ದರ್ಶನ್ ಮತ್ತು ಯಶ್ ಪ್ರಚಾರ ಎಲ್ಲೆಲ್ಲಿ, ಇಲ್ಲಿದೆ ನೋಡಿ ಡಿಟೈಲ್ಸ್

Darshan and Yash poll campaign, Where and when, see Details

Online News Today Team

ಮಂಡ್ಯದಲ್ಲಿ ಅದಾಗಲೇ ರಣಕಹಳೆ ಮೊಳಗಿಸುತ್ತಿರುವ ಸ್ಟಾರ್ ಗಳು, ಇಂದು ಭರ್ಜರಿ ಪ್ರಚಾರಕ್ಕೆ ಸಿದ್ಧತೆ ಮಾಡಿಕೊಂಡಿದ್ದಾರೆ.ದರ್ಶನ್ ಮತ್ತು ಯಶ್ ಬೇರೆ ಬೇರೆ ಕಡೆಯಲ್ಲಿ ಪ್ರಚಾರ ನಡೆಸಿ ಮತಬೇಟೆ ನಡೆಸಲಿದ್ದಾರೆ.

ಆಗಾದರೆ ಬನ್ನಿ ಇಂದು ದರ್ಶನ್ ಎಲ್ಲೆಲ್ಲಿ ಪ್ರಚಾರ ನಡೆಸ್ತಾರೆ, ನೋಡೋಣ.

ಮಂಡ್ಯದಲ್ಲಿ ಪ್ರಚಾರ ಮಾಡಲಿರುವ ದರ್ಶನ್, ಬೆಳಿಗ್ಗೆ ೯ ಗಂಟೆಗೆ ಮತಬೇಟೆಗೆ ಇಳಿಯಲಿದ್ದಾರೆ. ಬೆಳಿಗ್ಗೆ ಮೊದಲು ಅರಳಿಮರ ಶುಗರ್ ಟೌನ್ ನಿಂದ ಶುರುವಾಗುವ ಪ್ರಚಾರ, ೯.೩೦ ಕ್ಕೆ ಜಬ್ಬಾರ್ ಸರ್ಕಲ್, ೯.೪೫ ಕ್ಕೆ ಕಾಮನ ಸರ್ಕಲ್ , ೧೦ ಘಂಟೆಗೆ ಹೊಳಲು ಸರ್ಕಲ್, ೧೦.೩೦ ಕ್ಕೆ ಬೀಡಿ ಕಾಲೋನಿ ನಂತರ ಸಾಗುವ ಸಾರಥಿ ಬೆಳಿಗ್ಗೆ ೧೧ ಕ್ಕೆ ಶನಿಮಹಾತ್ಮ ದೇವಸ್ಥಾನ, ೧೧.೧೫ಕ್ಕೆ ಮುಸ್ಲಿಂ ಬ್ಲಾಕ್ ಹಾಗೂ ೧೧.೩೦ ಕ್ಕೆ ರಾಮಮಂದಿರ ಕಲ್ಲಹಳ್ಳಿ ಮೂಲಕ ಸಾಗಿ, ೧೨ ಕ್ಕೆ ಗುಳಿ ಗೌಡ ಸರ್ಕಲ್ ೧೨.೩೦ ಕ್ಕೆ ಮರಿಗೌಡ ಬಡಾವಣೆ, ೧೨.೪೫ ಕ್ಕೆ ಚಾಮುಂಡೇಶ್ವರಿ ಬಡಾವಣೆಯಲ್ಲಿ ಪ್ರಚಾರ ನಡೆಸಲಿದ್ದಾರೆ.

