ಥಾನಗಳು ಎಷ್ಟು? ಕುತೂಹಲಕಾರಿ ಸುದ್ದಿ ಸ್ಪೋಟ
ರಾಜ್ಯದಲ್ಲಿ ಲೋಕಸಭಾ ಸಮರದ ಎರಡು ಹಂತಗಳಲ್ಲಿ ಮತದಾನ ನಡೆದಿದ್ದು, ಅಭ್ಯರ್ಥಿಗಳ ಭವಿಷ್ಯ ವಿದ್ಯುನ್ಮಾನ ಮತಯಂತ್ರಗಳಲ್ಲಿ ಅಡಗಿದೆ. ಮೇ 23 ರಂದು ಫಲಿತಾಂಶ ಹೊರ ಬೀಳಲಿದ್ದು, ಅದಕ್ಕೂ ಮುನ್ನವೇ ರಾಜಕೀಯ ಪಕ್ಷಗಳ ನಾಯಕರು ಸೋಲು-ಗೆಲುವಿನ ಲೆಕ್ಕಾಚಾರ ಹಾಕುತ್ತಿದ್ದಾರೆ.
ಯಾವ ಜಿಲ್ಲೆ ಯಾರ ಫಾಲಾಗಲಿದೆ, ಮತದಾರರು ನಿಜಕ್ಕೂ ಯಾರಿಗೆ ಒಲಿದಿದ್ದಾರೆ, ಎಂದು ಹೇಳುವುದು ಕಷ್ಟಸಾಧ್ಯವಾದರೂ. ರಾಜಕೀಯ ನಾಯಕರುಗಳು ಅದಾಗಲೇ ಸೋಲು ಗೆಲುವಿನ ಲೆಕ್ಕಾಚಾರ ಮಾಡಿದ್ದಾರೆ.ರಾಜ್ಯದಲ್ಲಿ ಕೈ ಪಕ್ಷ ಗೆಲುವು, ಸ್ಥಾನಗಳು ಎಷ್ಟು ಕುತೂಹಲಕಾರಿ ಸುದ್ದಿ ಸ್ಪೋಟ
ಕೈ ನಾಯಕರು, ಪಕ್ಷದ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಅವರಿಗೆ ವರದಿಯೊಂದನ್ನು ಸಲ್ಲಿಸಿದ್ದು, ಅದರ ಪ್ರಕಾರ ಪಕ್ಷ 10 ರಿಂದ 11 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎನ್ನಲಾಗಿದೆ. 7 ಕ್ಷೇತ್ರಗಳಲ್ಲಿ ಗೆಲುವಿನ ಸಾಧ್ಯತೆ 50-50 ಇದೆ ಎಂದು ವರದಿ ವಿವರಿಸಿದೆ. ಬಾರಿ ಕುತೂಹಲ ಮೂಡಿಸಿರುವ ಈ ವರದಿಯತ್ತ ಎಲ್ಲರ ಚಿತ್ತ ನೆಟ್ಟಿರುವುದು ಸುಳ್ಳಲ್ಲ.
ಕಾಂಗ್ರೆಸ್ ಗೆಲ್ಲುವ ಕ್ಷೇತ್ರಗಳ ಪಟ್ಟಿಯಲ್ಲಿ ಕಲಬುರಗಿ, ಬೀದರ್, ರಾಯಚೂರು, ಕೊಪ್ಪಳ, ಚಿಕ್ಕೋಡಿ, ಹಾವೇರಿ, ಬಾಗಲಕೋಟೆ, ಚಿತ್ರದುರ್ಗ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ ಹಾಗೂ ಚಾಮರಾಜನಗರ ಕ್ಷೇತ್ರಗಳಿದ್ದು, ಗೆಲ್ಲುವ ಸಾಧ್ಯತೆ ಇರುವ 50-50 ಪಟ್ಟಿಯಲ್ಲಿ ಮೈಸೂರು, ಧಾರವಾಡ, ಬಳ್ಳಾರಿ, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಕೇಂದ್ರ ಹಾಗೂ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರಗಳಿವೆ.
ಏನಾದರೂ ಖಚಿತ ಫಲಿತಾಂಶಕ್ಕಾಗಿ ಮೇ 23ರ ವರೆಗೆ ಕಾಯಲೇಬೇಕು.//// ವರದಿ : ರವಿಕುಮಾರ ಮುರಾಳರಾಜ್ಯದಲ್ಲಿ ಕೈ ಪಕ್ಷ ಗೆಲುವು, ಸ್ಥಾನಗಳು ಎಷ್ಟು ಕುತೂಹಲಕಾರಿ ಸುದ್ದಿ ಸ್ಪೋಟ