ಎಂಟಿಬಿ ಮನೆಗೆ ಡಿಕೆಶಿ, ರಾಜೀನಾಮೆ ವಾಪಸ್ ಪಡೆಯಲು ಮನವೊಲಿಕೆ

DK Shivakumar visits the MTB Nagaraj house

ಎಂಟಿಬಿ ಮನೆಗೆ ಡಿಕೆಶಿ, ರಾಜೀನಾಮೆ ವಾಪಸ್ ಪಡೆಯಲು ಮನವೊಲಿಕೆ – DK Shivakumar visits the MTB Nagaraj house

ಎಂಟಿಬಿ ಮನೆಗೆ ಡಿಕೆಶಿ, ರಾಜೀನಾಮೆ ವಾಪಸ್ ಪಡೆಯಲು ಮನವೊಲಿಕೆ

ಮೈತ್ರಿ ಸರ್ಕಾರ ಉಳಿಸಿಕೊಳ್ಳಲು ಈಗಾಗಲೇ ಡಿಕೆಶಿ ಕಸರತ್ತು ಆರಂಭಿಸಿದ್ದಾರೆ, ಇಂದು ಬೆಳ್ಳಂಬೆಳ್ಳಗೆ ಕೋಳಿ ಕೂಗುವ ಮೊದಲೇ ಮುಂಜಾನೆ ಐದು ಘಂಟೆಗೆ ಡಿಕೆ ಶಿವಕುಮಾರ್ ಬೆಂಗಳೂರಿನ ಗರುಡಾಚಾರ್ ಪಾಳ್ಯದ ಎಂಟಿಬಿ ನಾಗರಾಜ್ ಮನೆ ತಲುಪಿದ್ದಾರೆ.

ನೆನ್ನೆಯಷ್ಟೇ ಮುಖ್ಯಮಂತ್ರಿ ಕುಮಾರಸ್ವಾಮಿ ವಿಶ್ವಾಸಮತದ ವಿಷಯ ಪ್ರಸ್ತಾಪ ಮಾಡಿದ್ದರು, ಅದಾಗಲೇ ಇಂದಿನಿಂದಲೇ ಅತೃಪ್ತ ಶಾಸಕರ ಮನವೊಲಿಕೆಯ ಕಸರತ್ತು ಶುರುವಾಗಿದೆ.

ಮುಂಜಾನೆ ಐದು ಘಂಟೆಗೆ ಕಸರತ್ತು ಶುರುವಾಗಿದೆ ಮೇಲೆ ಸಾಮಾನ್ಯವಾಗಿ ನಾವೆಲ್ಲಾ ಊಹಿಸಬಹುದು, ಎಷ್ಟರ ಮಟ್ಟಿಗೆ ರಾಜಕೀಯ ಚಟುವಟಿಕೆಗಳು ಚುರುಕುಗೊಂಡಿವೆ ಎಂಬುದನ್ನು. ನಸುಕಿನ ಐದು ಸತತ ಎರಡು ತಾಸುಗಳ ತನಕ ಡಿಕೆ ಶಿವಕುಮಾರ್ , ಎಂಟಿಬಿ ನಾಗರಾಜ್ ರವರ ಮನವೊಲಿಕೆಗೆ ಕಸರತ್ತು ನಡೆಸಿದ್ದಾರೆ. ರಾಜೀನಾಮೆ ವಾಪಸ್ ಪಡೆಯುವಂತೆ ಒತ್ತಾಯಿಸಿದ್ದಾರೆ.

ಎಂಟಿಬಿ ಅವರ ಮನೆಯಲ್ಲಿಯೇ ಮೊಕ್ಕಾಂ ಹೂಡಿರುವ ಡಿಕೆಶಿ ಶತಾಯಗತಾಯ ಹೇಗಾದರೂ ಮಾಡಿ ಮೈತ್ರಿ ಸರ್ಕಾರ ಉಳಿಸಿಕೊಳ್ಳಲೇ ಬೇಕೆಂದು, ಮನವೊಲಿಸಲು ನಸುಕಿನಿಂದಲೇ ಕಸರತ್ತು ನಡೆಸಿದ್ದಾರೆ.

ವಸತಿ ಖಾತೆ ನಿಭಾಯಿಸುತ್ತಿದ್ದ ಎಂಟಿಬಿ ನಾಗರಾಜ್ ಜೊತೆ ಸಧ್ಯ ಎಲ್ಲಾ ರೀತಿಯ ಚರ್ಚೆ ನಡೆಸಿರುವ ಡಿಕೆಶಿ ಕಸರತ್ತು , ಫಲ ನೀಡುತ್ತದೆಯೋ ಇಲ್ಲವೋ ಕಾದು ನೋಡಬೇಕು.///

WebTitle : DK Shivakumar visits the MTB Nagaraj house