ಸರ್ಕಾರ ಪತನದ ನಂತರ ದೇವೇಗೌಡರ ಮೊದಲ ಪ್ರತಿಕ್ರಿಯೆ

Deve Gowda's first reaction after govt fall

ಸರ್ಕಾರ ಪತನದ ನಂತರ ದೇವೇಗೌಡರ ಮೊದಲ ಪ್ರತಿಕ್ರಿಯೆ – Deve Gowda’s first reaction after govt fall

ಸರ್ಕಾರ ಪತನದ ನಂತರ ದೇವೇಗೌಡರ ಮೊದಲ ಪ್ರತಿಕ್ರಿಯೆ

ಬೆಂಗಳೂರು : ಕಾಂಗ್ರೆಸ್ ಮತ್ತು ಜೆಡಿಎಸ್ ಸರ್ಕಾರ ಪತನಗೊಂಡಿದೆ, ಹೊಸ ಸರ್ಕಾರದ ಪ್ರಮಾಣ ವಚನದ ಸಿದ್ಧತೆ ಕೂಡ ನಡೆಯುತ್ತಿದೆ, ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಹದಿನಾಲ್ಕು ತಿಂಗಳು ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಅಧಿಕಾರ ನಿರ್ವಹಿಸಿತ್ತು.

ಮೊದಲ ಬಾರಿಗೆ ಈ ಬಗ್ಗೆ ಪ್ರತಿಕ್ರಿಯಿಸಿದ ಜೆಡಿಎಸ್ ಮುಖ್ಯಸ್ಥ ಮತ್ತು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರವರು ಸಮ್ಮಿಶ್ರ ಸರ್ಕಾರ ರಚನೆ ಅಥವಾ ಸರ್ಕಾರದ ಪತನದ ಬಗ್ಗೆ ಯಾವುದೇ ಹೇಳಿಕೆ ಅಥವಾ ಅಭಿಪ್ರಾಯ ತಿಳಿಸುವುದಿಲ್ಲ ಎಂದು ಹೇಳಿದರು. ವಿಶ್ವಾಸ ಮತಕ್ಕೆ ಸಹಕರಿಸದ ಶಾಸಕರು ಹಾಗೂ ಸಚಿವರನ್ನು ದೂಷಿಸುವುದಿಲ್ಲವೆಂದೂ ಹೇಳಿದರು.

ಇದಕ್ಕೆ ಯಾರನ್ನೂ ಕಾರಣವಾಗಿಸಲು ಬಯಸುವುದಿಲ್ಲ ಎಂದು ಹೇಳಿದ ಜೆಡಿಎಸ್ ವರಿಷ್ಠ ದೇವೇಗೌಡರು, ” ಮಾಜಿ ಮುಖ್ಯಮಂತ್ರಿಗಳು ಮತ್ತು ಇತರ ಹಿರಿಯ ಮಂತ್ರಿಗಳು ಸೇರಿದಂತೆ ಯಾರನ್ನೂ ಹೊಣೆ ಮಾಡುವುದಿಲ್ಲ, ಆದರೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಸಿಕ್ಕ ಅವಧಿಯಲ್ಲಿ ಅವರು ಶ್ರಮಿಸಿದ್ದಾರೆ ಮತ್ತು ನೀಡಿರುವ ಭರವಸೆಗಳನ್ನು ಈಡೇರಿಸಲು ಶ್ರಮಿಸಿದ್ದಾರೆ ಎಂದು ಹೇಳಿದರು.

ಈ ನಡುವೆ ನಗರದಲ್ಲಿ ನಡೆದ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್.ಡಿ.ಕುಮಾರಸ್ವಾಮಿ, ” ಸರ್ಕಾರ ಪತನವಾಗಿದೆ, ಆದರೆ ಪಕ್ಷವಲ್ಲ, ರಾಜ್ಯದಾದ್ಯಂತ ಪಕ್ಷವನ್ನು ಸಂಘಟನೆ ಮಾಡುವುದಾಗಿ ತಿಳಿಸಿದ್ದಾರೆ. ಮೈತ್ರಿ ಸರ್ಕಾರದ ಅವಧಿಯಲ್ಲಿ ಸಾಕಷ್ಟು ಕಾರ್ಯಗಳನ್ನು ಮಾಡಿದ್ದು ಆ ಕೆಲಸದ ಆಧಾರವಹಿಸಿ ಪಕ್ಷ ಸಂಘಟಿಸುತ್ತೇವೆ ಎಂದಿದ್ದಾರೆ.////

Web Title : Deve Gowda’s first reaction after govt fall