ಲೋಕ ತೀರ್ಪಿಗೆ ಕ್ಷಣಗಣನೆ, ಏನಾಗುತ್ತೆ ಫಲಿತಾಂಶ ಲೆಕ್ಕಾಚಾರ

Countdown to the Lok Sabha election Result

ಲೋಕ ತೀರ್ಪಿಗೆ ಕ್ಷಣಗಣನೆ, ಏನಾಗುತ್ತೆ ಫಲಿತಾಂಶ ಲೆಕ್ಕಾಚಾರ – Countdown to the Lok Sabha election Result

ಲೋಕ ತೀರ್ಪಿಗೆ ಕ್ಷಣಗಣನೆ, ಏನಾಗುತ್ತೆ ಫಲಿತಾಂಶ ಲೆಕ್ಕಾಚಾರ

ತೀವ್ರ ಕುತೂಹಲ ಮೂಡಿಸಿರುವ ಲೋಕಸಭಾ ಚುನಾವಣೆಯ ತೀರ್ಪಿಗೆ ಇಂದು ಉತ್ತರ ಸಿಗಲಿದೆ. ಇನ್ನೇನು ಮತ ಎಣಿಕೆಗೆ ಕ್ಷಣಗಣನೆ ನಡೆಯುತ್ತಿದ್ದು, ಮತದಾರನ ಮ್ಯಾಜಿಕ್ ಮತಗಳು ಯಾರ ಫಾಲಿಗೆ ಎಂಬುವ ಅಧಿಕೃತ ಉತ್ತರ ಇಂದು ಸಂಜೆ ವೇಳೆಗೆ ಗೊತ್ತಾಗಲಿದೆ.

ಪ್ರಧಾನಿ ಮೋದಿ ಮತ್ತೊಮ್ಮೆ ತಮ್ಮ ಪ್ರಧಾನಿ ಹಾದಿ ಇಡಿಯುತ್ತಾರಾ ? ರಾಹುಲ್ ಗಾಂಧಿ ಕಾರ್ಯ ತಂತ್ರ ವರ್ಕೌಟ್ ಆಗುತ್ತಾ ಎಲ್ಲಾ ಕುತೂಹಲಗಳಿಗೆ ಇಂದು ತೆರೆ ಬೀಳಲಿದೆ.

ಈ ನಡುವೆ ಮುಖ್ಯಮಂತ್ರಿ ಕುಮಾರಸ್ವಾಮಿ ಮಾಜಿ ಪ್ರಧಾನಿ ದೇವೇಗೌಡರು ಸೇರಿ ಕುಟುಂಬ ಸಮೇತ ಮಗ ನಿಖಿಲ್ ಹೆಸರಿನಲ್ಲಿ ವಿಶೇಷ ಪೂಜೆ ಅರ್ಚನೆ ಮಾಡಿಸಿದ್ದಾರೆ. ಇನ್ನೊಂದೆಡೆ ಹೆಚ್.ಡಿ.ರೇವಣ್ಣ ತಮ್ಮ ಮಗ ಪ್ರಜ್ವಲ್ ಗೆಲುವಿಗಾಗಿ ಟೆಂಪಲ್ ರನ್ ನಡೆಸಿದ್ದಾರೆ.

ಇನ್ನೊಂದೆಡೆ ಲೋಕಸಭಾ ಚುನಾವಣೆಯ ಫಲಿತಾಂಶವಾದ ಇಂದಿನ ಕಳೆದ ವರ್ಷ ಅಂದರೆ, ಕಳೆದ ವರ್ಷ ಇದೆ ತಿಂಗಳ ೨೩ ರಂದು ರಾಜ್ಯದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಸೇರಿ ಸಮ್ಮಿಶ್ರ ಸರ್ಕಾರ ರೂಪಿಸಿತ್ತು. ಇದೀಗ ವರ್ಷ ಪೂರೈಸಿದೆ.////