ಅದಾದ ಬಳಿಕ ಮಧ್ಯಾಹ್ನ ೧ ಘಂಟೆಗೆ ಶಂಕರನಗರ ಆಟೋ ನಿಲ್ದಾಣ, ೧.೧೫ ಕ್ಕೆ ಗಾಂಧಿನಗರ ಗಣಪತಿ ದೇವಸ್ಥಾನದ ಮೂಲಕ ಸಾಗುವ ಸಾರಥಿ ರಥ, ೧.೩೦ಕ್ಕೆ ಆದರ್ಶ ಸ್ಕೂಲ್, ೧.೪೫ ಕ್ಕೆ ಬಿಸಿಲು ಮಾರಮ್ಮ ದೇವಸ್ಥಾನ, ೨ಗಂಟೆಗೆ ಹಾಲಹಳ್ಳಿ,೨.೩೦ಕ್ಕೆ ನಯಾಜ್ ಮನೆ ಬಳಿ ಸಾಗಿ, ಪಿ.ಕೆ.ಕಾಲೋನಿ , ತೆಮಿಳು ಕಾಲೋನಿ, ಶ್ರೀನಿವಾಸ ದೇವಸ್ಥಾನ,ತಾವರೆಗೆರೆ, ಚಲುವಯ್ಯ ಪಾರ್ಕ್, ಮುನೀರ್ ಸರ್ಕಲ್, ಅರಳಿಮರ ಸ್ಕೂಲ್, ಮಾರುತಿ ದೇವಸ್ಥಾನ,ಚಾಮುಂಡೇಶ್ವರಿ ದೇವಸ್ಥಾನ, ರಂಗಮಂದಿರ, ಹೊನ್ನಯ್ಯ ಬಡಾವಣೆಯಲ್ಲಿ ಪ್ರಚಾರ ಮಾಡುವ ಮೂಲಕ ತಮ್ಮ ದಿನದ ಪ್ರಚಾರ ಕಾರ್ಯ ಮುಗಿಸಲಿದ್ದಾರೆ.

ರಾಖಿ ಬಾಯ್ ಯಶ್ ಪ್ರಚಾರ ಎಲ್ಲೆಲ್ಲಿ ?

ಮಂಡ್ಯ ತಾಲೂಕಿನಲ್ಲಿ ಪ್ರಚಾರ ನಡೆಸಲಿರುವ ರಾಖಿಬಾಯ್ ಪ್ರಚಾರ ಕಾರ್ಯದ ದಿನಚರಿ ಬೆಳಿಗ್ಗೆ ೯ಕ್ಕೆ ಪ್ರಾರಂವಾಗಲಿದ್ದು, ಬೆಳಿಗ್ಗೆ ೯ ಕ್ಕೆ ಉರಮಾರಸಗೆರೆ ಯಿಂದ ಪ್ರಾರಂಭಗೊಂಡು , ೯.೩೦ಕ್ಕೆ ತೂಬಿನಕೆರೆ, ೧೦ ಘಂಟೆಗೆ ಎಲೆಚಾಕನಹಳ್ಳಿ, ೧೦.೩೦ಕ್ಕೆ ಯಲಿಯೂರು ಮುಖೇನ, ಕಾಳೇನಹಳ್ಳಿ, ಯಲಿಯೂರು ಸರ್ಕಲ್, ಸಿದ್ಧಯ್ಯನ ಕೊಪ್ಪಲು, ಇಂಡವಾಳು, ಕಿರಗಂದೂರು, ಕ್ಯಾತುಂಗೆರ, ಬೇವಿನಹಳ್ಳಿ, ಕೊತ್ತತ್ತಿ, ಮಂಗಲ, ಹೆಬ್ಬಹಕವಾಡಿ, ಲೋಕಸರ, ಪುರ ತಗ್ಗಳ್ಳಿ, ಹಳುವಾಡಿ, ಚೀರನಹಳ್ಳಿ, ಹನಿಯಂಬಾಡಿ, ಸಂತೆ ಕಸಲಗೆರೆ, ಕಾರಸವಾಡಿ, ಯತ್ತಗದಹಳ್ಳಿ, ಭೂತನ ಹೂಸುರು, ಸ್ನಾಗಹಳ್ಳಿ, ಹೆಮ್ಮಿಗೆ ಅಲ್ಲಿ ಪ್ರಚಾರ ಮಾಡುವ ಮೂಲಕ ತಮ್ಮ ಪ್ರಚಾರ ಕಾರ್ಯ ಮುಗಿಸುತ್ತಾರೆ.

Follow Us on : Google News | Facebook | Twitter | YouTube