ಬಣ್ಣದ ಮಾತುಗಳನ್ನು ನಂಬಬೇಡಿ, ಸುಮಲತಾ ವಿರುದ್ದ ಸಿ.ಎಂ ವಾಗ್ದಾಳಿ
Do not believe color words, CM against Sumalatha in Mandya
ಬಣ್ಣದ ಮಾತುಗಳನ್ನು ನಂಬಬೇಡಿ, ಸುಮಲತಾ ವಿರುದ್ದ ಸಿ.ಎಂ ವಾಗ್ದಾಳಿ
ಮಂಡ್ಯ : ನಮಗೂ ಈ ಮಂಡ್ಯ ರಾಜಕೀಯ ಬೆಳವಣಿಗೆಗಳ ಬಗೆಗೆ ಬರೆದು ಬರೆದು ಸಾಕಾಗಿ ಹೋಗಿದೆ, ಏನ್ ಮಾಡೋದು ಈಗ ಸಧ್ಯ ಟ್ರೆಂಡಿಂಗ್ ನಲ್ಲಿ ಇರುವುದು ಅದೇ ತಾನೇ. ಒಟ್ಟಿನಲ್ಲಿ ಎಲ್ಲಾ ಮಾಧ್ಯಮಗಳ ಸುದ್ದಿಯನ್ನಾಧರಿಸಿ ಮಂಡ್ಯಾ ಮಹಾಗ್ರಂಥಾನೆ ಹೊರ ತರಬಹುದಾಗಿತ್ತು.
ನಾವಿರಲಿ, ಕೆಲ ಮಾಧ್ಯಮಗಳಂತೂ, ದರ್ಶನ್ ನೀರು ಕುಡಿದರು, ಯಶ್ ಟಾಟಾ ಮಾಡಿದರು , ಸಮಲತಾ ಕೆಮ್ಮಿದರು ಸಹ ದೊಡ್ಡ ಸುದ್ದಿಯನ್ನಾಗಿ ತೋರಿಸಿ, ಮಂಡ್ಯ ರೋಗಕ್ಕೆ ಬಲಿಯಾಗಿದ್ದಾರೆ. ದಿನದಿಂದ ದಿನಕ್ಕೆ ತೀವ್ರ ಕುತೂಹಲ ಮೂಡಿಸುತ್ತಿರುವ ಮಂಡ್ಯ ರಾಜಕೀಯ ಕಣದಲ್ಲಿ ಸಧ್ಯ ಇಂದು ಕೊನೆ ಹಂತದ ಕಸರತ್ತು ನಡೆಯಲಿದೆ.
ಈ ನಡುವೆ ಸುಮಲತಾ ವಿರುದ್ಧ ವಾಗ್ದಾಳಿ ನಡೆಸಿರುವ, ಸಿ.ಎಂ.ಕುಮಾರಸ್ವಾಮಿ, “ನಾನು ನಿರ್ಮಾಪಕನೇ, ಹಲವಾರೂ ಚಿತ್ರಗಳನ್ನು ನಿರ್ಮಿಸಿದ್ದೇನೆ, ಆದರೆ ಎಂದೂ ಇವರಂತೆ ಬಣ್ಣದ ಮಾತುಗಳನ್ನು ಆಡಲಿಲ್ಲ, ಅದು ಸಿನಿಮಾ, ತೆರೆಯ ಮೇಲೆ ಬೇರೆ ನಿಜ ಜೀವನವೇ ಬೇರೆ, ಜಿಲ್ಲೆಯಲ್ಲಿ ರೈತರು ಆತ್ಮಹತ್ಯೆ ಮಾಡಿಕೊಳುತ್ತಿದ್ದಾಗ ಇವರೆಲ್ಲಾ ಎಲ್ಲಿ ಹೋಗಿದ್ರು, ಈಗ ಸ್ವಾಭಿಮಾನದ ಬಗ್ಗೆ ಉದ್ದುದ್ದ ಭಾಷಣ ಮಾಡುತ್ತಿರೋ ಇವರು ಆಗ ಏನ್ ಮಾಡ್ತಿದ್ರು, ಅಪ್ಪ, ಅಮ್ಮ, ಗಂಡನನ್ನು ಕಳೆದು ಕೊಂಡು ವಿಧವೆಯರಾದ ನನ್ನ ತಂಗಿ ತಾಯಂದಿರನ್ನು ಸಂತೈಸಿಲು ಯಾರು ಇರಲಿಲ್ಲ, ಇವರದ್ದು ಬಣ್ಣ ಬಣ್ಣದ ಮಾತು , ಅದು ತೆರೆ ಮೇಲೆ ಮಾತ್ರ ಚಂದ. ಅವರ ಮಾತುಗಳನ್ನು ನಂಭಿ ಮೋಸ ಹೋಗಬೇಡಿ ” ಎಂದು ಗುಡುಗಿದ್ದಾರೆ.
ಒಟ್ಟಿನಲ್ಲಿ ಸ್ಟಾರ್ ವಾರ್, ಹಾಗೂ ಪುಕ್ಕಟ್ಟೆ ಮನೋರಂಜನೆಯನ್ನು ಪಡೆಯುತ್ತಿರುವ ಮಂಡ್ಯ ಜನತೆಯ ನಿಜವಾದ ಒಲವು ಯಾರ ಮೇಲೆ ಇದೆ, ಕಾಡು ನೋಡಬೇಕಾಗಿದೆ..
Follow us On
Google News |